Urfi Javed: ಹೋಟೆಲ್ ಒಳಗೆ ಉರ್ಫಿ ಜಾವೇದ್​ಗೆ ನೋ ಎಂಟ್ರಿ! ಸಿಟ್ಟಾದ ನಟಿ ಮಾಡಿದ್ದೇನು?

ತನ್ನ ವಿಭಿನ್ನ ಫ್ಯಾಶನ್​ನಿಂದಲೇ ಭಾರೀ ಸುದ್ದಿಯಾಗುವ ಉರ್ಫಿ ಜಾವೇದ್, ಅತಿ ಹೆಚ್ಚಾಗಿ ಟ್ರೋಲ್​ಗೆ ಒಳಗಾಗುತ್ತಾರೆ. ಇದೀಗ ಉರ್ಫಿ ಜಾವೇದ್​ಗೆ ಹೋಟೆಲ್ ಒಂದರಲ್ಲಿ ನಿರ್ಬಂಧ ಹೇರಿದ್ದಾರೆ. ಇದಕ್ಕೆ ಸಿಟ್ಟಾದ ನಟಿ ಮಾಡಿದ್ದೇನು ಗೊತ್ತಾ?

First published:

  • 18

    Urfi Javed: ಹೋಟೆಲ್ ಒಳಗೆ ಉರ್ಫಿ ಜಾವೇದ್​ಗೆ ನೋ ಎಂಟ್ರಿ! ಸಿಟ್ಟಾದ ನಟಿ ಮಾಡಿದ್ದೇನು?

    ಹಿಂದಿ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದ ಉರ್ಫಿ ಜಾವೇದ್ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಚಿತ್ರ-ವಿಚಿತ್ರ ಬಟ್ಟೆ ತೊಟ್ಟು ಉರ್ಫಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಾರೆ.

    MORE
    GALLERIES

  • 28

    Urfi Javed: ಹೋಟೆಲ್ ಒಳಗೆ ಉರ್ಫಿ ಜಾವೇದ್​ಗೆ ನೋ ಎಂಟ್ರಿ! ಸಿಟ್ಟಾದ ನಟಿ ಮಾಡಿದ್ದೇನು?

    ತನ್ನ ಹೊಸ ಹೊಸ ಫ್ಯಾಶನ್ ನಿಂದಲೇ ಅನೇಕ ಭಾರೀ ಉರ್ಫಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈಗ ಮತ್ತೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    MORE
    GALLERIES

  • 38

    Urfi Javed: ಹೋಟೆಲ್ ಒಳಗೆ ಉರ್ಫಿ ಜಾವೇದ್​ಗೆ ನೋ ಎಂಟ್ರಿ! ಸಿಟ್ಟಾದ ನಟಿ ಮಾಡಿದ್ದೇನು?

    ಉರ್ಫಿ ತೊಟ್ಟ ವಿಚಿತ್ರ ಬಟ್ಟೆ ಆಕೆಗೆ ಸಂಕಷ್ಟ ತಂದಿದೆ. ಮುಂಬೈನ ಹೋಟೆಲ್ ಒಂದಕ್ಕೆ ನಟಿ ಭೇಟಿ ನೀಡಿದ ವೇಳೆ ಆಕೆಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಈ ಬಗ್ಗೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ.

    MORE
    GALLERIES

  • 48

    Urfi Javed: ಹೋಟೆಲ್ ಒಳಗೆ ಉರ್ಫಿ ಜಾವೇದ್​ಗೆ ನೋ ಎಂಟ್ರಿ! ಸಿಟ್ಟಾದ ನಟಿ ಮಾಡಿದ್ದೇನು?

    ಇದು ನಿಜವಾಗಿಯೂ 21ನೇ ಶತಮಾನದ ಮುಂಬೈ ನಗರಾನ. ಇಂದು ನನಗೆ ರೆಸ್ಟೋರೆಂಟ್​ನಲ್ಲಿ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಉರ್ಫಿ ಜಾವೇದ್ ಅಸಮಧಾನ ಹೊರ ಹಾಕಿದ್ದಾರೆ.

    MORE
    GALLERIES

  • 58

    Urfi Javed: ಹೋಟೆಲ್ ಒಳಗೆ ಉರ್ಫಿ ಜಾವೇದ್​ಗೆ ನೋ ಎಂಟ್ರಿ! ಸಿಟ್ಟಾದ ನಟಿ ಮಾಡಿದ್ದೇನು?

    ನಾನು ಧರಿಸುವ ಬಟ್ಟೆಗಳನ್ನು ನೀವು ಒಪ್ಪದಿದ್ದರೂ ಪರವಾಗಿಲ್ಲ. ಹಾಗೆಂದ ಮಾತ್ರಕ್ಕೆ ನೀವು ನನ್ನನ್ನು ವಿಭಿನ್ನವಾಗಿ ನೋಡುವ ಅವಶ್ಯಕತೆಯಿಲ್ಲ. ದಯವಿಟ್ಟು ಕುಂಟು ನೆಪಗಳನ್ನು ನೀಡಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

    MORE
    GALLERIES

  • 68

    Urfi Javed: ಹೋಟೆಲ್ ಒಳಗೆ ಉರ್ಫಿ ಜಾವೇದ್​ಗೆ ನೋ ಎಂಟ್ರಿ! ಸಿಟ್ಟಾದ ನಟಿ ಮಾಡಿದ್ದೇನು?

    ಕೆಲವೊಮ್ಮೆ ಜನರು ಉರ್ಫಿಯ ಫ್ಯಾಷನ್ (Fashion) ಸೆನ್ಸ್ ಅನ್ನು ಇಷ್ಟಪಡುತ್ತಾರೆ. ಕೆಲವೊಮ್ಮೆ ಉರ್ಫಿ ಭಾರೀ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ.

    MORE
    GALLERIES

  • 78

    Urfi Javed: ಹೋಟೆಲ್ ಒಳಗೆ ಉರ್ಫಿ ಜಾವೇದ್​ಗೆ ನೋ ಎಂಟ್ರಿ! ಸಿಟ್ಟಾದ ನಟಿ ಮಾಡಿದ್ದೇನು?

    ನನ್ನ ವಿಚಿತ್ರ ಬಟ್ಟೆಗಳನ್ನು ನೋಡಿ ಮುಂಬೈನಲ್ಲಿ ಮುಸ್ಲಿಮರು ನನಗೆ ಮನೆ ಬಾಡಿಗೆ ಕೊಡಲ್ಲ, ಇತ್ತ ಹಿಂದೂಗಳು ನಾನು ಮುಸ್ಲಿಂ ಎಂದು ಮನೆ ಕೊಡಲ್ಲ ಎಂದು ಈ ಹಿಂದೆ ಉರ್ಫಿ ಅಳಲು ತೋಡಿಕೊಂಡಿದ್ರು.

    MORE
    GALLERIES

  • 88

    Urfi Javed: ಹೋಟೆಲ್ ಒಳಗೆ ಉರ್ಫಿ ಜಾವೇದ್​ಗೆ ನೋ ಎಂಟ್ರಿ! ಸಿಟ್ಟಾದ ನಟಿ ಮಾಡಿದ್ದೇನು?

    ವಿಚಿತ್ರ ಡ್ರೆಸ್ ಧರಿಸಿ ಜನರ ಮುಂದೆ ಬರುವ ಉರ್ಫಿ ಧೈರ್ಯದ ಬಗ್ಗೆ ಅನೇಕ ಸೆಲೆಬ್ರೆಟಿಗಳು ಕೂಡ ಮಾತಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲೂ ಅಪಾರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. 

    MORE
    GALLERIES