ಉರ್ಫಿ ಜಾವೇದ್ 17ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗಲು ನಿರ್ಧರಿಸಿದ್ರು. ಇದಕ್ಕೆ ಕಾರಣ ಅವರ ತಂದೆಯಂತೆ, ತನ್ನ ತಂದೆ ತನ್ನನ್ನು ತುಂಬಾ ಹೊಡೆಯುತ್ತಿದ್ದರು ಎಂದು ಉರ್ಫಿ ಹೇಳಿದ್ದಾರೆ. ತಂದಯೇ ನನಗೆ ಕಿರುಕುಳ ಕೊಡುತ್ತಿದ್ರು. ಮೂರ್ಛೆ ಹೋಗುವಂತೆ ನನಗೆ ಹೊಡೆಯುತ್ತಿದ್ರು. ಅಷ್ಟೇ ಅಲ್ಲದೇ ನನ್ನ ಸಂಬಂಧಿಕರು ನನ್ನನ್ನು ತುಂಬಾ ಅವಮಾನಿಸಿದ್ದಾರೆ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ. (ಫೋಟೋ ಕೃಪೆ: Instagram @urf7i)
ಬಳಿಕ ಉರ್ಫಿ ಜಾವೇದ್ ದೆಹಲಿಗೆ ಶಿಫ್ಟ್ ಆಗಿದ್ದಾರೆ. ಸ್ನೇಹಿತರ ಮನೆಯಲ್ಲಿ ತಂಗಿದ್ದರು. ನಂತರ ಉರ್ಫಿಗೆ ಕಾಲ್ ಸೆಂಟರ್ನಲ್ಲಿ ಕೆಲಸವೂ ಸಿಕ್ಕಿದೆ. ಆದ್ರೆ ಆ ಕೆಲಸ ಮಾಡಲು ನನಗೆ ಆಸಕ್ತಿ ಇರಲಿಲ್ಲ. ನಂತರ ಮುಂಬೈಗೆ ಬಂದು ವಿಭಿನ್ನ ಪಾತ್ರಗಳಿಗೆ ಆಡಿಷನ್ ನೀಡಿದೆ. ನಂತರ ಟಿವಿಯಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸಿದ್ದಾಗಿ ನಟಿ ಉರ್ಫಿ ಹೇಳಿದ್ದಾರೆ. (ಫೋಟೋ ಕೃಪೆ: Instagram @urf7i)