ಮುಂಬೈನ ಬೀದಿಗಳಲ್ಲಿ ಫ್ಯಾಷನೆಬಲ್ ಬಟ್ಟೆ ಧರಿಸಿ ಓಡಾಡೋ ಉರ್ಫಿ ಜಾವೇದ್ಗೆ ಸಂಕಷ್ಟ ಎದುರಾಗಿದೆ. ಉರ್ಫಿ ಅರೆ ಬರೆ ಬಟ್ಟೆ ಧರಿಸಿ ಓಡಾಡುತ್ತಾರೆ ಎಂದು ಬಿಜೆಪಿ ನಾಯಕಿ ಚಿತ್ರಾ ವಾಘ್ ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ.
2/ 8
ಹೆಚ್ಚಿನ ತನಿಖೆಗಾಗಿ ಉರ್ಫಿ ಅಂಬೋಲಿ ಪೊಲೀಸ್ ಠಾಣೆಗೆ ತಲುಪಿದ್ದು, ನಟಿಯನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ. ಎರಡು ಗಂಟೆಗಳ ಕಾಲ ವಿಚಾರಣೆ ನಡೆದಿದೆ.
3/ 8
ಉರ್ಫಿಗೆ ನಿಕಟವಾದ ಮೂಲವೊಂದು ಈ ಪ್ರಕರಣಕ್ಕೆ ಅವರು ಯಾವುದೇ ವಕೀಲರನ್ನು ಕೂಡಾ ನೇಮಿಸಿಕೊಂಡಿಲ್ಲ ಎಂದು ಬಹಿರಂಗಪಡಿಸಿದೆ. ವಿಚಾರಣೆಯು ದೀರ್ಘಕಾಲದವರೆಗೆ ನಡೆದಿದೆ. ಈ ಘಟನೆ ಬಗ್ಗೆ ಹೆಚ್ಚಿನ ಅಪ್ಡೇಟ್ಗಳೂ ಬಂದಿಲ್ಲ.
4/ 8
ಜನವರಿ ಮೊದಲ ವಾರದಲ್ಲಿ ಚಿತ್ರಾ ವಾಘ್ ಅವರ ಮೊದಲ ದೂರು ದಾಖಲಾದ ನಂತರ ಉರ್ಫಿ ಚಿತ್ರಾ ವಾಗ್ ವಿರುದ್ಧವೂ ದೂರು ದಾಖಲಿಸಿದ್ದರು.
5/ 8
ತಾನು ಎದುರಿಸುತ್ತಿರುವ ನಿರಂತರ ಕಾನೂನು ತೊಂದರೆಗಳ ನಂತರ ತಾನು 'ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಲ್ಪಟ್ಟಿದ್ದೇನೆ' ಎಂದು ಉರ್ಫಿ ಬಹಿರಂಗಪಡಿಸಿದರು.
6/ 8
ಅವರು ಬಿಜೆಪಿ ನಾಯಕಿ ವಿರುದ್ಧ ಬಲವಾದ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಾರೆ. ಚಿತ್ರಾ ಮತ್ತು ಉರ್ಫಿಯ ಜಗಳಕ್ಕೆ ಕೊನೆಯೇ ಇಲ್ಲದಂತಾಗಿದೆ.
7/ 8
ಉರ್ಫಿ ಜಾವೇದ್ ವಿರುದ್ಧ ಈ ಹಿಂದೆಯೂ ಕೇಸ್ ದಾಖಲಾಗಿತ್ತು. ಆದರೆ ನಟಿ ವಿರುದ್ಧ ರಾಜಕೀಯ ನಾಯಕಿ ಕೇಸ್ ದಾಖಲಿಸಿರುವುದು ಹೆಚ್ಚು ಸುದ್ದಿಯಾಗಿದೆ.
8/ 8
ಉರ್ಫಿ ಜಾವೇದ್ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಉರ್ಫಿ ಮುಂದೆ ಏನು ನಿರ್ಧಾರ ಮಾಡುತ್ತಾರೆಂದು ಕಾದು ನೋಡಬೇಕಿದೆ.