Urfi Javed: ಮತ್ತೆ ಉರ್ಫಿ ಜಾವೇದ್ಗೆ ಏನಾಯ್ತು? ಊದಿಕೊಂಡ ಮುಖದ ಫೋಟೋ ವೈರಲ್
ಉರ್ಫಿ ಜಾವೇದ್ ಮತ್ತೊಮ್ಮೆ ಅಲರ್ಜಿಯಿಂದ ಬಳಲುತ್ತಿದ್ದಾರೆ. ಉರ್ಫಿ ಮುಖವೇ ಬದಲಾಗಿ ಹೋಗಿದೆ. ಮುಖ ಊದಿಕೊಂಡಿದ್ದು ಕೆನ್ನೆ ಕೆಂಪಾಗಿ ಹೋಗಿದೆ. ಅಲರ್ಜಿಯಿಂದ ಬಳಲುತ್ತಿದ್ದ ಫೋಟೋವನ್ನು ಶೇರ್ ಮಾಡಿದ್ದಾರೆ. ಉರ್ಫಿ ಅವರ ಈ ಫೋಟೋಗೆ ನೆಟ್ಟಿಗರು ಬಗೆ ಬಗೆ ಕಮೆಂಟ್ ಮಾಡುತ್ತಿದ್ದಾರೆ.
ಉರ್ಫಿ ಜಾವೇದ್ ಯಾವಾಗಲೂ ತನ್ನ ಬಟ್ಟೆ ಮತ್ತು ಫ್ಯಾಷನ್ ಸೆನ್ಸ್ ನಿಂದ ಜನರ ಗಮನ ಸೆಳೆದಿದ್ದಾಳೆ. ತನ್ನ ಬಟ್ಟೆಗಳಿಂದಲೇ ಉರ್ಫಿ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಬಟ್ಟೆಯನ್ನು ವಿಭಿನ್ನವಾಗಿ ಧರಿಸಿ ಇದೇ ನನ್ನ ಫ್ಯಾಷನ್ ಎನ್ನುವ ಉರ್ಫಿ ಕೂಡ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.
2/ 8
ಇದೀಗ ಉರ್ಫಿ ಮೇಕಪ್ ಇಲ್ಲದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಉರ್ಫಿ ನೀಡಿರುವ ಶೀರ್ಷಿಕೆ ಇದೀಗ ಗಮನ ಸೆಳೆದಿದೆ.
3/ 8
ಮೇಕಪ್ ಇಲ್ಲದ ಉರ್ಫಿ ಮುಖ ಊದಿಕೊಂಡಿದೆ. ಊದಿಕೊಂಡ ಮುಖ ನೋಡಿದ ನೆಟ್ಟಿಗರು ಉರ್ಫಿ ಮುಖಕ್ಕೆ ಏನಾಯ್ತು ಎನ್ನುತ್ತಿದ್ದಾರೆ.
4/ 8
ಉರ್ಫಿ ತನ್ನ ಫೋಟೋಗೆ 'ಕ್ಯಾ ಸೇ ಕ್ಯಾ ಹೋ ಗಯಾ, ಅಲರ್ಜಿಯ ರಿಸಲ್ಟ್. ನಾನು ಈಗ ಯಾರಂತೆ ಕಾಣುತ್ತಿದ್ದೇನೆ? ಎಂದು ನೆಟ್ಟಿಗರನ್ನು ಪ್ರಶ್ನಿಸಿದ್ದಾರೆ. ಉರ್ಫಿ ಅವರ ಪೋಸ್ಟ್ ಅನೇಕ ಜನರ ಗಮನ ಸೆಳೆದಿದೆ.
5/ 8
ಈ ಪ್ರಶ್ನೆಗೆ ಉತ್ತರಿಸಿದ ನೆಟ್ಟಿಗರು ಉರ್ಫಿ ಜಾವೇದ್ ಅವರನ್ನು ರಾಖಿ ಸಾವಂತ್ ಜೊತೆ ಹೋಲಿಸಿದ್ದಾರೆ. ನೀವು ಮೇಕಪ್ ಇಲ್ಲದೆ ಮತ್ತು ಊದಿಕೊಂಡ ಮುಖದೊಂದಿಗೆ ರಾಖಿ ಸಾವಂತ್ ರಂತೆ ಕಾಣುತ್ತೀರಿ ಎಂದು ಅನೇಕರು ಹೇಳಿದ್ದಾರೆ.
6/ 8
ಈ ಪೋಸ್ಟ್ಗೆ ಕಮೆಂಟ್ ಮಾಡುವ ಮೂಲಕ ಅನೇಕ ನೆಟಿಜನ್ ಗಳು ಉರ್ಫಿಯನ್ನು ಟ್ರೋಲ್ ಮಾಡಿದ್ದಾರೆ.
7/ 8
ಉರ್ಫಿ ಸಂಪೂರ್ಣ ಬಟ್ಟೆ ಧರಿಸಿದ್ದಕ್ಕಾಗಿ ಆಕೆಗೆ ಅಲರ್ಜಿ ಆಗಿರಬೇಕು ಕೆಲವರು ಕಮೆಂಟ್ ಮಾಡಿದ್ದಾರೆ.
8/ 8
ಇನ್ನು ಉರ್ಫಿ ಅಭಿಮಾನಿಗಳು ಆಕೆಯ ಬ್ಯೂಟಿ ಹಾಗೂ ಆರೋಗ್ಯದ ಬಗ್ಗೆ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.