Krithi Shetty: ಮತ್ತೋರ್ವ ಕನ್ನಡತಿಗೆ ಖುಲಾಯಿಸಿದ ಅದೃಷ್ಟ! ರಶ್ಮಿಕಾ ಮಂದಣ್ಣ ಹಾದಿಯಲ್ಲೇ ನಟಿ ಕೃತಿ ಶೆಟ್ಟಿ..
Krithi Shetty: ರಾಮ್ ಫೋತಿನೇನಿ ನಟನೆಯ ಬಹುನಿರೀಕ್ಷಿತ `ದಿ ವಾರಿಯರ್ ಸಿನಿಮಾ’ ಜುಲೈ 14ಕ್ಕೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆ್ಯಕ್ಷನ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಕೃತಿ ಶೆಟ್ಟಿ(Kriti Shetty).. ಕನ್ನಡದ ಮುದ್ದು ಮುಖದ ಹುಡುಗಿ, ನ್ಯಾಷನಲ್ ಕ್ರಶ್(National Crush) ರಶ್ಮಿಕಾ ಮಂದಣ್ಣ(Rashmika Mandanna) ಅವರನ್ನು ಬಿಟ್ಟರೆ ಟಾಲಿವುಡ್(Tollywood)ನಲ್ಲಿ ಶೈನ್ ಆಗುತ್ತಿರುವ ನಟಿ ಅಂದರೆ ಕೃತಿ ಶೆಟ್ಟಿ
2/ 8
ನೋಡಲು ಮುದ್ದಾಗಿ ಕಾಣುವ ಈ ಹುಡುಗಿ ಉಪ್ಪೇನ(Uppena) ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿಯಾಗಿದ್ದಾರು. ಈಕೆಯ ನಟನೆ ಕಂಡು ಎಲ್ಲರೂ ಫಿದಾ ಆಗಿದ್ದರು.
3/ 8
ನಾಗಾರ್ಜುನ(Nagarajuna) ಅವರ ಪುತ್ರ ನಾಗಚೈತನ್ಯ(Naga Chaitanya) ಸಿನಿಮಾದಲ್ಲಿ ನಟಿಸಿದರು. ಇತ್ತೀಚೆಗೆ ನಾನಿ(Nani) ಜೊತೆ ಶ್ಯಾಮ್ ಸುಂದರ್ ರಾಯ್(Shyam Sundar Roy) ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯಕ್ಕೆ ಟಾಲಿವುಡ್ನಲ್ಲಿ ಈಕೆಗೆ ಒಳ್ಳೆ ಬೇಡಿಕೆ(Demand) ಇದೆ.ಕೃತಿ ಶೆಟ್ಟಿಗೆ ಅದಾಗಲೇ ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿದೆ
4/ 8
ಕೃತಿ ಶೆಟ್ಟಿ ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯಾಗೆ ಜೋಡಿಯಾಗುತ್ತಿದ್ದಾರೆ.ತಮಿಳಿನ ಖ್ಯಾತ ನಿರ್ದೇಶಕ ಬಾಲಾ ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ಕೃತಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೂರ್ಯಾ ಒಡೆತನದ 2ಡಿ ಎಂಟರ್ಟೈನ್ಮೆಂಟ್ ಸಂಸ್ಥೆ ಈ ವಿಚಾರ ಹಂಚಿಕೊಂಡಿದೆ.
5/ 8
ಬಾಲಾ ಹಾಗೂ ನಟ ಸೂರ್ಯಾ ಅವರು ಸುಮಾರು 21 ವರ್ಷಗಳ ನಂತರ ಜೊತೆಯಾಗುತ್ತಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ಹೆಸರು ಅಧಿಕೃತವಾಗಿಲ್ಲ. ಬದಲಿಗೆ ‘ಸೂರ್ಯಾ 41’ ಎಂದು ತಾತ್ಕಾಲಿಕವಾಗಿ ಶುರು ಮಾಡಲಾಗಿದೆ.
6/ 8
ಇತ್ತೀಚೆಗೆ ‘ಗತವೈಭವ’ ಸಿನಿಮಾದ ನಾಯಕ ದುಷ್ಯಂತ್ರನ್ನು ಪರಿಚಯಿಸುವ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಈಗ ಈ ಸಿನಿಮಾಗೆ ನಾಯಕಿಯ ಆಯ್ಕೆ ನಡೆಯುತ್ತಿದ್ದು, ದಕ್ಷಿಣ ಭಾರತದ ಮೂವರು ನಟಿಯರು ಈ ರೇಸ್ನಲ್ಲಿದ್ದಾರೆ
7/ 8
ಚಿತ್ರತಂಡದ ಮೂಲಗಳ ಪ್ರಕಾರ, ನಾಯಕಿ ಇನ್ನೂ ಫೈನಲ್ ಆಗಿಲ್ಲ.ನಿರ್ದೇಶಕರು ನಟಿಯರಾದ ಅನುಪಮಾ ಪರಮೇಶ್ವರನ್, ಕೃತಿ ಶೆಟ್ಟಿ ಮತ್ತು ಆಶಿಕಾ ರಂಗನಾಥ್ರಿಗೆ ಕಥೆ ಹೇಳಿದ್ದಾರೆ. ಈ ಪೈಕಿ ಯಾರು ಫೈನಲ್ ಆಗುತ್ತಾರೆ ಎಂಬುದು ಸದ್ಯದಲ್ಲೇ ರಿವೀಲ್ ಆಗಲಿದೆ.
8/ 8
ರಾಮ್ ಫೋತಿನೇನಿ ನಟನೆಯ ಬಹುನಿರೀಕ್ಷಿತ `ದಿ ವಾರಿಯರ್ ಸಿನಿಮಾ’ ಜುಲೈ 14ಕ್ಕೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆ್ಯಕ್ಷನ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯಾಘಿ ಅಭಿನಯಿಸಿದ್ದಾರೆ.