ಇಂದು ಸ್ಯಾಂಡಲ್ವುಡ್ ನಟ ಉಪೇಂದ್ರ ಹಾಗೂ ನಟಿ ಪ್ರಿಯಾಂಕ ಉಪೇಂದ್ರ ಅವರ ವಿವಾಹವಾದ ದಿನ. ಸ್ಯಾಂಡಲ್ವುಡ್ ತಾರಾ ಜೋಡಿಗೆಯ ದಾಂಪತ್ಯ ಜೀವನ ಖುಷಿಯಲ್ಲಿ ಸಾಗುತ್ತಿದೆ. ಬೆಂಗಾಲಿ ಚೆಲುವೆ ಪ್ರಿಯಾಂಕ ಉಪೇಂದ್ರ ಕನ್ನಡದಲ್ಲಿ ಸಿನಿಮಾ ಮಾಡುತ್ತಾ ಉಪ್ಪಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರು 2003 ಡಿಸೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಉಪ್ಪಿ 2, ಎಚ್2ಒ, ರಾ, ಶ್ರೀಮತಿಯಂತ ಸಿನಿಮಾಗಳಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅವರು ಜೊತೆಯಾಗಿ ನಟಿಸಿದ್ದಾರೆ. ಸದ್ಯ ನಟ ಉಪೇಂದ್ರ ಯುಐ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಅವರು ಹಾಗೂ ಶ್ರಿಯಾ ಶರಣ್ ಅಭಿನಯದ ಕಬ್ಜ ಸಿನಿಮಾ ಕೂಡಾ ಪ್ರಗತಿಯಲ್ಲಿದೆ. ಪ್ರಿಯಾಂಕ ಉಪೇಂದ್ರ ಹಾಗೂ ಉಪೇಂದ್ರ ಅವರ ಮದುವೆ ಫೋಟೋ. ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ ಅವರು ಈಗ ಹೆಚ್ಚಾಗಿ ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ.