ಎಲ್ಲಾ ಕಾರಣಗಳಿಂದಲೂ ನಾನು ತಾಯಿಯಾಗುತ್ತಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇನೆ. ನಾನು ಸಮಾಜದ ನಿರೀಕ್ಷೆಗಳನ್ನು ನೋಡಿ ತಾಯಿಯಾಗಿಲ್ಲ. ನನ್ನ ವೈವಾಹಿಕ ಜೀವನವನ್ನು ಮತ್ತಷ್ಟು ಸದೃಢಪಡಿಸಲು ನಾನು ತಾಯಿಯಾಗಿಲ್ಲ. ನನ್ನ ಮಗ/ಮಗಳು ಅರ್ಹಪಡುವ ಎಲ್ಲಾ ಪ್ರೀತಿಯನ್ನು ನೀಡಲು ನಾನು ಭಾವನಾತ್ಮಕವಾಗಿ ಸಿದ್ಧವಾಗಿರುವಾಗ ತಾಯಿಯಾಗಿದ್ದೇನೆ ಎಂದು ಉಪಾಸನಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಉಪಾಸನಾ ಅವರಿಗೆ ತುಂಬಾ ಇಷ್ಟವಾದ ಎರಡು ಬಗೆಯ ಸಿಹಿತಿಂಡಿಗಳನ್ನು ಲಕ್ಷ್ಮಿ ಪ್ರಣತಿ ಉಡುಗೊರೆಯಾಗಿ ನೀಡಿದರು. ಇವುಗಳ ಜೊತೆಗೆ ಕೆಲವು ಡ್ರೈ ಫ್ರೂಟ್ಸ್ ಕೂಡ ಸೇರಿಸಲಾಯಿತು. ಈ ಉಡುಗೊರೆ ನೋಡಿ ಉಪಾಸನಾ ತುಂಬಾ ಖುಷಿಪಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜುಲೈ ತಿಂಗಳಿನಲ್ಲಿ ಉಪಾಸನಾ ಮಗುವಿಗೆ ಜನ್ಮ ನೀಡಲಿದ್ದಾರೆ.