Star Suvarnaದಲ್ಲಿ ಯುಗಾದಿ ವಿಶೇಷ ಕಾರ್ಯಕ್ರಮ - ರಂಗು ರಂಗಿನ ವೇದಿಕೆಯಲ್ಲಿ ತಾರೆಯರ ಹಬ್ಬ
Ugadi Special Program: ಯುಗಾದಿ ಹಬ್ಬ ಹತ್ತಿರ ಬಂದಿದೆ. ಹೊಸವರ್ಷದ ಸಂಭ್ರಮಾಚರಣೆಗೆ ಜನರು ಸಹ ಸಿದ್ಧರಾಗಿದ್ದಾರೆ. ಇನ್ನು ವಿಶೇಷ ಹಬ್ಬ ಎಂದ ಮೇಲೆ ಮನರಂಜನಾ ವಾಹಿನಿಗಳಲ್ಲಿ ಸಹ ತಾರೆಯರನ್ನು ಕರೆಸಿ ಹಬ್ಬವನ್ನು ಆಚರಿಸಲಾಗುತ್ತದೆ. ಕಳೆದ ವಾರವಷ್ಟೇ ಕಲರ್ಸ್ ಕನ್ನಡದಲ್ಲಿ ಯುಗಾದಿ ವಿಶೇಷ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ವಾರ ಸ್ಟಾರ್ ಸುವರ್ಣದಲ್ಲಿ ಹಬ್ಬದ ವಿಶೇಷವಿದ್ದು, ರಂಗು ರಂಗಿನ ಆಚರಣೆಯ ಝಲಕ್ ಇಲ್ಲಿದೆ.
ಈ ಕಾರ್ಯಕ್ರಮದಲ್ಲಿ ಹಲವಾರು ತಾರೆಯರು, ಸಂಗೀತಗಾರರು ಭಾಗವಹಿಸಿ ಹಬ್ಬದ ಸಂಭ್ರಮ ಹೆಚ್ಚಿಸಿದ್ದು, ಈ ವೀಕೆಂಡ್ ಪ್ರೇಕ್ಷಕರಿಗೆ ಡಬಲ್ ಧಮಾಕ ಎನ್ನಬಹುದು.
2/ 8
ಈ ಸುಂದರ ಸಂಜೆಯ ಕಾರ್ಯಕ್ರಮದಲ್ಲಿ ಗಾಯಕ ಸಂಜಿತ್ ಹೆಗ್ಡೆ ಸಹ ಭಾಗವಹಿಸಿದ್ದರು. ಸಂಜಿತ್ ಹೆಗ್ಡೆ ಎಂದ ಮೇಲೆ ಅದ್ಭುತ ಹಾಡುಗಳಿಗೇನು ಕಮ್ಮಿ ಇರುವುದಿಲ್ಲ.
3/ 8
ಗಾಯಕ ಹೇಮಂತ್ ಸಹ ಈ ಕಾರ್ಯಕ್ರಮದಲ್ಲಿ ತಮ್ಮ ಜನಪ್ರಿಯ ಹಾಡುಗಳನ್ನು ಹಾಡಿ ರಂಜಿಸಲಿದ್ದು, ಹಾಡುಗಳ ರಸದೌತಣ ಸಿಗಲಿದೆ ಎಂದರೆ ತಪ್ಪಾಗಲಾರದು.
4/ 8
ಅಲ್ಲದೇ ಈ ಕಾರ್ಯಕ್ರಮದಲ್ಲಿ ಜನಪ್ರಿಯ ಸಂಗೀತಗಾರರಾದ ವ್ಯಾಸ್ ರಾಜ್ ಮತ್ತು ಅಂಕಿತ ರೋಮ್ಯಾಂಟಿಕ್ ಹಾಡುಗಳ ಜೊತೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹಿಟ್ ಗೀತೆಗಳನ್ನು ಹಾಡಲಿದ್ದು, ಸಂಗೀತಪ್ರಿಯರಿಗೆ ಯುಗಾದಿ ಹಬ್ಬದ ಜೊತೆ ಸಂಗೀತ ಹಬ್ಬ ಎನ್ನಬಹುದು.
5/ 8
ಇಂದು ನಾಗರಾಜ್ ಮತ್ತು ಲಕ್ಷ್ಮಿ ನಾಗರಾಜ್ ಅವರ ಜುಗಲ್ ಬಂದಿ ಇದ್ದು, ಈ ವರ್ಷದ ಯುಗಾದಿ ಹಬ್ಬವನ್ನು ಸಂಗೀತಮಯವಾಗಿಸಲಿದೆ ಎನ್ನಬಹುದು.
6/ 8
ಈ ಕಾರ್ಯಕ್ರಮದಲ್ಲಿ ನಟ ಹಾಗೂ ಗಾಯಕ ಸುನೀಲ್ ರಾವ್ ಸಹ ಭಾಗವಹಿಸಿದ್ದು, ಬಂಪರ್ ಮನರಂಜನೆಯನ್ನು ಒದಗಿಸಲಿದೆ.
7/ 8
ಇದಿಷ್ಟು ಜನರಲ್ಲದೇ ಸುನಿಲ್ ರಾವ್, ಅದಿತಿ ಪ್ರಭುದೇವ, ಮಣಿಕಾಂತ್ ಕದ್ರಿ ಮತ್ತು ಬ್ರೋ ಗೌಡ ಕೂಡ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದು, ಶಾಲಿನಿ ಈ ಕಾರ್ಯಕ್ರದ ನಿರೂಪಣೆ ಮಾಡಿದ್ದಾರೆ.
8/ 8
ಇನ್ನು ಈ ಕಾರ್ಯಕ್ರಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಏಪ್ರಿಲ್ 3ರಂದು , ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದ್ದು, ನೀವೂ ನೋಡಿ ಎಂಜಾಯ್ ಮಾಡಬಹುದು.