ಹಿಂದೂಗಳ ಹೊಸ ವರ್ಷ ಯುಗಾದಿ. ಹೀಗಾಗಿ ಎಲ್ಲರ ಮನೆಯಲ್ಲೂ ಯುಗಾದಿ ಹಬ್ಬದ ಸಂಭ್ರಮ ಕಳೆಗಟ್ಟಿರುತ್ತದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ. ಕನ್ನಡ ಚಿತ್ರರಂಗದ ಸ್ಟಾರ್ಗಳ ಮನೆಗಳಲ್ಲೂ ಯುಗಾದಿ ಹಬ್ಬ ಸಂಭ್ರಮ ಜೋರಾಗಿತ್ತು. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಕ್ಕಳಾದ ಐರಾ ಹಾಗೂ ಯಥರ್ವ ಜೊತೆ ಸಾಂಪ್ರದಾಯಿಕ ಡ್ರೆಸ್ ತೊಟ್ಟು, ಸಿಹಿ ಊಟ ಮಾಡಿ, ಸಂಭ್ರಮಿಸಿದ್ರು. (ಚಿತ್ರ ಕೃಪೆ: Instagram)
ಹಿರಿಯ ನಟ ಜಗ್ಗೇಶ್ ಅವರ ಮನೆಯಲ್ಲೂ ಯುಗಾದಿ ಸಂಭ್ರಮ ಕಳೆಗಟ್ಟಿತ್ತು. ಜಗ್ಗೇಶ್-ಪರಿಮಳಾ ದಂಪತಿ ಮಕ್ಕಳು, ಸೊಸೆ, ಮೊಮ್ಮಗನೊಂದಿಗೆ ಹಬ್ಬ ಆಚರಿಸಿದ್ರು. ಮೊಮ್ಮಗ ಅರ್ಜುನ್ ಇಂದಿನ ನಮ್ಮ ಮನೆಯ ಹಬ್ಬಕ್ಕೆ ಧರಿಸಿದ ಬಟ್ಟೆ ತಾತನು ಧರಿಸಬೇಕು ಎಂದು ಅಜ್ಜಿ ನಿರ್ಧರಿಸಿ ಅಂಗಡಿ ಸುತ್ತಿ ಬಟ್ಟೆ ತಂದು ಇಬ್ಬರಿಗು ಹಾಕಿಸಿ ಸಂಭ್ರಮಿಸಿದಳು. ಸಂತೋಷ ಸಂಭ್ರಮ ಆನಂದ ಬೇರೆ ಎಲ್ಲೂ ಸಿಗದು. ಹಬ್ಬದ ಊಟ ಮೊಮ್ಮಗನ ಆಟ ಮಡದಿ ಮಕ್ಕಳ ಪ್ರೀತಿ ನನ್ನ ಹೊಟ್ಟೆ ಮನಸ್ಸು ತುಂಬಿಸಿತು ಜಗ್ಗೇಶ್ ಬರೆದುಕೊಂಡಿದ್ದಾರೆ. (ಚಿತ್ರ ಕೃಪೆ: Instagram)