ಗವರ್ನರ್ ಆರ್.ಎನ್. ರವಿ ಅವರು ರಾಜಭವನದ ದರ್ಬಾರ್ ಹಾಲ್ನಲ್ಲಿ ಬೆಳಗ್ಗೆ 9.30ಕ್ಕೆ ಪ್ರಮಾಣವಚನ ಬೋಧಿಸಿದ್ದಾರೆ. ಸ್ಟಾಲಿನ್ ಅವರು ಯುವಕಲ್ಯಾಣ ಹಾಗೂ ಕ್ರೀಡಾಭಿವೃದ್ಧಿ ಸಚಿವರಾಗಿ ನೇಮಕಗೊಂಡಿದ್ದಾರೆ. ಇದುವರೆಗೂ ಈ ಖಾತೆ ಶಿವ ವಿ. ಮೆಯ್ಯಾನಂದನ್ ಅವರು ನೋಡಿಕೊಳ್ಳುತ್ತಿದ್ದರು. ಸ್ಟಾಲಿನ್ ಅವರ ಪತ್ನಿ ದುರ್ಗಾ, ಉದಯಾನಿಧಿ ಪತ್ನಿ ಕೀರ್ತಿಗಾ, ಕನಿಮೊಳಿ ಕರುಣಾನಿಧಿ ಹಾಗೂ ಕದಯಾನಿಧಿ ಮಾರನ್ ಹಾಗೂ ಸಚಿವರು ಹಾಜರಿದ್ದರು.