Balagam Movie: ಅಣ್ಣ-ತಮ್ಮನನ್ನು ಒಂದಾಗಿಸಿದ 'ಬಲಗಂ' ಸಿನಿಮಾ! ಜಮೀನು ಜಗಳಕ್ಕೆ ಬೇರೆಯಾದವ್ರು ಫಿಲ್ಮ್ ನೋಡಿ ಒಂದಾದರು!

ಜಮೀನು ವಿವಾದದಿಂದ ಜಗಳವಾಗಿ ವರ್ಷಗಟ್ಟಲೆ ಬೇರೆಯಾಗಿದ್ದ ಸಹೋದರರಿಬ್ಬರು ಬಳಗಂ ಸಿನಿಮಾ ನೋಡಿದ ಕೂಡಲೇ ಮನಪರಿವರ್ತನೆ ಮಾಡಿಕೊಂಡು ಊರವರ ಸಮ್ಮುಖದಲ್ಲಿ ಒಂದಾಗಿದ್ದಾರೆ.

First published:

  • 17

    Balagam Movie: ಅಣ್ಣ-ತಮ್ಮನನ್ನು ಒಂದಾಗಿಸಿದ 'ಬಲಗಂ' ಸಿನಿಮಾ! ಜಮೀನು ಜಗಳಕ್ಕೆ ಬೇರೆಯಾದವ್ರು ಫಿಲ್ಮ್ ನೋಡಿ ಒಂದಾದರು!

    ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳಿಂದ ಸಮಾಜಕ್ಕೆ ಅಷ್ಟೋ ಇಷ್ಟು ಒಳಿತಾಗುತ್ತವೆ ಎನ್ನುವುದಕ್ಕೆ ತೆಲುಗಿನ ಬಲಗಂ (ಬಳಗಂ) ಚಿತ್ರ ಒಂದು ಅದ್ಭುತ ಉದಾಹರಣೆಯಾಗಿ ನಿಂತಿದೆ.

    MORE
    GALLERIES

  • 27

    Balagam Movie: ಅಣ್ಣ-ತಮ್ಮನನ್ನು ಒಂದಾಗಿಸಿದ 'ಬಲಗಂ' ಸಿನಿಮಾ! ಜಮೀನು ಜಗಳಕ್ಕೆ ಬೇರೆಯಾದವ್ರು ಫಿಲ್ಮ್ ನೋಡಿ ಒಂದಾದರು!

    ಜಮೀನು ವಿವಾದದಿಂದ ಜಗಳವಾಗಿ ವರ್ಷಗಟ್ಟಲೆ ಬೇರೆಯಾಗಿದ್ದ ಸಹೋದರರಿಬ್ಬರು ಈ ಸಿನಿಮಾ ನೋಡಿದ ಕೂಡಲೇ ಒಂದಾಗಲು ಬಯಸಿ ಊರವರ ಸಮ್ಮುಖದಲ್ಲಿ ಜೊತೆಯಾಗಿದ್ದಾರೆ. ನಿರ್ಮಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    MORE
    GALLERIES

  • 37

    Balagam Movie: ಅಣ್ಣ-ತಮ್ಮನನ್ನು ಒಂದಾಗಿಸಿದ 'ಬಲಗಂ' ಸಿನಿಮಾ! ಜಮೀನು ಜಗಳಕ್ಕೆ ಬೇರೆಯಾದವ್ರು ಫಿಲ್ಮ್ ನೋಡಿ ಒಂದಾದರು!

    ಇತ್ತೀಚಿನ ದಿನಗಳಲ್ಲಿ ದೂರವಾಗುತ್ತಿರುವ ಮಾನವೀಯ ಸಂಬಂಧಗಳನ್ನು ಕಥೆಯನ್ನಾಗಿಸಿಕೊಂಡು ಬಳಗಂ ಸಿನಿಮಾ ಮಾಡಲಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ತೆಲುಗಿನ ಬಲಗಂ ಸಿನಿಮಾವನ್ನು ಇಬ್ಬರು ಸಹೋದರರು ವೀಕ್ಷಿಸಿದ್ದಾರೆ. ಆ ನಂತರ ತಮ್ಮ ನಡುವಿನ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಂಡು ಒಂದಾಗಿ ಬಾಳಬೇಕೆಂದು ತೀರ್ಮಾನಿಸಿದ್ದಾರೆ.

    MORE
    GALLERIES

  • 47

    Balagam Movie: ಅಣ್ಣ-ತಮ್ಮನನ್ನು ಒಂದಾಗಿಸಿದ 'ಬಲಗಂ' ಸಿನಿಮಾ! ಜಮೀನು ಜಗಳಕ್ಕೆ ಬೇರೆಯಾದವ್ರು ಫಿಲ್ಮ್ ನೋಡಿ ಒಂದಾದರು!

    ನಿರ್ಮಲ್ ಜಿಲ್ಲೆಯ ಲಕ್ಷ್ಮಣಚಂದ ಗ್ರಾಮದ ಗುರ್ರಂ ಪೊಸುಲು ಹಾಗೂ ಗುರ್ರಂ ರವಿ ಎಂಬ ಇಬ್ಬರು ಸಹೋದರರು ಕೆಲ ವರ್ಷಗಳ ಹಿಂದೆ ಜಾಗದ ವಿಚಾರಕ್ಕೆ ಜಗಳವಾಡಿಕೊಂಡು ಬೇರ್ಪಟ್ಟಿದ್ದರು. ತಮ್ಮ ನಡುವಿನ ಸಣ್ಣ ಸಮಸ್ಯೆ ಬಗೆಹರಿಸದೆ ವರ್ಷಗಟ್ಟಲೆ ಮಾತನಾಡುವುದನ್ನು ಬಿಟ್ಟಿದ್ದರು.

    MORE
    GALLERIES

  • 57

    Balagam Movie: ಅಣ್ಣ-ತಮ್ಮನನ್ನು ಒಂದಾಗಿಸಿದ 'ಬಲಗಂ' ಸಿನಿಮಾ! ಜಮೀನು ಜಗಳಕ್ಕೆ ಬೇರೆಯಾದವ್ರು ಫಿಲ್ಮ್ ನೋಡಿ ಒಂದಾದರು!

    ಆದರೆ ಇತ್ತೀಚೆಗಷ್ಟೇ ಬಲಗಂ ಸಿನಿಮಾ ತೆರೆಕಂಡಿದ್ದು, ಸಿನಿಮಾ ನೋಡಲೇಬೇಕಾದ ಸಿನಿಮಾ ಎಂದು ಭಾವಿಸಿದ ಗ್ರಾಮದ ಸರಪಂಚ್ ನೂರಕಂಟಿ ಮುತ್ಯಂ ರೆಡ್ಡಿ ಅವರು ಸಿನಿಮಾವನ್ನು ಗ್ರಾಮದಲ್ಲಿ ಉಚಿತವಾಗಿ ತೋರಿಸಿದ್ದಾರೆ.

    MORE
    GALLERIES

  • 67

    Balagam Movie: ಅಣ್ಣ-ತಮ್ಮನನ್ನು ಒಂದಾಗಿಸಿದ 'ಬಲಗಂ' ಸಿನಿಮಾ! ಜಮೀನು ಜಗಳಕ್ಕೆ ಬೇರೆಯಾದವ್ರು ಫಿಲ್ಮ್ ನೋಡಿ ಒಂದಾದರು!

    ಈ ಸಿನಿಮಾ ನೋಡಿ ಸಹೋದರರಾದ ರವಿ ಮತ್ತು ಪೊಸುಲು ಮನಸ್ಸು ಬದಲಿಸಿ ಭಾನುವಾರ ಜಾಗದ ವಿವಾದ ಬಗೆಹರಿಸಿದ್ದಾರೆ. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಒಂದಾಗಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳ ವಿವಾದದಿಂದ ಹಲವು ವರ್ಷಗಳಿಂದ ಬೇರ್ಪಟ್ಟಿದ್ದ ಅನ್ನತಮ್ಮಂದಿರನ್ನು ಬಲಗಂ ಚಿತ್ರ ಒಂದು ಮಾಡಿದ್ದು, ಸ್ಥಳೀಯರಲ್ಲೂ ಸಂತಸ ಮೂಡಿಸಿದೆ.

    MORE
    GALLERIES

  • 77

    Balagam Movie: ಅಣ್ಣ-ತಮ್ಮನನ್ನು ಒಂದಾಗಿಸಿದ 'ಬಲಗಂ' ಸಿನಿಮಾ! ಜಮೀನು ಜಗಳಕ್ಕೆ ಬೇರೆಯಾದವ್ರು ಫಿಲ್ಮ್ ನೋಡಿ ಒಂದಾದರು!

    ಈ ಇಬ್ಬರು ಸಹೋದರರಲ್ಲಿನ ಬದಲಾವಣೆಯನ್ನು ಕಂಡು ಗ್ರಾಮದ ಅಧ್ಯಕ್ಷ ಬಲಗಂ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಸಿನಿಮಾಗಳು ಸಮಾಜಕ್ಕೆ ಸಂದೇಶ ನೀಡಬೇಕೆ ಹೊರತು, ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಣೆಗೆ ಒಳಗಾಗುವಂತಿರಬಾರದು ಎಂದು ಗ್ರಾಮಸ್ಥರು ಸಲಹೆ ನೀಡಿದ್ದಾರೆ.

    MORE
    GALLERIES