ಸೀರಿಯಲ್ ಶೂಟಿಂಗ್ ಸೆಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ನಟಿ ತುನಿಷಾ ಶರ್ಮಾ ಅವರ ಸಹನಟ ಶೀಝಾನ್ ಖಾನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಅವರ ತಾಯಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ ನಂತರ ಅವರನ್ನು ಬಂಧಿಸಲಾಗಿದೆ.
2/ 7
ನಟಿಯ ತಾಯಿ ಆತ್ಮಹತ್ಯೆ ಪ್ರೇರಣೆ ಆರೋಪಿಸಿ ದೂರುಕೊಟ್ಟ ನಂತರ ಶೀಝಾನ್ನನ್ನು ಬಂಧಿಸಲಾಗಿದೆ. ಶ್ರೀಝಾನ್ ಮತ್ತು ತುನಿಷಾ ತಮ್ಮ ಟಿವಿ ಶೋ ಅಲಿಬಾಬಾ - ದಾಸ್ತಾನ್-ಎ-ಕಾಬೂಲ್ನಲ್ಲಿ ಲೀಡಿಂಗ್ ಪಾತ್ರದಲ್ಲಿ ನಟಿಸಿದ್ದಾರೆ.
3/ 7
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಾಖಲಿಸಿಕೊಂಡು ವಾಲಿವ್ ಪೊಲೀಸರು ನಟಿ ತುನಿಷಾ ಶರ್ಮಾ ಅವರ ಸಹನಟ ಶೀಝಾನ್ ಖಾನ್ ಅವರನ್ನು ಬಂಧಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
4/ 7
ಶೀಝನ್ನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ತುನೀಶಾ ಆತ್ಮಹತ್ಯೆಗೆ ಕಾರಣವೇನು ಎಂಬ ವಿವರ ಇನ್ನೂ ಸ್ಪಷ್ಟವಾಗಿಲ್ಲ.
5/ 7
ಧಾರಾವಾಹಿ ಅಲಿ ಬಾಬಾ ದಾಸ್ತಾನ್-ಇ-ಕಾಬೂಲ್ನಲ್ಲಿ ತುನಿಶಾ ಶೆಹಜಾದಿ ಮರಿಯಮ್ ಪಾತ್ರವನ್ನು ಮಾಡಿದ್ದಾರೆ. ಶೀಝಾನ್ ಅಲಿ ಬಾಬಾ ದಸ್ತಾನ್-ಇ-ಕಾಬೂಲ್ನಲ್ಲಿ ಅಲಿ ಬಾಬಾ ಆಗಿ ಕಾಣಿಸಿಕೊಂಡಿದ್ದಾರೆ.
6/ 7
ಚಹಾ ವಿರಾಮದ ನಂತರ ನಟಿ ವಾಶ್ ರೂಂಗೆ ಹೋಗಿದ್ದರು. ಅಲ್ಲಿಂದ ಹಿಂತಿರುಗಲಿಲ್ಲ ಎಂದು ವರದಿಯಾಗಿದೆ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ, ಪೊಲೀಸರು ಇದೀಗ ಕೊಲೆ ಮತ್ತು ಆತ್ಮಹತ್ಯೆ ಎರಡೂ ಕೋನಗಳಿಂದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.
7/ 7
ಟಿವಿ ಸೀರಿಯಲ್ ಹೊರತಾಗಿ, ತುನಿಷಾ ಫಿತೂರ್ ಮತ್ತು ಬಾರ್ ಬಾರ್ ದೇಖೋ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು.