ಸಿನಿಮಾ ಹಾಗೂ ರಂಗಭೂಮಿ ಕಲಾವಿದರಾಗಿ ಹೆಸರು ಮಾಡಿರುವ ನಟ ಅರವಿಂದ್ ಬೋಳಾರ್ ಇಂದು (ಜನವರಿ 30) ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಮಂಗಳೂರಿನ ಪಂಪ್ ವೆಲ್ ರಸ್ತೆಯಲ್ಲಿ ಅವಘಡ ಸಂಭವಿಸಿದ್ದು, ಅಪಘಾತದಲ್ಲಿ ಅರವಿಂದ್ ಬೋಳಾರ್ ಗಾಯಗೊಂಡರು. ಗಾಯಗೊಂಡ ನಟ ಅರವಿಂದ ಬೋಳಾರ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಹಾಸ್ಯ ಕಲಾವಿದ ಅರವಿಂದ ಬೋಳಾರ ಚಲಿಸುತ್ತಿದ್ದ ಸ್ಕೂಟರ್ ಸ್ಕಿಡ್ ಆಗಿ ಅವಘಡ ಸಂಭವಿಸಿದೆ. ಆಸ್ಪತ್ರೆಗೆ ಭೇಟಿ ನೀಡಿದ ನಟ , ನಿರ್ದೇಶಕ ದೇವದಾಸ್ ಕಾಪಿ, ಅರವಿಂದ ಬೋಳಾರ್ ಕಾಲಿಗೆ ಪೆಟ್ಟಾಗಿದ್ದು ಚಿಕಿತ್ಸೆ ನೀಡಲಾಗ್ತಿದೆ ಎಂದು ಹೇಳಿದ್ದಾರೆ. ತನ್ನ ಅದ್ಭುತ ನಟನೆ, ವಿಶಿಷ್ಟ ಮ್ಯಾನರಿಸಂ ಮೂಲಕ ತುಳು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ ಅತ್ಯಧಿಕ ಅಭಿಮಾನಿಗಳನ್ನು ಹೊಂದಿದವರು. ತುಳು ರಂಗಭೂಮಿಯ ಹಾಸ್ಯ ಚಕ್ರವರ್ತಿ ಎಂದೇ ಕರೆಯಲ್ಪಡುವ ಅರವಿಂದ್ ಬೋಳಾರ್ ಮೇಲೆ ಈ ಹಿಂದೆ ದೂರು ದಾಖಲಾಗಿತ್ತು.ಈ ವೇಳೆ ಅನೇಕ ಕಲಾವಿದರು ಇವರ ಬೆಂಬಲಕ್ಕೆ ನಿಂತಿದ್ರು