ತ್ರಿಶಾ ಕೃಷ್ಣನ್, ದಳಪತಿ ವಿಜಯ್ ಅವರ ಮುಂದಿನ ಚಿತ್ರ 'ದಳಪತಿ 67' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಲೋಕೇಶ್ ಕನಕರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪೂಜೆ ಕಾರ್ಯ ನಡೆದಿದ್ದು, ಶೂಟಿಂಗ್ ಕೂಡ ಶುರುವಾಗಿದೆ. ಇದರಲ್ಲಿ ಸಂಜಯ್ ದತ್, ಮನ್ಸೂರ್ ಅಲಿ ಖಾನ್, ಮನೋಬಾಲಾ, ಗೌತಮ್ ವಾಸುದೇವ್ ಮೈನೋ ಮುಂತಾದ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.