ರವಿತೇಜ ಜೊತೆ ಕೃಷ್ಣ ಚಿತ್ರದಲ್ಲಿ ತ್ರಿಶಾ ನಟಿಸಿದ್ದರು. ಸ್ಟಾಲಿನ್ ಚಿತ್ರದಲ್ಲಿ ಚಿರಂಜೀವಿ ಎದುರು ನಟಿಸಿದವರು ತ್ರಿಶಾ. ಬಾಲಕೃಷ್ಣ ಎದುರು ‘ಲಯನ್’ ಸಿನಿಮಾದಲ್ಲಿ ತ್ರಿಶಾ ನಟಿಸಿದ್ದರು. ‘ಕಿಂಗ್’ ಸಿನಿಮಾದಲ್ಲಿ ನಾಗಾರ್ಜುನ ಎದುರು ತ್ರಿಶಾ ನಟಿಸಿದ್ದರು. 'ಅದಾವರಿ ಮಾತಿಗೆ ಅರ್ಥಾಳೆ ವೆರುಂಗಾಳೆ', 'ಬಾಡಿ ಗಾರ್ಡ್', 'ನಮೋ ವೆಂಕಟೇಶ' ಸಿನಿಮಾಗಳಲ್ಲಿ ವೆಂಕಟೇಶ್ ಜೊತೆ ತ್ರಿಶಾ ನಟಿಸಿದ್ದರು.
ಸದ್ಯದಲ್ಲೇ ತ್ರಿಶಾ ರಾಷ್ಟ್ರೀಯ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅವೆಲ್ಲವೂ ವದಂತಿ ಎಂದು ತ್ರಿಶಾ ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಳೆದ ವರ್ಷ ತ್ರಿಶಾ ಪೊನ್ನಿಯನ್ ಸೆಲ್ವನ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದು ಉತ್ತಮ ಹಿಟ್ ಪಡೆದಿದ್ದರು. ಆ ನಂತರ ಪೊನ್ನಿಯನ್ ಸೆಲ್ವನ್ 2 ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.