ಲಾಲ್ ಸಿಂಗ್ ಚಡ್ಡಾ ಅಮೀರ್ ಖಾನ್ ನಟಿಸಿರುವ ಬಹು ನಿರೀಕ್ಷೆಯ ಚಿತ್ರವನ್ನು ಸಿನಿಪ್ರಿಯರೆಲ್ಲ ಒಟ್ಟಾಗಿ ತಿರಸ್ಕರಿಸಿದ್ದರು. ಚಿತ್ರ ಬಿಡುಗಡೆಯಾದ ಥಿಯೇಟರ್ ಗಳೆಲ್ಲಾ ಖಾಲಿ ಹೊಡೆದು ನಿರ್ಮಾಪಕರು ದೊಡ್ಡ ನಷ್ಟವನ್ನೇ ಅನುಭವಿಸಿದ್ದರು. ನೆಟ್ ಫ್ಲಿಕ್ಸ್ ಲಾಲ್ ಸಿಂಗ್ ಚಡ್ಡಾ ಜನ ಇಷ್ಟ ಪಟ್ಟಿದ್ದರು. ಗೂಗಲ್ ನಲ್ಲಿ ಜನ ಸರ್ಚ್ ಮಾಡಿದ್ದರಲ್ಲಿ ಈ ಚಿತ್ರ 8ನೇ ಸ್ಥಾನದಲ್ಲಿದೆ.
ವಿಜಯ್ ಸಲ್ಗಾಂವ್ಕರ್ ಆಗಿ ಅಜಯ್ ದೇವಗನ್ ಅವರು ಅಭಿನಯಿಸಿರುವ ದೃಶ್ಯಂ 2 ಬಾಲಿವುಡ್‍ನಲ್ಲಿ ಸಂಚಲನ ಸೃಷ್ಟಿಸಿತ್ತು. ಕೋಟಿ ಕೋಟಿ ಕಲೆಕ್ಷನ್ ಮೂಲಕ ಅಜಯ್ ದೇವಗನ್ ದೊಡ್ಡ ಹಿಟ್ ತಂದು ಕೊಟ್ಟಿದೆ. ಈ ಸಿನಿಮಾವೂ ಮಲಯಾಳಂನ ದೃಶ್ಯಂ 2 ಚಿತ್ರದ ಹಿಂದಿ ರಿಮೇಕ್. ಅಭಿಷೇಕ್ ಪಾಠಕ್ ನಿರ್ದೇಶಿಸಿದ, ದೃಶ್ಯಂ 2 ನಲ್ಲಿ ತಬು, ಅಕ್ಷಯ್ ಖನ್ನಾ, ಇಶಿತಾ ದತ್ತಾ, ಶ್ರಿಯಾ ಸರನ್ ಮತ್ತು ಸೌರಭ್ ಶುಕ್ಲಾ ಸಹ ನಟಿಸಿದ್ದಾರೆ. ಗೂಗಲ್ ನಲ್ಲಿ ಜನ ಸರ್ಚ್ ಮಾಡಿದ್ದರಲ್ಲಿ ಈ ಚಿತ್ರ 9ನೇ ಸ್ಥಾನದಲ್ಲಿದೆ.