Rashmika Mandanna: ಟಾಲಿವುಡ್, ಬಾಲಿವುಡ್ನಲ್ಲಿ ಬ್ಯುಸಿ ಆಗಿರುವ ನಟಿ ರಶ್ಮಿಕಾ ಕ್ರಶ್ಗೆ ದೊಡ್ಡ ಅಭಿಮಾನಿ ಬಳಗವೇ ಇರುವುದು ಗೊತ್ತೇ ಇದೆ. ನಟರನ್ನು ಸಹ ರಶ್ಮಿಕಾ ತನ್ನತ್ತ ಸೆಳೆದಿದ್ದಾರೆ. ಟಾಲಿವುಡ್ ಜನಪ್ರಿಯ ನಟ ಬಾಲಯ್ಯ ತಮ್ಮ ಕ್ರಶ್ ಯಾರೆಂದು ಹೇಳಿಕೊಂಡಿದ್ದಾರೆ.
ನನ್ನ ಲೇಟೆಸ್ಟ್ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಎಂದು ನಟ ಬಾಲಯ್ಯ ಹೇಳಿಕೊಂಡಿದ್ದು, ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
2/ 8
ಟಾಲಿವುಡ್ ಸ್ಟಾರ್ ಬಾಲಯ್ಯ ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವುದರ ಜೊತೆಗೆ ಒಟಿಟಿಯಲ್ಲಿ ಚಾಟ್ ಶೋನ ನಿರೂಪಣೆಯ ಹೊಣೆ ಹೊತ್ತಿದ್ದಾರೆ. ಸದ್ಯ ತಮ್ಮ ಶೋನಲ್ಲಿ ನಟ ಬಾಲಯ್ಯ ತಮ್ಮ ಕ್ರಶ್ ರಶ್ಮಿಕಾ ಎಂದು ಹೇಳಿದ್ದಾರೆ.
3/ 8
ಅಖಂಡ ಚಿತ್ರದ ಸೂಪರ್ ಸಕ್ಸಸ್ ನಂತರ ಒಟಿಟಿಯಲ್ಲಿ ಅನ್ಸ್ಟಾಪಬಲ್ 2 (Unstoppable 2) ಚಾಟ್ ಶೋನ ಬಾಲಯ್ಯ ನಡೆಸಿಕೊಡುತ್ತಿದ್ದಾರೆ.
4/ 8
ಈ ಶೋನ ಮೊದಲ ಸಂಚಿಕೆಯ ಅತಿಥಿಯಾಗಿ ನಟ ವಿಶ್ವಕ್ ಸೇನ್ ಮತ್ತು ಸಿದ್ದು ಜೊನ್ನಲಗಡ್ಡ ಕಾಣಿಸಿಕೊಂಡಿದ್ದಾರೆ.
5/ 8
ಈ ಶೋನಲ್ಲಿ ಬಾಲಯ್ಯ ಅವರ ನಿದ್ದೆಗೆಡಿಸಿರುವ ಸುಂದರಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. ಆಕೆ ತನ್ನ ಕ್ರಶ್ ಎಂದು ರಿವೀಲ್ ಮಾಡಿದ್ದಾರೆ.
6/ 8
ರಾಜಪೇಟೆಯಲ್ಲಿ ಜನಿಸಿದ ರಶ್ಮಿಕಾ, ಸ್ಯಾಂಡಲ್ವುಡ್ ನಲ್ಲಿ ಮಿಂಚಿ, ಟಾಲಿವುಡ್ನಲ್ಲೂ ಹೆಸರು ಮಾಡಿದವರು. ಇದೀಗ ಬಾಲಿವುಡ್ ನ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ ರಶ್ಮಿಕಾ.
7/ 8
ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರೀಗ ‘ನ್ಯಾಷನಲ್ ಕ್ರಶ್ ಎಂದೂ ಫ್ಯಾನ್ ಗಳಿಂದ ಗುರುತಿಸಿಕೊಳ್ಳುತ್ತಿದ್ದಾರೆ.
8/ 8
ತೆಲುಗು, ತಮಿಳು ಜೊತೆಗೆ ಬಾಲಿವುಡ್ನಲ್ಲೂ ನಟಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟಿ ರಶ್ಮಿಕಾ ಎಂದರೆ ತೆಲುಗು ಸ್ಟಾರ್ ಬಾಲಯ್ಯ ಅವರಿಗೂ ಇಷ್ಟವಾಗಿದ್ದಾರಂತೆ.