ಟಾಲಿವುಡ್ ಖ್ಯಾತ ಗಾಯಕಿ ಮಂಗ್ಲಿ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ವೈರಲ್ ಆಗಿದೆ. ಬಳ್ಳಾರಿಯಲ್ಲಿ ಕಾರಿನ ಮೇಲೆ ಕೆಲವರು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಸುದ್ದಿಯನ್ನು ಮಂಗ್ಲಿ ಸುಳ್ಳು ಅಂತಿದ್ದಾರೆ.
2/ 8
ತನ್ನ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಸುಳ್ಳು ಎಂದು ಮಂಗ್ಲಿ ಹೇಳಿದ್ದಾರೆ. ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಬಗ್ಗೆ ನಡೆಯುತ್ತಿರುವ ಸುಳ್ಳು ಪ್ರಚಾರಗಳನ್ನು ನಂಬಬೇಡಿ ಎಂದು ಗಾಯಕಿ ಮನವಿ ಮಾಡಿದರು.
3/ 8
ಶನಿವಾರ ಬಳ್ಳಾರಿಯಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು ಎಂದು ಮಂಗ್ಲಿ ಹೇಳಿದರು. ಕಾರ್ಯಕ್ರಮ ಎಷ್ಟು ಅಚ್ಚುಕಟ್ಟಾಗಿ ನಡೆದಿದೆ ಎಂಬುದು ಫೋಟೋ, ವಿಡಿಯೋ ನೋಡಿದರೆ ತಿಳಿಯುತ್ತದೆ ಎಂದರು. ಕನ್ನಡ ನಾಡಿನ ಜನತೆ ತನ್ನ ಮೇಲೆ ತೋರಿದ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
4/ 8
ಕಾರ್ಯಕ್ರಮದ ಆಯೋಜಕರು ಮತ್ತು ಅಧಿಕಾರಿಗಳು ನನ್ನನ್ನು ಚೆನ್ನಾಗಿ ನಡೆಸಿಕೊಂಡರು ಎಂದು ಮಂಗ್ಲಿ ಹೇಳಿದ್ದಾರೆ. ನನ್ನ ಕಾರಿನ ಮೇಲೆ ಯಾವ ಹಲ್ಲೆ ನಡೆದಿಲ್ಲ. ಇಂತಹ ಸುಳ್ಳು ಸುದ್ದಿಯನ್ನು ಯಾರೂ ನಂಬಬಾರದು ಎಂದು ಹೇಳಿದ್ದಾರೆ.
5/ 8
ಶನಿವಾರ ಬಳ್ಳಾರಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಬಳ್ಳಾರಿ ಹಬ್ಬದ ಕಾರ್ಯಕ್ರಮದಲ್ಲಿ ಗಾಯಕಿ ಮಂಗ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ನಟ ರಾಘವೇಂದ್ರ ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಕೂಡ ಭಾಗವಹಿಸಿದ್ದರು.
6/ 8
ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ಎಸೆತಕ್ಕೆ ಸಂಬಂಧಿಸಿದಂತೆ ಮಾತಾಡಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ವೇದಿಕೆ ಬಳಿಯ ಕಾರ್ ಮೇಲೆ ಯಾವುದೇ ಕಲ್ಲು ತೂರಾಟ ನಡೆದಿಲ್ಲ ಎಂದಿದ್ದಾರೆ.
7/ 8
ಗ್ಲಾಸ್ ಒಡೆದ ಕಾರ್ ನಲ್ಲಿ ಮಂಗ್ಲಿ ಅವರು ಇರಲಿಲ್ಲಯಾವುದೇ ಲಾಠಿ ಚಾರ್ಜ್ ಸಹ ಮಾಡಿಲ್ಲ. ಕಾರಿನ ಮೇಲೆ ಯಾವುದೋ ಒಂದು ವಸ್ತು ಬಿದ್ದು ಗ್ಲಾಸ್ ಹೊಡೆದಿದೆ. ಪುನೀತ್ ಪುತ್ಥಳಿ ಅನಾವರಣ ತಡವಾದ ಹಿನ್ನೆಲೆ ಹೆಚ್ಚು ಜನ ಸೇರಿದ್ದರು.
8/ 8
ಈ ರೀತಿಯ ಕಾರ್ಯಕ್ರಮದಲ್ಲಿ ಹೆಚ್ಚು ಜನ ಸೇರುವುದರಿಂದ ಕೆಲ ತೊಂದರೆಯಾಗಿದೆ. ಉತ್ಸವಕ್ಕೆ ಮೂರು ಜಿಲ್ಲೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು ಎಂದು ರಂಜಿತ್ ಕುಮಾರ್ ಹೇಳಿದ್ರು.