Khushbu Sundar: ಇತ್ತೀಚಿನ ವರ್ಷಗಳಲ್ಲಿ ಖುಷ್ಬೂ ಸಖತ್ ದಪ್ಪ ಆಗಿದ್ದರು. ಅವರ ದೇಹದ ತೂಕ ಅಗತ್ಯಕ್ಕಿಂತ ಜಾಸ್ತಿ ಆಗಿತ್ತು. ಆದರೆ ಈಗ ಅವರು ಬದಲಾಗಿದ್ದಾರೆ. ಕಠಿಣ ಪರಿಶ್ರಮದಿಂದ ಬಳುಕುವ ಬಳ್ಳಿಯಂತೆ ಸ್ಲಿಮ್ ಆಗಿದ್ದಾರೆ. ಅವರ ಫೋಟೋಗಳನ್ನು ನೀವು ನೋಡಿದ್ರೆ..ದಂಗಾಗ್ತೀರಾ
ಇತ್ತೀಚಿನ ವರ್ಷಗಳಲ್ಲಿ ಖುಷ್ಬೂ ಸಖತ್ ದಪ್ಪ ಆಗಿದ್ದರು. ಅವರ ದೇಹದ ತೂಕ ಅಗತ್ಯಕ್ಕಿಂತ ಜಾಸ್ತಿ ಆಗಿತ್ತು. ಆದರೆ ಈಗ ಅವರು ಬದಲಾಗಿದ್ದಾರೆ. ಕಠಿಣ ಪರಿಶ್ರಮದಿಂದ ಬಳುಕುವ ಬಳ್ಳಿಯಂತೆ ಸ್ಲಿಮ್ ಆಗಿದ್ದಾರೆ. ಅವರ ಫೋಟೋಗಳನ್ನು ನೀವು ನೋಡಿದ್ರೆ..ದಂಗಾಗ್ತೀರಾ
2/ 6
ಖುಷ್ಬೂ ಅವರ ಸ್ಲಿಮ್ ಅವತಾರದ ಫೋಟೋ (Kushboo Photos) ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕೇವಲ 3 ತಿಂಗಳಲ್ಲಿ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ ‘ರಣಧೀರ’ನ ಚೆಲುವೆ ಖುಷ್ಬೂ..
3/ 6
ತಮ್ಮ ಈ ಮೊದಲಿನ ಫೋಟೋ ಜತೆಗೆ ಇಂದಿನ ಫೋಟೋವನ್ನು ಅಕ್ಕಪಕ್ಕ ಇಟ್ಟು ಖುಷ್ಬೂ ಪೋಸ್ಟ್ ಮಾಡಿದ್ದಾರೆ. ಎರಡೂ ಫೋಟೋದಲ್ಲಿನ ವ್ಯತ್ಯಾಸ ಕಂಡು ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ.
4/ 6
ಅಲ್ಲಿಂದ ಇಲ್ಲಿಯವರೆಗಿನ ಪಯಣ. 20 ಕೆಜಿ ಸಣ್ಣಗಾಗಿದ್ದೇನೆ. ತುಂಬ ಆರೋಗ್ಯಕರವಾಗಿದ್ದೇನೆ. ನಿಮ್ಮನ್ನು ನೀವು ನೋಡಿಕೊಳ್ಳಿ. ಆರೋಗ್ಯವೇ ಭಾಗ್ಯ. ನನಗೆ ಹುಷಾರಿಲ್ಲವೇ ಎಂದು ಕೆಲವರು ಕೇಳುತ್ತಿದ್ದೀರಿ. ನಿಮ್ಮ ಕಾಳಜಿಗೆ ಧನ್ಯವಾದ ಎಂದು ನಟಿ ಟ್ವೀಟ್ ಮಾಡಿದ್ದಾರೆ.
5/ 6
ಇನ್ನು 10 ಜನ ತನ್ನನ್ನು ನೋಡಿ ತೂಕ ಇಳಿಸಿಕೊಂಡು ಫಿಟ್ ಆಗಿದ್ದರೆ ಅದೇ ನನ್ನ ಯಶಸ್ಸು ಎಂದು ಖಷ್ಬೂ ಹೇಳಿದ್ದಾರೆ. ಇತ್ತೀಚೆಗೆ ತೆರೆಕಂಡ ರಜನಿಕಾಂತ್ ಅಭಿನಯದ ಅಣ್ಣಾತೆ ಸಿನಿಮಾದಲ್ಲಿ ಖುಷ್ಬೂ ಕಾಣಿಸಿಕೊಂಡಿದ್ದರು.
6/ 6
ಕಲಿಯುಗ ಪಾಂಡವರು ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾದ ಖುಷ್ಬೂ ಆ ನಂತರ ತಮಿಳಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಸುಂದರ್ ಅವರನ್ನು ಮದುವೆಯಾದ ನಂತರ ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಕುಷ್ಬೂ ಸದ್ಯ ತಮಿಳು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ.