PHOTOS: ಟಾಲಿವುಡ್ ಪ್ರಿನ್ಸ್ ಆದರೂ ಮಗಳಿಗೆ ಮಾತ್ರ ಪ್ರೀತಿಯ ಅಪ್ಪ: 'ಮಹರ್ಷಿ' ಸೆಟ್ನಲ್ಲಿ ಮಗಳೊಂದಿಗೆ ಮಹೇಶ್ ಬಾಬು..!
ಟಾಲಿವುಡ್ ಪ್ರಿನ್ಸ್ ಮಹೇಶ್ಬಾಬು ಅವರಿಗೆ ಸಿನಿಮಾಗಳ ವಿಷಯದಲ್ಲಿ ಎಷ್ಟು ಬದ್ಧತೆ ಇದೆಯೋ, ತನ್ನ ಕುಟುಂಬದ ಬಗ್ಗೆಯೂ ಅಷ್ಟೇ ಜವಾಬ್ದಾರಿ ಇದೆ. ಹಣ ಮಾಡಿದರೆ ಸಾಕು ಇಡೀ ಕುಟುಂಬ ಖುಷಿಯಾಗಿರುತ್ತದೆ ಎನ್ನುವ ಜಾಯಮಾನದವರಲ್ಲ ಮಹೇಶ್. ಶೂಟಿಂಗ್ನಿಂದ ಕೊಂಚ ಸಮಯ ಸಿಕ್ಕರೂ ಸಾಕು, ಅವರು ಹೆಂಡತಿ, ಮಕ್ಕಳು ಅಂತ ಅವರೊಂದಿಗೆ ಕಾಲ ಕಳೆಯಲು ಹೋಗುತ್ತಾರೆ. ಇತ್ತೀಚೆಗೆ ಅವರು ತಮ್ಮ ಮಗಳು ಸೀತಾ ಜೊತೆ 'ಮಹರ್ಷಿ' ಸಿನಿಮಾ ಸೆಟ್ನಲ್ಲಿ ಕಾಲ ಕಳೆದಿದ್ದರು. ಆಗ ತೆಗೆಯಲಾದ ಚಿತ್ರಗಳು ಈಗ ವೈರಲ್ ಆಗುತ್ತಿವೆ.