ಬಾಹುಬಲಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ ತಮ್ಮ ಆರಾಧ್ಯ ದೈವ ಜುರಾಸಿಕ್ ಪಾರ್ಕ್ ಚಿತ್ರದ ಡೈರೆಕ್ಟರ್ ಸ್ವೀವನ್ ಸ್ಪೀಲ್ಬರ್ಗ್ ಅವರನ್ನ ನೇರವಾಗಿಯೇ ಕಂಡು ಮಗುವಿನಂತೆ ಥ್ರಿಲ್ ಆಗಿದ್ದಾರೆ.
2/ 7
ಜುರಾಸಿಕ್ ಪಾರ್ಕ್ ನಂತಹ ಚಿತ್ರ ಕೊಟ್ಟ ಸ್ವೀವನ್ ಸ್ಪೀಲ್ಬರ್ಗ್ ನಿಜಕ್ಕೂ ಎಲ್ಲರ ಬಾಲ್ಯವನ್ನ ತಮ್ಮ ಚಿತ್ರದ ಮೂಲಕ ಇನ್ನಷ್ಟು ಮತ್ತಷ್ಟು ಸುಂದರಗೊಳಿಸಿದ್ದಾರೆ. ಇವರನ್ನ ಕಂಡ ಡೈರೆಕ್ಟರ್ ರಾಜಮೌಳಿ ಕೂಡ ದೇವರನ್ನ ಕಂಡಷ್ಟೇ ಖುಷಿಪಟ್ಟಿದ್ದಾರೆ.
3/ 7
ಸ್ವೀವನ್ ಸ್ಪೀಲ್ಬರ್ಗ್ ಎಲ್ಲ ಚಿತ್ರ ನಿರ್ದೇಶಕರಿಗೂ ಒಂದು ಅಗಾಧವಾದ ಸ್ಪೂರ್ತಿನೇ ಆಗಿದ್ದಾರೆ. ಇವರನ್ನ ಕಂಡ ನಿರ್ದೇಶಕರು ಸಹಜವಾಗಿಯೇ ಖುಷಿ ಆಗುತ್ತಾರೆ. ಅದೇ ರೀತಿ ದಕ್ಷಿಣದ ಮಹಾನ್ ನಿರ್ದೇಶಕ ರಾಜಮೌಳಿ ಕೂಡ ಥ್ರಿಲ್ ಆಗಿದ್ದಾರೆ. ಮಗುವಿನ ಹಾಗೆ ಖುಷಿಪಟ್ಟಿದ್ದಾರೆ.
4/ 7
ಸ್ವೀವನ್ ಸ್ಪೀಲ್ಬರ್ಗ್ ಅವರನ್ನ ನೋಡಿದಾಕ್ಷಣ, ರಾಜಮೌಳಿ ಮಗುವಿನ ಹಾಗೇನೆ ತಮ್ಮ ಕೆನ್ನೆ ಮೇಲೆ ಕೈ ಇಟ್ಟುಕೊಂಡು ತದೇಕಚಿತ್ತದಿಂದ ಸ್ವೀವನ್ ಸ್ಪೀಲ್ಬರ್ಗ್ ಅವರನ್ನ ನೋಡಿದ್ದಾರೆ.
5/ 7
ಗೊಲ್ಡನ್ ಗ್ಲೋಬ್ ಅವಾರ್ಡ್ ಸಮಯದಲ್ಲಿಯೇ ರಾಜಮೌಳಿ ತಮ್ಮ ಈ ದೇವರನ್ನ ಕಂಡಿರೋ ಹಾಗೆ ಕಾಣುತ್ತಿದೆ. ಆದರೆ ಆ ಬಗ್ಗೆ ರಾಜಮೌಳಿ ಏನೂ ಹೇಳಿಕೊಂಡಿಲ್ಲ.
6/ 7
ರಾಜಮೌಳಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿ ಈ ವಿಶೇಷ ಸಮಯದ ಫೋಟೋವನ್ನ ಹಂಚಿಕೊಂಡಿದ್ದಾರೆ. I just met GOD!!! ನಾನು ದೇವರನ್ನ ಭೇಟಿಯಾದೆ ಅಂತಲೂ ಬರೆದುಕೊಂಡಿದ್ದಾರೆ.
7/ 7
ಬಾಹುಬಲಿ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಅವರ ಸಿನಿಮಾಗಳನ್ನ ನೋಡಿಯೇ ಅನೇಕರು ಸ್ಪೂರ್ತಿ ಪಡೆದಿದ್ದಾರೆ. ಹಾಗಿರೋವಾಗ ಅದೇ ರಾಜಮೌಳಿ ಅವ್ರು, ಹಾಲಿವುಡ್ ಡೈರೆಕ್ಟರ್ ಸ್ವೀವನ್ ಸ್ಪೀಲ್ಬರ್ಗ್ ಭೇಟಿಯಾಗಿ ಇನ್ನಿಲ್ಲದಂತೆ ಸಂತೋಷ ಪಟ್ಟಿದ್ದಾರೆ.