Shruti Haasan: ತಮ್ಮ ಸಂಬಂಧವನ್ನು ಮರೆಮಾಚಲು ಬಯಸುವುದಿಲ್ಲ, ಮದುವೆಯ ಕುರಿತು ಮೌನ ಮುರಿದ ಶ್ರುತಿ ಹಾಸನ್
ಟಾಲಿವುಡ್ ಜೊತೆಗೆ, ಕಾಲಿವುಡ್ ಮತ್ತು ಬಾಲಿವುಡ್ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ಶ್ರುತಿ ಹಾಸನ್, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಶ್ರುತಿ ಹಾಸನ್ ಲವ್ ಸ್ಟೋರಿ ಸಖತ್ ಸುದ್ದಿಯಲ್ಲಿದೆ.
ಶ್ರುತಿ ಹಾಸನ್ ಬಗ್ಗೆ ವಿಶೇಷ ಪರಿಚಯ ಮಾಡಿಸಿಕೊಡುವ ಅಗತ್ಯ ಇಲ್ಲ. ಟಾಲಿವುಡ್ನಲ್ಲಿ ನಂಬರ್ ಒನ್ ನಾಯಕಿಯಾಗಿ ಆಳಿದವರು. ನಂತರ ಗ್ಯಾಪ್ ಪಡೆದುಕೊಂಡು ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗುತ್ತಿದ್ದರು. ಇದೀಗ ಮತ್ತೊಮ್ಮೆ ಅಂಥದ್ಧೇ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ.
2/ 7
ಸದ್ಯಕ್ಕೆ ಶ್ರುತಿ ಹಾಸನ್ ಸಲಾರ್ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ.ಇನ್ನೂ ಪೃಥ್ವಿ ರಾಜ್ ಜೊತೆ ಕೂಡ ಮಲಯಾಳಂ ಸಿನಿಮಾ ಒಪ್ಪಿಕೊಂಡಿದ್ದಾರೆ. ಸಲಾರ್ ಸಿನಿಮಾದಲ್ಲಿ ವಿಲನ್ ಶೇಡ್ ಇರೋ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.
3/ 7
ಈ ಹಿಂದೆ ಮಿಚೆಲ್ ಕಾರ್ಸ್ಲಿ ಎಂಬ ವ್ಯಕ್ತಿಯೊಂದಿಗೆ ಪ್ರೇಮದಲ್ಲಿದ್ದ ಶ್ರುತಿ ಹಾಸನ್, ನಂತರ ಮಿಚೆಲ್ ಜೊತೆ ಬ್ರೇಕಪ್ ಮಾಡಿಕೊಂಡರು. ಆದರೆ ಇದೀಗ ಮತ್ತೆ ಶ್ರುತಿ ಡೂಡಲ್ ಕಲಾವಿದೆ ಶಾಂತು ಹಜಾರಿಕಾ ಜೊತೆ ಲವ್ ನಲ್ಲಿದ್ದಾರೆ.
4/ 7
ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಶ್ರುತಿ ತಮ್ಮ ಬಾಯ್ ಫ್ರೆಂಡ್ ಮತ್ತು ತಮ್ಮ ಸಂಬಂಧದ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಹೇಳಿದ್ದಾರೆ. ಶಾಂತನು ಜೊತೆ ಡೇಟಿಂಗ್ ಮಾಡುತ್ತಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ ಮತ್ತು ತಮ್ಮ ಸಂಬಂಧವನ್ನು ಮರೆಮಾಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.
5/ 7
ನಾನು ತುಂಬಾ ಕಷ್ಟಪಟ್ಟು ಮನೆಗೆ ಹೋದಾಗ ನನ್ನ ಜೀವನದ ಪ್ರಮುಖ ಭಾಗವಾಗಿರುವ ಅದ್ಭುತ ಸಂಗಾತಿಯೊಂದಿಗೆ ಇರಲು ಬಯಸುತ್ತೇನೆ. ಹಾಗಾಗಿ ನಮ್ಮ ಸಂಬಂಧವನ್ನು ಮುಚ್ಚಿಡಲು ನನಗೆ ಮನಸ್ಸಿಲ್ಲ. ನಮ್ಮಿಬ್ಬರ ಜೋಡಿ ನನಗೆ ತುಂಬಾ ಇಷ್ಟ ಎಂದು ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ.
6/ 7
ಶೃತಿ ಹಾಸನ್ ತನ್ನ ಜೀವನದ ಪ್ರಮುಖ ಭಾಗವೆಂದರೆ ಶಾಂತಾ ಹಜಾರಿಕಾ ಜೊತೆ ಕಳೆಯುವುದು ಎಂದು ಹೇಳಿದ್ದಾರೆ. ಅದೇ ಸಂದರ್ಶನದಲ್ಲಿ ತನ್ನ ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ, ಶ್ರುತಿ ಹಾಸನ್ ತನ್ನ ಬಳಿ ಉತ್ತರವಿಲ್ಲ ಎಂದಿದ್ದಾರೆ.
7/ 7
ಮದುವೆಯ ವಿಚಾರವೇ ತನಗೆ ಭಯ ಹುಟ್ಟಿಸುತ್ತದೆ ಎಂದು ಈ ಹಿಂದೆಯೂ ಹಲವು ಬಾರಿ ಹೇಳಿರುವುದು ನಮಗೆಲ್ಲ ಗೊತ್ತೇ ಇದೆ. ಮತ್ತು ಈಗ ಗೆಳೆಯನ ಮದುವೆಯಾಗುತ್ತಿದ್ದಾನೆಯೇ? ಅಥವಾ ಈ ಸಂಬಂಧ ಹೀಗೆಯೇ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.