Shriya Saran: ಕನ್ನಡಿ ಮುಂದೆ ನಟಿ ಶ್ರಿಯಾ ಫೋಟೋಶೂಟ್; ಈ ಬ್ಯೂಟಿ ನೋಟಕ್ಕೆ ಫ್ಯಾನ್ಸ್ ಫಿದಾ!
Shriya Saran: ನಟಿ ಶ್ರಿಯಾ ಸರನ್ ಕನ್ನಡಿ ಮುಂದೆ ನಿಂತು ಫೋಟೋಶೂಟ್ ಮಾಡಿಕೊಂಡಿದ್ದಾರೆ. ತಾಯಿಯಾದ ನಂತರವೂ ಈ ಸ್ಟಾರ್ ಹೀರೋಯಿನ್ ತ್ರಿಪುಲರ್ ಸಿನಿಮಾದಲ್ಲಿ ನಟಿಸಿ ಮೆಚ್ಚಿಕೊಂಡಿದ್ದರು. ತನ್ನ ಅಭಿನಯದ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ವಿಷ್ಟಾ ಚಿತ್ರದ ಮೂಲಕ ಟಾಲಿವುಡ್ಗೆ ಪದಾರ್ಪಣೆ ಮಾಡಿದ ನಾಯಕಿ ಕಳೆದ 2 ದಶಕಗಳಿಂದ ತನ್ನದೇ ಆದ ನಟನೆ ಮತ್ತು ಗ್ಲಾಮರ್ನಿಂದ ತೆಲುಗು ಚಿತ್ರರಂಗವನ್ನು ಧೂಳೆಬ್ಬಿಸಿದ್ದಾರೆ.
2/ 8
ಮಗುವಿಗೆ ತಾಯಾದ ಬಳಿಕವೂ ಶ್ರಿಯಾ ಬ್ಯೂಟಿ ಕಡಿಮೆಯಾಗಿಲ್ಲ. ಸಾಂಪ್ರದಾಯಿಕ, ಮಾಡರ್ನ್ ಲುಕ್ಗಳು, ಲೇಟೆಸ್ಟ್ ಡಿಸೈನರ್ ವೇರ್ನೊಂದಿಗೆ ಫೋಟೋಶೂಟ್ಗಳು ಪಡ್ಡೆ ಹುಡುಗರ ನಿದ್ದಗೆಡಿಸಿದೆ. ತನ್ನ ವೈಯುಕ್ತಿಕ ಜೀವನವನ್ನು ಕೂಲ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.
3/ 8
ನಟನೆ ಮಾತ್ರವಲ್ಲ, ಶಾಸ್ತ್ರೀಯ ನೃತ್ಯದಲ್ಲಿಯೂ ಶ್ರಿಯಾ ಸರನ್ ಪ್ರವೀಣೆ. ಇತ್ತೀಚೆಗಷ್ಟೇ ಈ ಮಾಡರ್ನ್ ಡ್ರೆಸ್ ನಲ್ಲಿ ಬಿಳಿ ಪಾರಿವಾಳದಂತೆ ಕಾಣುತ್ತಿರುವ ಶ್ರೀಯಾ ನೆಟ್ಟಿಗರಿಂದ ಮೆಚ್ಚುಗೆ ಗಳಿಸಿದ್ದಾರೆ.
4/ 8
ತೆಲುಗು ಪರದೆಯ ಜೊತೆಗೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲು ನಟಿಸಿ ಅಭಿಮಾನಿ ಬಳಗ ಹೊಂದೊದ್ದಾರೆ. ಶ್ರಿಯಾ ಸರನ್ ಟಾಲಿವುಡ್ನ ಎಲ್ಲಾ ಹಿರಿಯ ಮತ್ತು ಯುವ ಸ್ಟಾರ್ ಹೀರೋಗಳ ಜೊತೆ ನಟಿಸಿ ಸೂಪರ್ ಡೂಪರ್ ಹಿಟ್ ಗಳಿಸಿದ್ದಾರೆ.
5/ 8
ತನ್ನ ಸೌಂದರ್ಯ ಮತ್ತು ನಟನೆಯಿಂದ ಹಲವಾರು ಅಭಿಮಾನಿಗಳನ್ನು ಸಂಪಾದಿಸಿರುವ ಈ ಚೆಲುವೆ 2018 ರಲ್ಲಿ ಆಂಡ್ರೆ ಕೊಸ್ಚೆವ್ ಅವರನ್ನು ಮದುವೆಯಾದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದಾರೆ.
6/ 8
ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಹಾಗೂ ವೈಯಕ್ತಿಕ ಅಪ್ಡೇಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
7/ 8
ಸಿನಿಮಾಗಳ ವಿಚಾರಕ್ಕೆ ಬಂದರೆ. ಸದ್ಯ ಶ್ರಿಯಾ ಬಿಗ್ ಪ್ರಾಜೆಕ್ಟ್ ಒಂದರಲ್ಲಿ ಜ್ಞ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬೆಳ್ಳಿತೆರೆಯಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಮೆರೆದ ಶ್ರೀಯಾಗೆ ಭಾರೀ ಅಭಿಮಾನಿ ಬಳಗವಿದೆ.
8/ 8
ನಟಿ ಶ್ರಿಯಾ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ತಮ್ಮ ಸೌಂದರ್ಯದಿಂದ ಪಡ್ಡೆ ಹುಡುಗರ ನಿದ್ದೆ ಕದ್ದಿದ್ರೂ, ಈಗಲೂ ಅವರ ಬ್ಯೂಟಿಯನ್ನು ಹಾಗೇ ಕಾಪಾಡಿಕೊಂಡು ಬಂದಿದ್ದಾರೆ.