ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಜೀವನದಲ್ಲಿ ದೊಡ್ಡ ತಪ್ಪು ಮಾಡಿದೆ. ಪತಿಯಿಂದ ಬೇರ್ಪಟ್ಟ ನಂತರ ಹಣವಿಲ್ಲದಿದ್ದಾಗ ನಿರ್ಮಾಪಕರೊಬ್ಬರು ಕರೆ ಮಾಡಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ನೀಡಿದ್ದರು ಎಂದು ತಮಗೆ ಸಿನಿಮಾಗಳಲ್ಲಿ ಮತ್ತೆ ಅವಕಾಶ ಹೇಗೆ ಸಿಕ್ತು ಎಂಬುವುದನ್ನು ತಿಳಿಸಿದ್ದರು. ಇನ್ನು, ಪಗ್ರತಿ ಅವರು, ಒಂದು ದಿನದ ಕಾಲ್ ಶೀಟ್ ಗೆ ಪ್ರಗತಿ ಸುಮಾರು 50 ರಿಂದ 70 ಸಾವಿರ ಬೇಡಿಕೆ ಇಟ್ಟಿದ್ದಾರಂತೆ. ಆದರೆ ಇದು ಎಲ್ಲಾ ಸಿನಿಮಾಗಳಿಗೂ ಒಂದೇ ರೀತಿ ಇರೋದಿಲ್ಲ. ದೊಡ್ಡ ಸಿನಿಮಾಗಳಿಗೆ ಒಂದೊಂದು ರೀತಿ, ಕಡಿಮೆ ಬಜೆಟ್ ಸಿನಿಮಾಗಳಿಗೆ ಒಂದೊಂದು ರೀತಿ. ಇಲ್ಲ ಎಂದರೇ, ಪಾತ್ರ ಪ್ರಾಮುಖ್ಯತೆಯ ಮೇಲೆ ಬದಲಾಗಬಹುದು ಎಂದಿದ್ದಾರೆ.