Pooja Hegde: ತನ್ನ ವೃತ್ತಿ ಜೀವನದ ಕೆಟ್ಟ ಸಿನಿಮಾ ಯಾವುದೆಂದು ತಿಳಿಸಿದ ಪೂಜಾ, ಶಾಕಿಂಗ್ ಕಾಮೆಂಟ್ ಮಾಡಿದ ಟಾಲಿವುಡ್ ಬ್ಯೂಟಿ
ಟಾಲಿವುಡ್ ಟಾಪ್ ನಟಿಯರ ಲೀಸ್ಟ್ ನಲ್ಲಿ ಪೂಜಾ ಹೆಗ್ಡೆ ಸಹ ಒಬ್ಬರು. ಆದರೆ ಇದೀಗ ಪೂಜಾ ಲಕ್ ಕೈ ಕೊಟ್ಟಿದ್ದು, ಸಾಲು ಸಾಲು ಸಿನಿಮಾಗಳು ಪ್ಲಾಫ್ ಆಗುತ್ತಿದೆ. ಇದರ ನಡುವೆ ಪೂಜಾ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ.
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು. ಅವರು ತೆಲುಗು ಮತ್ತು ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.
2/ 7
ಮುಂಬೈನಲ್ಲಿ ಹುಟ್ಟಿ ಬೆಳೆದ ಪೂಜಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಇದರೊಂದಿಗೆ ಮಾಡೆಲಿಂಗ್ಗೆ ಅವಕಾಶಗಳು ಬಂದವು. ಇದಾದ ನಂತರ ನಿಧಾನವಾಗಿ ಚಿತ್ರರಂಗಕ್ಕೆ ಕಾಲಿಟ್ಟರು.
3/ 7
ಲೈಲಾ ಚಿತ್ರದೊಂದಿಗೆ ತೆಲುಗು ಚಿತ್ರಂಗಕ್ಕೆ ಕಾಲಿಟ್ಟರು. ನಂತರ ಸಾಲು ಸಾಲು ಸ್ಟಾರ್ ನಟರ ಜೊತೆ ಸೂಪರ್ ಹಿಟ್ ಚಿತ್ರವನ್ನು ನೀಡಿದರು. ಆದರೆ ಇದೀಗ ಪೂಜಾ ಹೆಗ್ಡೆ ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ.
4/ 7
ಅಲಾ ವೈಕುಂಠಪುರಂ ಸಿನಿಮಾದ ಮೂಲಕ ಸೂಪರ್ ಸಕ್ಸಸ್ ನಂತರ ಪೂಜಾ ಸಾಲು ಸಾಲು ಸುಪರ್ ಹಿಟ್ ಸಿನಿಮಾಗಳನ್ನು ನೀಡಿದರು. ಆದರೆ, ಇತ್ತೀಚೆಗಷ್ಟೇ ರಾಧೇ ಶ್ಯಾಮ್, ಆಚಾರ್ಯ ಸಿನಿಮಾಗಳ ಸೋಲಿನ ಬಳಿಕ ಇವರನ್ನು ಐರನ್ ಲೆಗ್ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಆದರೂ ಪೂಜಾ ಹೆಗ್ಡೆ ಕ್ರೇಜ್ ಕಡಿಮೆಯಾಗಲಿಲ್ಲ.
5/ 7
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪೂಜಾ ಹೆಗ್ಡೆ ತಮ್ಮ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತೆಲುಗಿನಲ್ಲಿ ನಟಿಸಿದ 6 ಚಿತ್ರಗಳು ಸತತವಾಗಿ ಹಿಟ್ ಆಗಿರುವುದು ನನ್ನ ವೃತ್ತಿ ಜೀವನದ ದೊಡ್ಡ ಯಶಸ್ಸು ಎನ್ನುತ್ತಾರೆ.
6/ 7
ಅದೇ ರೀತಿ ಮೊಹೆಂಜೊದಾರೋ ಅವರ ವೃತ್ತಿಜೀವನದಲ್ಲಿ ಚಿತ್ರವು ಬಿಗ್ ಡಿಸಾಸ್ಟರ್ ಎಂದು ಹೇಳುತ್ತಾರೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸೋತಿದ್ದು, ತನ್ನ ವೃತ್ತಿಜೀವನದ ಅತ್ಯಂತ ಕೆಟ್ಟ ಚಿತ್ರವಾಯಿತು ಎನ್ನುತ್ತಾರೆ ಪೂಜಾ ಹೆಗ್ಡೆ. ಈ ಚಿತ್ರವು ತನಗೆ ಐರನ್ ಲೆಗ್ ಎಂಬ ಭಾವನೆ ಮೂಡಿಸಿತು ಮತ್ತು ಒಂದು ವರ್ಷದಿಂದ ತನಗೆ ಯಾವುದೇ ಆಫರ್ಗಳು ಬಂದಿಲ್ಲ ಎಂದಿದ್ದಾರೆ.
7/ 7
ಪೂಜಾ ಹೆಗ್ಡೆ ಪ್ರಸ್ತುತ ಸಲ್ಮಾನ್ ಖಾನ್ 'ಕಭಿ ಈತ್ ಕಭಿ ದಿವಾಲಿ' ಸರ್ಕಸ್ ನಂತಹ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೊಂದೆಡೆ ವಿಶೇಷ ಹಾಡುಗಳಲ್ಲೂ ನಟಿಸುವ ಅವಕಾಶ ನೀಡುವ ಮೂಲಕ ಅವರ ಕ್ರೇಜ್ ಹೆಚ್ಚುತ್ತಿದೆ.