ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಪ್ರಮುಖವಾಗಿ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
2/ 8
ತಮನ್ನಾ ಅವರು ಕೆಲ ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡದಲ್ಲಿ ಜಾಗ್ವಾರ್ ಮತ್ತು ಕೆಜಿಎಫ್ ಚಿತ್ರಗಳ ಐಟಮ್ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಾರೆ.
3/ 8
1989 ಡಿಸೆಂಬರ್ 21 ರಂದು ಮುಂಬೈನಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದರು. ತಂದೆ ಸಂತೋಷ್ ಭಾಟಿಯಾ ವಜ್ರ ವ್ಯಾಪಾರಿ. ಮುಂಬೈನಲ್ಲಿಯೇ ವಿಧ್ಯಾಭ್ಯಾಸ ಮುಗಿಸಿದ ತಮನ್ನಾ ತಮ್ಮ 15 ನೇ ವಯಸ್ಸಿನಲ್ಲಿಯೇ ನಟನೆಗೆ ಇಳಿದರು.
4/ 8
2005 ರಲ್ಲಿ ಅಂದ್ರೆ ತಮ್ಮ ಹದಿನೈದನೇ ವಯಸ್ಸಿನಲ್ಲಿ `ಚಾಂದ್ ಸಾ ರೋಷನ್ ಚೆಹರಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಈ ಚಿತ್ರ ಯಶಸ್ವಿಯಾಗಲಿಲ್ಲ.
5/ 8
2005 ರಲ್ಲಿ ತೆಲುಗಿನ ಶ್ರೀ ಮತ್ತು ಮುಂದಿನ ವರ್ಷ ತಮಿಳಿನ ಕೇಡಿ ಚಿತ್ರಗಳಲ್ಲಿ ನಟಿಸಿದರು. ಈ ಚಿತ್ರಗಳ ನಟನೆಗೆ ಪ್ರಶಂಸೆ ಪಡೆದರು. ನಂತರ ತೆರೆಕಂಡ ಹ್ಯಾಪಿ ಡೇಸ್, ಕಲ್ಲೂರಿ ಚಿತ್ರಗಳು ತಮನ್ನಾಗೆ ಇನ್ನಷ್ಟು ಖ್ಯಾತಿ ನೀಡಿದವು.
6/ 8
'ಕೊಂಚಂ ಇಷ್ಟಂ ಕೊಂಚಂ ಕಷ್ಟಂ', ಪೈಯ್ಯ, 100% ಲವ್, ಬದ್ರಿನಾಥ್ ಮುಂತಾದ ಚಿತ್ರಗಳು ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ತಮನ್ನಾಗೆ ಭದ್ರವಾದ ತಳಪಾಯ ಹಾಕಿದವು.
7/ 8
ಹಿಂದಿಯಲ್ಲಿ ಹಿಮ್ಮತ್ತವಾಲಾ, ಎಂಟರ್ಟೇನಮೆಂಟ್ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಬಾಹುಬಲಿ ಚಿತ್ರ ತಮನ್ನಾಗೆ ಭಾರತದಾದ್ಯಂತ ಜನಪ್ರಿಯತೆ ತಂದು ಕೊಟ್ಟಿತು.
8/ 8
ತಮನ್ನಾ ಹಲವಾರು ದೂರದರ್ಶನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಆಗಿ ಅನುಭವವು ಇದೆ. ಮಾರ್ಚ್ 2015 ರಲ್ಲಿ, ಅವರು ಜೀ ತೆಲುಗು ಚಾನೆಲ್ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಸಹಿ ಹಾಕಿದರು.