ನಾಯಕಿ ಮೀರಾ ಜಾಸ್ಮಿನ್ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಅರಸು ಚಿತ್ರದಲ್ಲಿ ಅವರ ನಟನೆಯನ್ನು ಯಾರೂ ಮರೆತಿಲ್ಲ. ಬಹಳ ದಿನಗಳಿಂದ ಸಿನಿಮಾದಿಂದ ದೂರವಿದ್ದರೂ ಈ ನಟಿಗೆ ಅಭಿಮಾನಿಗಳು ಕಡಿಮೆಯಾಗಿಲ್ಲ. ಇನ್ನು ಇತ್ತೀಚೆಗೆ ಮೀರಾ ಜಾಸ್ಮಿನ್ ಫೋಟೋ ವೈರಲ್ ಆಗುತ್ತಿದ್ದು, ಆ ಫೋಟೋಗಳು ಇಲ್ಲಿದೆ.
ನಾಯಕಿ ಮೀರಾ ಜಾಸ್ಮಿನ್ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಅರಸು ಚಿತ್ರದಲ್ಲಿ ಅವರ ನಟನೆಯನ್ನು ಯಾರೂ ಮರೆತಿಲ್ಲ. ಬಹಳ ದಿನಗಳಿಂದ ಸಿನಿಮಾದಿಂದ ದೂರವಿದ್ದರೂ ಈ ನಟಿಗೆ ಅಭಿಮಾನಿಗಳು ಕಡಿಮೆಯಾಗಿಲ್ಲ. ಇನ್ನು ಇತ್ತೀಚೆಗೆ ಮೀರಾ ಜಾಸ್ಮಿನ್ ಫೋಟೋ ವೈರಲ್ ಆಗುತ್ತಿದ್ದು, ಆ ಫೋಟೋಗಳು ಇಲ್ಲಿದೆ.
2/ 7
ಒಂದು ಕಾಲದಲ್ಲಿ ದುಂಡುಮುಖವಾಗಿದ್ದ ಮೀರಾ ಜಾಸ್ಮಿನ್.. ಈಗ ಸಂಪೂರ್ಣ ಬದಲಾಗಿದ್ದಾರೆ. ಸ್ವಲ್ಪ ತೆಳ್ಳಗೆ ಮತ್ತು ನಿಯಮಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಗ್ಲಾಮರ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಮೀರಾ ಜಾಸ್ಮಿನ್ ಹಂಚಿಕೊಂಡಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
3/ 7
ಇತ್ತೀಚಿಗೆ ಮೀರಾ ಜಾಸ್ಮಿನ್ ಪ್ಯಾಂಟ್ ಇಲ್ಲದೆ ಹಂಚಿಕೊಂಡಿರುವ ಹಾಟ್ ಫೋಟೋಗಳು ವೈರಲ್ ಆಗುತ್ತಿವೆ. ಸೆಕೆಂಡ್ ಇನ್ನಿಂಗ್ಸ್ಗೆ ರೆಡಿಯಾಗಿರುವ ಮೀರಾ ಜಾಸ್ಮಿನ್ ತಮ್ಮ ಗ್ಲಾಮರ್ ಸೈಡ್ ಅನ್ನು ತೋರಿಸಿದ್ದಾರೆ. ನಾಯಕಿ ಮತ್ತು ನಿರ್ದೇಶಕರ ಪಾತ್ರಗಳಿಗೆ ನಾನು ಸಿದ್ಧ ಎಂದು ಈ ಮೂಲಕ ಹೇಳುತ್ತಿದ್ದಾರೆ.
4/ 7
ಅರಸು, ಹೂ, ದೇವರು ಕೊಟ್ಟ ತಂಗಿ, ಮೌರ್ಯ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ಮೋಡಿ ಮಾಡಿದ್ದ ಸುಂದರಿ, ಕೊನೆಯದಾಗಿ ಮೋಕ್ಷ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
5/ 7
ತಮ್ಮ ವೃತ್ತಿಜೀವನದ ಆರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರೊಂದಿಗೆ ನಾಯಕಿಯಾಗಿ ನಟಿಸುವ ಅವಕಾಶವನ್ನು ಪಡೆದಿದ್ದರು. ಅದರ ನಂತರ ಅವರು ಅನೇಕ ಟಾಲಿವುಡ್ ಹಾಗೂ ಸ್ಯಾಂಡಲ್ವುಡ್ ಸ್ಟಾರ್ ಹೀರೋಗಳ ಎದುರು ನಟಿಸಿ ಸೈ ಎನಿಸಿಕೊಂಡಿದ್ದಾರೆ.
6/ 7
ಮೀರಾ ಜಾಸ್ಮಿನ್ ಅವರು ಕನ್ನಡ ಜೊತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ಮಿಂಚುತ್ತಿದ್ದ ಕಾಲದಲ್ಲೇ ಮದುವೆಯಾಗಿ ಸಿನಿಮಾದಿಂದ ದೂರ ಸರಿದಿದ್ದರು. 2014 ರಲ್ಲಿ, ಅವರು ದುಬೈನಲ್ಲಿ ಎಂಜಿನಿಯರ್ ಆಗಿದ್ದ ಅನಿಲ್ ಜಾನ್ ಟೈಟಸ್ ಅವರನ್ನು ವಿವಾಹವಾಗಿ ದುಬೈಗೆ ತೆರಳಿದ್ದರು.
7/ 7
ಮೀರಾ ಜಾಸ್ಮಿನ್ ತನ್ನ ಸೌಂದರ್ಯದಿಂದ ನಟ್ಟಿಗರ ಗಮನ ಸೆಳೆದಿದ್ದು, ಕಳೆದ ಕೆಲವು ತಿಂಗಳುಗಳಿಂದ ಅವರು ಶೇರ್ ಮಾಡುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಮೀರಾ ತಮ್ಮ ಗ್ಲಾಮರ್ ಹೆಚ್ಚಿಸಿಕೊಂಡಿರುವುದನ್ನು ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ.