ಟಾಲಿವುಡ್‌ನ ಮೆಗಾ ಫ್ಯಾಮಿಲಿಯಲ್ಲಿ ಸೀಮಂತ ಸಂಭ್ರಮ ನಡೆಯುತ್ತಿದೆ. ಚಿರಂಜೀವಿ ಸೊಸೆ ಉಪಾಸನಾ ಮತ್ತು ಪುತ್ರ ರಾಮ್ ಚರಣ್ ತೇಜಾ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಮೆಗಾ ಫ್ಯಾಮಿಲಿಯಿಂದ ಇತ್ತೀಚಿಗೆ ದುಬೈನಲ್ಲಿ ಅದ್ದೂರಿ ಸೀಮಂತ ಕಾರ್ಯಕ್ರಮ ನಡೆದಿತ್ತು. ಆ ಕ್ಷಣದ ಫೋಟೋಗಳು ಮತ್ತು ವಿಡಿಯೋಗಳೂ ವೈರಲ್ ಆಗಿದ್ದವು. ದುಬೈನಲ್ಲಿ ಉಪಾಸನಾ ಸೀಮಂತ ಆದ್ಮೇಲೆ ಇದೀಗ ಹೈದ್ರಾಬಾದ್‌ನಲ್ಲೂ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಉಪಾಸನಾ ಸೀಮಂತ ಕಾರ್ಯಕ್ರಮದಲ್ಲಿ ಸಾನಿಯಾ ಮಿರ್ಜಾ ಭಾಗಿ ಆಗಿದ್ದರು. ಅಲ್ಲು ಅರ್ಜುನ್ ಸೇರಿದಂತೆ ಅವರ ಫ್ಯಾಮಿಲಿಯ ಸದಸ್ಯರು ಭಾಗಿ ಆಗಿದ್ದರು. ಉಪಾಸನಾ ಅದ್ದೂರಿ ಸೀಮಂತ ಸಂಭ್ರಮದಲ್ಲಿ ಪಿಂಕಿ ರೆಡ್ಡಿ, ಕನಿಕಾ ಕಪೂರ್ ಸೇರಿದಂತೆ ಇನ್ನೂ ಅನೇಕ ಆತ್ಮೀಯರು ಈ ಒಂದು ಸಡಗರದಲ್ಲಿ ಭಾಗಿ ಆಗಿದ್ದರು. ರಾಮ್ ಚರಣ್ ಮತ್ತು ಉಪಾಸನಾ ಅವರ ಈ ಒಂದು ಖುಷಿಯ ಕ್ಷಣದಲ್ಲಿ ಮೆಗಾ ಸ್ಟಾರ್ ಚಿರಂಜೀವಿ, ಸುರೇಖಾ ಕೊನಿಡೇಲ ಭಾಗಿ ಆಗಿದ್ದರು. ಸಹೋದರಿಯರಾದ ಸುಶ್ಮಿತಾ, ಶ್ರೀಜಾ, ಉಪಾಸನಾ ತಾಯಿ ಶ್ರೀಮತಿ ಶೋಭನಾ ಕಾಮಿನೇನಿ, ಸಂಗೀತಾ ರೆಡ್ಡಿ ಹೀಗೆ ಎಲ್ಲರೂ ಭಾಗಿ ಆಗಿದ್ದರು.