ಟಾಲಿವುಡ್ ಮಗಧೀರ ಚಿತ್ರ ಖ್ಯಾತಿಯ ನಟ ರಾಮ್ ಚರಣ್ ತೇಜಾ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲೂ ರಾಮ್ ಚರಣ್ ಬ್ಯುಸಿ ಆಗಿದ್ದಾರೆ. ಟಾಲಿವುಡ್ನ ಹೆಸರಾಂತ ನಿರ್ದೇಶಕ ಶಂಕರ್ ಅವರ ಜೊತೆಗೆ ರಾಮ್ ಚರಣ್ ತೇಜಾ ಸಿನಿಮಾ ಮಾಡುತ್ತಿದ್ದಾರೆ. ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಕೂಡ ಇದೆ. ರಾಮ್ ಚರಣ್ ತೇಜಾ ಅಭಿನಯದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಜೋಡಿ ಆಗಿದ್ದಾರೆ. ಇದೇ ವರ್ಷ ಈ ಚಿತ್ರ ರಿಲೀಸ್ ಆಗೋ ಸಾಧ್ಯತೆ ಕೂಡ ಇದೆ. ರಾಮ್ ಚರಣ್ ಅಭಿನಯದ ಈ ಚಿತ್ರದ ಟೈಟಲ್ ಶೀಘ್ರದಲ್ಲಿಯೇ ರಿಲೀಸ್ ಆಗಲಿದೆ. ದಿಲ್ ರಾಜು ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ಡೈರೆಕ್ಟರ್ ಶಂಕರ್ ನಿರ್ದೇಶನದ ಈ ಚಿತ್ರದ ಕೆಲಸ ಮುಗಿಯುತ್ತಿದ್ದಂತೇನೆ, ರಾಮ್ ಚರಣ್ ತೇಜಾ ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಚಿತ್ರ ಮಾಡುತ್ತಿದ್ದಾರೆ. ಜರ್ಸಿ ಚಿತ್ರ ಖ್ಯಾತಿಯ ಗೌತಮ್ ತಿನ್ನನೂರಿ ಅವರ ಚಿತ್ರವನ್ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಓಕೆ ಎಂದು ಹೇಳಿದ್ದಾರೆ. ರಾಜ ಮೌಳಿ ನಿರ್ದೇಶನದ ಟ್ರಿಪಲ್ ಆರ್ ಚಿತ್ರ ಬಾಕ್ಸ್ ಆಫೀಸ್ನಲ್ಲೂ ಧೂಳ್ ಎಬ್ಬಿಸಿದೆ. ಇದರಿಂದ ರಾಮ್ ಚರಣ್ ತೇಜಾ ಸಿನಿ ಲೈಫ್ಗೆ ಹೊಸ ಮೆರಗು ಕೂಡ ಬಂದಿದೆ.