Ram Charan: ತಾತ ಆಗ್ತಿದ್ದಾರೆ ನಟ ಚಿರಂಜೀವಿ, ಮೊದಲ ಮಗು ನಿರೀಕ್ಷೆಯಲ್ಲಿ ರಾಮ್ ಚರಣ್ ಮತ್ತು ಉಪಾಸನಾ
ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕಾಮಿನೇನಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಪತ್ನಿ ಗರ್ಭಿಣಿ ಎನ್ನುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕಾಮಿನೇನಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 'ಶ್ರೀ ಹನುಮಂಜಿಯವರ ಆಶೀರ್ವಾದದೊಂದಿಗೆ, ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ' ಎಂದು ಇನ್ಸ್ಟಾಗ್ರಾಂನಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
2/ 8
ನಟ ಚಿರಂಜೀವಿ ಅವರು ತಾತಾ ಆಗ್ತಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತು ಮಗ, ಸೊಸೆಗೆ ಪ್ರೀತಿ ಶುಭಾಶಯ ತಿಳಿಸಿದ್ದಾರೆ. ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ.
3/ 8
37 ವರ್ಷದ ರಾಮ್ ಚರಣ್ ಮತ್ತು 33 ವರ್ಷದ ಉಪಾಸನಾ ಕಾಮಿನೇನಿ 2012 ರಲ್ಲಿ ವಿವಾಹವಾಗಿದ್ದರು. ಈಗ ಮಗು ಬರುತ್ತಿರುವುದು ಇಬ್ಬರಿಗೂ ಖುಷಿ ತಂದಿದೆ.
4/ 8
ರಾಮ್ ಚರಣ್ ತೆಲುಗು ಚಿತ್ರರಂಗದ ಪ್ರಮುಖ ಕುಟುಂಬಕ್ಕೆ ಸೇರಿದವರು. ತೆಲುಗು ದಂತಕಥೆ ಚಿರಂಜೀವಿ ಅವರ ಮಗ, ಅಲ್ಲು ಅರವಿಂದ್ ಅವರ ಸೋದರಳಿಯ ಮತ್ತು ಅಲ್ಲು ಅರ್ಜುನ್ ಅವರ ಸೋದರ ಸಂಬಂಧಿ.
5/ 8
ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಅವರು ಶಾಲೆಯಿಂದಲೂ ಸ್ನೇಹಿತರಾಗಿದ್ದರು. ಅವರು ಡಿಸೆಂಬರ್ 2011 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಜೂನ್, 2012 ರಲ್ಲಿ ಹೈದರಾಬಾದ್ನಲ್ಲಿ ವಿವಾಹವಾದರು.
6/ 8
ರಾಮ್ ಚರಣ್ 2007ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಮಗಧೀರ, ನಾಯಕ್, ಏವಡು, ಧ್ರುವ, ರಂಗಸ್ಥಲಂ ಮತ್ತು ಇತರ ವಿಮರ್ಶಾತ್ಮಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
7/ 8
ಈ ವರ್ಷದ ಮೆಗಾ-ಬ್ಲಾಕ್ಬಸ್ಟರ್ RRR ಚಿತ್ರದಲ್ಲಿ ರಾಮ್ ಚರಣ್ ನಟಿಸಿದ್ದಾರೆ. ಇದರಲ್ಲಿ ಅವರು ಜೂನಿಯರ್ ಎನ್ಟಿಆರ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರೊಂದಿಗೆ ನಟಿಸಿದ್ದಾರೆ.
8/ 8
ರಾಮ್ ಚರಣ್ ಪ್ರಸ್ತುತ ತನ್ನ ಮುಂದಿನ ಪ್ರಾಜೆಕ್ಟ್ ಅನ್ನು RC15 ನ ಕೆಲಸದ ಶೀರ್ಷಿಕೆಯೊಂದಿಗೆ ನಟಿ ಕಿಯಾರಾ ಅಡ್ವಾಣಿಯೊಂದಿಗೆ ಚಿತ್ರಿಸುತ್ತಿದ್ದಾರೆ.