ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ರಮೇಶ್ ಅವರು ಮೃತಪಟ್ಟಿದ್ದಾರೆ. ತೆಲುಗಿನ ಖ್ಯಾತ ನಟ, ಹಾಸ್ಯ ಕಲಾವಿದ ಅಲ್ಲು ರಮೇಶ್ ಅವರು ಮಂಗಳವಾರ ಸಂಜೆ ಅವರ ಊರು ವಿಶಾಖಪಟ್ಟಣಂನಲ್ಲಿ ಮೃತಪಟ್ಟಿದ್ದಾರೆ. ನಟನಿಗೆ 52 ವರ್ಷ ವಯಸ್ಸಾಗಿತ್ತು.
2/ 7
ಸಿನಿಮಾ ನಿರ್ದೇಶಕ ಆನಂದ್ ರವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಡನ್ ಆಗಿ ಪೋಸ್ಟ್ ಹಾಕಿದ್ದ ಖ್ಯಾತ ಹಾಸ್ಯ ನಟ ನಿಧನರಾದ ಸುದ್ದಿಯನ್ನು ತಿಳಿಸಿದ್ದಾರೆ.
3/ 7
ರಮೇಶ್ ಅವರು ಮೊದಲು ರಂಗಭೂಮಿಯಿಂದ ನಟನೆ ಶುರು ಮಾಡಿದರು. ಚಿರುಜಲ್ಲು ಸಿನಿಮಾದ ಮೂಲಕ ಅವರು ಟಾಲಿವುಡ್ಗೆ ಎಂಟ್ರಿ ಕೊಟ್ಟರು. ತೊಲು ಬೊಮ್ಮಲಾಟ, ಮಥುರಾ ವೈನ್ಸ್, ವೀದಿ, ಬ್ಲೇಡ್ ಬಾಬ್ಜಿ, ನೆಪೊಲೀಯನ್ ಸಿನಿಮಾದಲ್ಲಿ ನಟಿಸಿದ್ದರು. ಕೊನೆಯಬಾರಿಗೆ ಅನುಕೊನಿ ಪ್ರಣಯಂ ಸಿನಿಮಾದಲ್ಲಿ ನಟಿಸಿದ್ದರು.
4/ 7
ನಟ ಮಾ ವಿದಕು ಎನ್ನುವ ವೆಬ್ ಸಿರೀಸ್ನಲ್ಲಿಯೂ ನಟಿಸಿದ್ದರು. ಚಿಕ್ಕ ಪುಟ್ಟ ರೋಲ್ ಮಾಡುತ್ತಿದ್ದರೂ ತಮ್ಮ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ ನಟ.
5/ 7
ತಮ್ಮ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟನ ಅಗಲಿಕೆ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
6/ 7
ನಟ ಅಲ್ಲು ರಮೇಶ್ ಅವರು ಸಣ್ಣಪುಟ್ಟ ರೋಲ್ ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ನಟನ ಸಾವಿನ ಕುರಿತು ನೆಟ್ಟಿಗರು ಸಂತಾಪ ವ್ಯಕ್ತಪಡಿಸಿದ್ದಾರೆ.
7/ 7
ಇತ್ತೀಚಿನ ವರ್ಷಗಳಲ್ಲಿ ಯುವ ನಟರೂ ಕೂಡಾ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಚಿಕ್ಕ ವಯಸ್ಸಿನವರೂ ಹೃದಯಾಘಾತದಿಂದ ನಿಧನರಾಗುತ್ತಿದ್ದಾರೆ.
First published:
17
Allu Ramesh: ಖ್ಯಾತ ಹಾಸ್ಯ ನಟ ಅಲ್ಲು ರಮೇಶ್ ಇನ್ನಿಲ್ಲ