HBD Prakash Raj: ಬಹುಭಾಷಾ ನಟನಿಗೆ ಇಂದು ಜನ್ಮದಿನದ ಸಂಭ್ರಮ, ಮಂಗಳೂರಿನ 'ರೈ', 'ರಾಜ್' ಆಗಿದ್ದರ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ!

ಬಹುಭಾಷಾ ನಟ ಪ್ರಕಾಶ್ ರೈ ಗೆ ( ಪ್ರಕಾಶ್ ರಾಜ್) ಇಂದು ಜನ್ಮದಿನದ ಸಂಭ್ರಮ. 26 ಮಾರ್ಚ್ 1965ರಲ್ಲಿ ಜನಿಸಿದ ಇವರಿಗೆ ಇಂದು 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

First published:

  • 17

    HBD Prakash Raj: ಬಹುಭಾಷಾ ನಟನಿಗೆ ಇಂದು ಜನ್ಮದಿನದ ಸಂಭ್ರಮ, ಮಂಗಳೂರಿನ 'ರೈ', 'ರಾಜ್' ಆಗಿದ್ದರ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ!

    ಬಹುಭಾಷಾ ನಟ ಪ್ರಕಾಶ್ ರೈ ಗೆ ( ಪ್ರಕಾಶ್ ರಾಜ್) ಇಂದು ಜನ್ಮದಿನದ ಸಂಭ್ರಮ. 26 ಮಾರ್ಚ್ 1965ರಲ್ಲಿ ಜನಿಸಿದ ಇವರಿಗೆ ಇಂದು 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನು, ತನ್ನದೇ ಆದ ವಿಭಿನ್ನ ನಟನೆಯ ಮೂಲಕ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಸೇರಿದಂತೆ ಅನೇಖ ಭಾಷೆಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ತಂದೆ ಮಂಜುನಾಥ್ ರೈ ತಾಯಿ ಸ್ವರ್ಣಲತಾ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನ ಪ್ರಸಿದ್ದ ಸೇಂಟ್ ಜೋಸೆಫ್ ಶಾಲೆಯಲ್ಲಿ. ಉನ್ನತ ಶಿಕ್ಷಣವನ್ನು ಸೇಂಟ್ ಜೋಸೆಫ್ ಕಾಲೇಜ್ ನಲ್ಲಿ ಪೂರ್ಣಗೊಳಿಸಿದ್ದಾರೆ.

    MORE
    GALLERIES

  • 27

    HBD Prakash Raj: ಬಹುಭಾಷಾ ನಟನಿಗೆ ಇಂದು ಜನ್ಮದಿನದ ಸಂಭ್ರಮ, ಮಂಗಳೂರಿನ 'ರೈ', 'ರಾಜ್' ಆಗಿದ್ದರ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ!

    ಪ್ರಕಾಶ್ ರಾಜ್ ಮೊದಲಿಗೆ ಕನ್ನಡದ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ "ಬಿಸಿಲು ಕುದುರೆ" ಎಂಬ ಧಾರಾವಾಹಿಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಇವರು ಕನ್ನಡ ಸೇರಿದಂತೆ ತುಳು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ನಂತರ ಇವರ ತಮಿಳು ಚಿತ್ರರಂಗದ ನಿರ್ದೇಶಕ ಕೆ. ಬಾಲಚಂದ್ರ ಇವರ ಅದ್ಭುತ ನಟನೆಯನ್ನು ಗುರುತಿಸಿ ಚಿತ್ರರಂಗಕ್ಕೆ ಕರೆತಂದರು.

    MORE
    GALLERIES

  • 37

    HBD Prakash Raj: ಬಹುಭಾಷಾ ನಟನಿಗೆ ಇಂದು ಜನ್ಮದಿನದ ಸಂಭ್ರಮ, ಮಂಗಳೂರಿನ 'ರೈ', 'ರಾಜ್' ಆಗಿದ್ದರ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ!

    ಪ್ರಕಾಶ್ ರೈ ಎಂಬ ಹೆಸರು ಪ್ರಕಾಶ್ ರಾಜ್ ಎಂದು ಬದಲಾಗಿದ್ದೆ ಒಂದು ವಿಚಿತ್ರ ಎಂದು ಹೇಳಬಹುದು. ಹೌದು, ನಿರ್ದೇಶಕ ಕೆ. ಬಾಲಚಂದ್ರ ಅವರು ಪ್ರಕಾಶ್ ರಾಜ್ ಇದ್ದ ಹೆಸರನ್ನು ಪ್ರಕಾಶ್ ರೈ ಎಂದು ಬದಲಾಹಿಸಿದರು. ಅಂದಿನಿಂದ ಇವರು ಪ್ರಕಾಶ್ ರೈ ಎಂದೇ ಚಿತ್ರರಂಗದಲ್ಲಿ ಪ್ರಸಿದ್ಧರಾದರು.

    MORE
    GALLERIES

  • 47

    HBD Prakash Raj: ಬಹುಭಾಷಾ ನಟನಿಗೆ ಇಂದು ಜನ್ಮದಿನದ ಸಂಭ್ರಮ, ಮಂಗಳೂರಿನ 'ರೈ', 'ರಾಜ್' ಆಗಿದ್ದರ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ!

    ಪ್ರಕಾಶ್ ದೂರದರ್ಶನದ ಬಿಸಿಲು ಕುದುರೆ (ಕನ್ನಡ) ಮತ್ತು ಗುಡ್ಡದ ಭೂತ ( ತುಳು ಮತ್ತು ಕನ್ನಡ) ಧಾರಾವಾಹಿಗಳೊಂದಿಗೆ ತಮ್ಮ ದೂರದರ್ಶನ ವೃತ್ತಿಜೀವನ ಆರಮಭಿಸಿದ ಅವರು, ನಂತರದ ದಿನಗಳಲ್ಲಿ ರಾಮಾಚಾರಿ , ರಣಧೀರ , ನಿಷ್ಕರ್ಷ ಮತ್ತು ಲಾಕಪ್ ಡೆತ್ ಮುಂತಾದ ಕನ್ನಡ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ನಾಯಕ ನಟನಾಗಿ ಅಭಿನಯಿಸುವುದಕ್ಕಿಂತ ಹೆಚ್ಚಾಗಿ ಖಳನಾಯಕನಾಗಿ ಅಭಿನಯಿಸದ್ದೆ ಹೆಚ್ಚಾದರೂ ತಮ್ಮ ನಟನೆಯಿಂದ ಹೆಚ್ಚಿನ ಜನಪ್ರೀಯತೆಯನ್ನು ಗಳಿಸಿದರು.

    MORE
    GALLERIES

  • 57

    HBD Prakash Raj: ಬಹುಭಾಷಾ ನಟನಿಗೆ ಇಂದು ಜನ್ಮದಿನದ ಸಂಭ್ರಮ, ಮಂಗಳೂರಿನ 'ರೈ', 'ರಾಜ್' ಆಗಿದ್ದರ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ!

    ಸುಮಾರು 300 ಚಿತ್ರಗಳಲ್ಲಿ ನಟಿಸಿರುವ ಪ್ರಕಾಶ್ ರೈ ಕನ್ನಡದ ‘ನಾಗಮಂಡಲ’ಚಿತ್ರದಲ್ಲಿನ ಅವರ ಮನೋಜ್ಱ ನಟನೆಗೆ ಎಲ್ಲಡೆಯಿಂದ ಮೆಚ್ಚುಗಳು ಕೇಳಿಬಂದವು. ನಂತರದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಅವರು, ಗೆಳೆಯ ಸುರೇಶ್ ಜೊತೆಗೂಡಿ ‘ನಾನು ನನ್ನ ಕನಸು’ ಎಂಬ ಚಿತ್ರವಾಗಿಸಿ, ಸ್ವತಃ ನಿರ್ದೇಶಿಸಿ ಉತ್ತಮ ಯಶಸ್ಸನ್ನು ಕಂಡಿದ್ದಾರೆ. ಇನ್ನು, ಕೆಲ ವರ್ಷಗಳಿಂದ ಚಿತ್ರರಂಗವಲ್ಲದೇ ರಾಜಕೀಯಕ್ಕೂ ಪ್ರವೇಶಿಸಿರುವ ಅವರು, ಓರ್ವ ಸಕ್ರೀಯ ರಾಜಕಾರಣಿ ಎಂದರೂ ತಪ್ಪಾಗಲಾರದು.

    MORE
    GALLERIES

  • 67

    HBD Prakash Raj: ಬಹುಭಾಷಾ ನಟನಿಗೆ ಇಂದು ಜನ್ಮದಿನದ ಸಂಭ್ರಮ, ಮಂಗಳೂರಿನ 'ರೈ', 'ರಾಜ್' ಆಗಿದ್ದರ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ!

    ಮೂಲತಃ ಕನ್ನಡಿಗರಾಗಿದ್ದರೂ, ಇವರು ತೆಲಗು ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದುಕೊಂಡು. ತೆಲುಗುವಿನಲ್ಲಿ ಸ್ಟಾರ್ ಆಗಿ ಮೆರೆದು. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರು ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಸಧ್ಯ ಭಾರತೀಯ ಚಿತ್ರರಂಗವೇ ಕಾದು ಕುಳಿತಿರುವ ಕನ್ನಡದ ಕೆಜಿಎಫ್: ಚಾಪ್ಟರ್ 2 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    MORE
    GALLERIES

  • 77

    HBD Prakash Raj: ಬಹುಭಾಷಾ ನಟನಿಗೆ ಇಂದು ಜನ್ಮದಿನದ ಸಂಭ್ರಮ, ಮಂಗಳೂರಿನ 'ರೈ', 'ರಾಜ್' ಆಗಿದ್ದರ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ!

    ಪ್ರಕಾಶ್ ರಾಜ್​ ತಮ್ಮ ಅದ್ಭುತ ನಟನೆಯ ಮೂಲಕವೇ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್ (ಅತ್ಯುತ್ತಮ್ಮ ನಾಯಕ ನಟ), ನ್ಯಾಷನಲ್ ಫಿಲಂ ಅವಾರ್ಡ್ (ಅತ್ಯುತ್ತಮ್ಮ ನಾಯಕ ನಟ), ಜುರಿ ಅವಾರ್ಡ್, 1998ರ ವರ್ಷದಲ್ಲಿ ಇರುವರ್ ಚಿತ್ರದಲ್ಲಿನ ಪೋಷಕ ಪಾತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಸರಿಸುಮಾರು 38ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

    MORE
    GALLERIES