ಇನ್ನು, ಕಾರ್ಯಕ್ರಮ ಒಂದರಲ್ಲಿ ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಅನ್ನೋ ಬಲವಾದ ನಂಬಿಕೆ ನನ್ನದು ಎನ್ನುವ ಮೂಲಕ ಸೋನು ನಿಗಮ್ ಕನ್ನಡಿಗರ ಮನ ಗೆದ್ದಿದ್ದಾರೆ. ಸಂಗೀತ ಕಾರ್ಯಕ್ರಮಕ್ಕಾಗಿ ಅಮೆರಿಕ, ಸಿಂಗಪೂರ ಸೇರಿದಂತೆ ಇತರೆ ದೇಶಗಳಿಗೆ ಹೋದಾಗ, ನೆರೆದವರಲ್ಲಿ ಯಾರಾದರೂ ಕನ್ನಡ ಎಂದು ಕೂಗಿದರೆ ಸಾಕು ಕನ್ನಡದ ಹಾಡು ಹಾಡುವ ಆಸೆಯಾಗುತ್ತದೆ ಎಂದು ಕನ್ನಡದ ಬಗ್ಗೆ ಇರುವ ಅಭಿಮಾನವನ್ನು ವ್ಯಕ್ತಪಡಿಸಿದ್ದರು.
ಹಿಂದಿಯಲ್ಲಿ ಒಳ್ಳೆಯ ಗಾಯಕನಾಗುವ ಕನಸು ಹೊತ್ತು ಬಂದ ನನಗೆ ಹಿಂದಿಗಿಂತ ಹೆಚ್ಚಾಗಿ ಕನ್ನಡದಲ್ಲೇ ಒಳ್ಳೆಯ ಹಾಡುಗಳನ್ನು ಹಾಡಿದ್ದೇನೆ ಎಂದಿದ್ದಾರೆ ಸೋನು ನಿಗಮ್. ಇವರು ಕನ್ನಡದಲ್ಲಿ ಜೀವನದಿ, ಮುಂಗಾರು ಮಳೆ, ಅಮರ್, ಕುರುಕ್ಷೇತ್ರ, ರಾಟೆ, ಸಂತು, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಬಹದ್ದೂರ್, ಗೂಗ್ಲಿ, ಮೈನಾ, ಡ್ರಾಮಾ, ಯಾರೇ ಕೂಗಾಡಲಿ, ಜಾಕಿ, ಮನಸಾರೆ ಸೇರಿದಂತೆ 70ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿ ಹಾಡಿದ್ದಾರೆ.