Shreya Ghoshal Birthday: ಗಾಯಕಿ ಶ್ರೇಯಾ ಘೋಷಾಲ್​ಗೆ ಜನ್ಮದಿನದ ಸಂಭ್ರಮ, 38ನೇ ವಸಂತಕ್ಕೆ ಕಾಲಿಟ್ಟ ಶ್ರೇಯಾ!

ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತನ್ನ ಇಂಪಾದ ಧ್ವನಿಯಿಂದಲೇ ಭಾರತೀಯ ಸಿನಿ ಪ್ರೇಮಿಗಳ ಮನದಲ್ಲಿ ಇಂದಿಗೂ ನೆಲೆಯೂರಿದ್ದಾರೆ.

First published:

 • 18

  Shreya Ghoshal Birthday: ಗಾಯಕಿ ಶ್ರೇಯಾ ಘೋಷಾಲ್​ಗೆ ಜನ್ಮದಿನದ ಸಂಭ್ರಮ, 38ನೇ ವಸಂತಕ್ಕೆ ಕಾಲಿಟ್ಟ ಶ್ರೇಯಾ!

  ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತನ್ನ ಇಂಪಾದ ಧ್ವನಿಯಿಂದಲೇ ಭಾರತೀಯ ಸಿನಿ ಪ್ರೇಮಿಗಳ ಮನದಲ್ಲಿ ನೆಲೆಯೂರಿರುವ ಶ್ರೇಯಾ ಘೋಷಾಲ್, ಹಿಂದಿ ಸೇರಿದಂತೆ ಕನ್ನಡ, ತಮಿಳು, ತೆಲುಗು, ಮಲಿಯಾಳಂ, ಬಂಗಾಳಿ, ಮರಾಠಿ, ಭೋಜಪುರಿ ಮುಂತಾದ ಅನೇಕ ಭಾಷೆಯ ಚಿತ್ರಗಳ ಹಾಡಿಗೆ ತಮ್ಮ ಕಂಠದಾನ ಮಾಡಿದ್ದಾರೆ.

  MORE
  GALLERIES

 • 28

  Shreya Ghoshal Birthday: ಗಾಯಕಿ ಶ್ರೇಯಾ ಘೋಷಾಲ್​ಗೆ ಜನ್ಮದಿನದ ಸಂಭ್ರಮ, 38ನೇ ವಸಂತಕ್ಕೆ ಕಾಲಿಟ್ಟ ಶ್ರೇಯಾ!

  ಶ್ರೇಯಾ ಘೋಷಾಲ್ 12 ಮಾರ್ಚ್ 1984ರಂದು ಪಶ್ಚಿಮ ಬಂಗಾಳದ ಬಹರಾಮ್‌ಪುರದಲ್ಲಿ ಕುಟುಂಬದಲ್ಲಿ ಜನಿಸಿದರು. ಆದರೆ ಇವರು ಬೆಳೆದಿದ್ದೆಲ್ಲ ರಾಜಸ್ಥಾನದಲ್ಲಿ. ಇಂದು ಅವರು ತಮ್ಮ 38ನೇ ವಸಂತದ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮದ ಜೊತೆ ಕೆಲ ತಿಂಗಳಗಳ ಹಿಂದೆ ಅವರಿಗೆ ಗಂಡು ಮಗು ಜನಿಸಿದ್ದು ಇಂದಿನ ಹುಟ್ಟುಹಬ್ಬ ಅವರಿಗೆ ವಿಶೇಷವಾದುದು ಎಂದರೂ ತಪ್ಪಾಗಲಾರದು.

  MORE
  GALLERIES

 • 38

  Shreya Ghoshal Birthday: ಗಾಯಕಿ ಶ್ರೇಯಾ ಘೋಷಾಲ್​ಗೆ ಜನ್ಮದಿನದ ಸಂಭ್ರಮ, 38ನೇ ವಸಂತಕ್ಕೆ ಕಾಲಿಟ್ಟ ಶ್ರೇಯಾ!

  2000 ದಲ್ಲಿ ಸಂಜಯ ಲೀಲಾ ಬನ್ಸಾಲಿಯವರ ಚಿತ್ರ `ದೇವದಾಸ್' ಮೂಲಕ ಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ಸಂಗೀತ ಪಯಣ ಆರಂಭಿಸಿದ ಅವರು, ನಂತರ ಹಿಂದಿ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ ಸೇರಿದಂತೆ ಮುಂತಾದ ಭಾಷೆಗಳಲ್ಲಿ ಹಾಡುವ ಮೂಲಕ ಎಲ್ಲಡೆ ಮನೆಮಾತಾಗಿದ್ದಾರೆ.

  MORE
  GALLERIES

 • 48

  Shreya Ghoshal Birthday: ಗಾಯಕಿ ಶ್ರೇಯಾ ಘೋಷಾಲ್​ಗೆ ಜನ್ಮದಿನದ ಸಂಭ್ರಮ, 38ನೇ ವಸಂತಕ್ಕೆ ಕಾಲಿಟ್ಟ ಶ್ರೇಯಾ!

  2003 ರಲ್ಲಿ ತೆರೆಕಂಡ ಕನ್ನಡದ ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ಹಿನ್ನಲೆ ಗಾಯಕಿಯಾಗಿ ಶ್ರೇಯಾ ಘೋಷಾಲ್ ಪಾದಾರ್ಪಣೆ ಮಾಡಿದರು. ನಂತರದಲ್ಲಿ ಮುಂಗಾರು ಮಳೆ, ರವಿಶಾಸ್ತ್ರಿ, ತಾರಕ್, ಆರ್ಯನ್, ಒಲವೆ ಮಂದಾರ, ಜಾನಿ, ಚಪ್ಪಾಳೆ, ಗೌರಮ್ಮಾ, ಆಕಾಶ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಹಾಡಿದ್ದಾರೆ.

  MORE
  GALLERIES

 • 58

  Shreya Ghoshal Birthday: ಗಾಯಕಿ ಶ್ರೇಯಾ ಘೋಷಾಲ್​ಗೆ ಜನ್ಮದಿನದ ಸಂಭ್ರಮ, 38ನೇ ವಸಂತಕ್ಕೆ ಕಾಲಿಟ್ಟ ಶ್ರೇಯಾ!

  ಗಾಯಕಿ ಶ್ರೇಯಾ ಘೋಷಾಲ್ 2015ರ ಫೆಬ್ರವರಿಯಲ್ಲಿ ಬಂಗಾಳಿ ಶೈಲಿಯಲ್ಲಿ ಬಾಲ್ಯದ ಗೆಳೆಯ ಶಿಲಾದಿತ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಗೂ ಮುನ್ನ ಶ್ರೇಯಾ ಶಿಲಾದಿತ್ಯ ಜೊತೆ ಸುಮಾರು 10 ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದರು.

  MORE
  GALLERIES

 • 68

  Shreya Ghoshal Birthday: ಗಾಯಕಿ ಶ್ರೇಯಾ ಘೋಷಾಲ್​ಗೆ ಜನ್ಮದಿನದ ಸಂಭ್ರಮ, 38ನೇ ವಸಂತಕ್ಕೆ ಕಾಲಿಟ್ಟ ಶ್ರೇಯಾ!

  ಶಿಲಾದಿತ್ಯ ಹಾಗೂ ಶ್ರೇಯಾ ಘೋಷಾಲ್ ದಂಪತಿಗೆ ಕಳೆದ ವರ್ಷ ಮೇ 22ರಂದು ಗಂಡು ಮಗು ಜನಿಸಿದೆ. ಶ್ರೇಯಾ ಘೋಷಾಲ್​ ತಮ್ಮ ಮಗುವಿಗೆ ದೇವಯಾನ್​ ಮುಖ್ಯೋಪಾಧ್ಯಾಯ ಎಂದು ಹೆಸರಿಟ್ಟಿದ್ದು, ಮಗುವಿನ ಜೊತೆ ಶ್ರೇಯಾ ತಮ್ಮ ಜನ್ಮದಿನವನ್ನು ಈ ಬಾರಿ ಆಚರಿಸಲಿದ್ದಾರೆ.

  MORE
  GALLERIES

 • 78

  Shreya Ghoshal Birthday: ಗಾಯಕಿ ಶ್ರೇಯಾ ಘೋಷಾಲ್​ಗೆ ಜನ್ಮದಿನದ ಸಂಭ್ರಮ, 38ನೇ ವಸಂತಕ್ಕೆ ಕಾಲಿಟ್ಟ ಶ್ರೇಯಾ!

  ಶ್ರೇಯಾ ಅವರ ಮಧುರ ಕಂಠಕ್ಕೆ ಇಲ್ಲಿಯವೆರಗೂ ಅನೇಕ ಪ್ರಶಸ್ತಿ ಲಭಿಸಿದೆ. ಹತ್ತು ಫಿಲಂ ಫೇರ್ ಅವಾರ್ಡ್, ಅತ್ಯುತ್ತಮ ಗಾಯಕಿ, ಅತ್ಯುತ್ತಮ ಹಿನ್ನಲೆ ಗಾಯಕಿ ಮತ್ತು ಅತ್ಯುತ್ತಮ ಮಹಿಳಾ ಹಿನ್ನಲೆ ಗಾಯಕಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

  MORE
  GALLERIES

 • 88

  Shreya Ghoshal Birthday: ಗಾಯಕಿ ಶ್ರೇಯಾ ಘೋಷಾಲ್​ಗೆ ಜನ್ಮದಿನದ ಸಂಭ್ರಮ, 38ನೇ ವಸಂತಕ್ಕೆ ಕಾಲಿಟ್ಟ ಶ್ರೇಯಾ!

  2010 ರಲ್ಲಿ ಅಮೇರಿಕಾದ ಓಹಿಯೋ ರಾಜ್ಯದಲ್ಲಿ ಶ್ರೇಯಾ ಸಂಗೀತ ಕಾರ್ಯಕ್ರಮವಿದ್ದಾಗ ಆ ದಿನವನ್ನು ಅಲ್ಲಿನ ಗವರ್ನರ್ `ಶ್ರೇಯಾ ಘೋಷಾಲ್ ಡೇ' ಎಂದು ಘೋಷಿಸುವ ಮೂಲಕ ಪ್ರತಿ ವರ್ಷ ಜೂನ್‌ 26ರಂದು ಶ್ರೇಯಾ ಘೋಷಾಲ್ ದಿನ ಎಂದು ಅಲ್ಲಿ ಆಚರಿಸಲಾಗುತ್ತದೆ. ಇದು ಅವರಿಗೆ ಸಂದಂತಹ ಶ್ರೇಷ್ಠ ಗೌರವ ಎಂದರೂ ತಪ್ಪಾಗಲಾರದು.

  MORE
  GALLERIES