ಮಾಸ್ಟರ್ ಪೀಸ್, ನನ್ನ ನಿನ್ನ ಪ್ರೇಮ ಕಥೆ ಸೇರಿದಂತೆ ಅನೇಖ ಚಿತ್ರಗಳಿಗೆ ಹಿನ್ನಲೆ ಗಾಯಕರಾಗಿ ಕಾಣಿಸಿಕೊಂಡರೆ, ಶಾರ್ಪ್ ಶೂಟರ್ ಚಿತ್ರಕ್ಕೆ ಗೀತೆರಚನೆyನ್ನೂ ಮಾಡಿದರು. ಅಲ್ಲದೇ ಶರಣ್ ಅಭಿನಯದ ರ್ಯಾಂಬೋ 2 ಚಿತ್ರದ ನಿರ್ಮಾಪಕರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಇವರೆಗೂ 50ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವ ಚಿಕ್ಕಣ್ಣ ಅವರಿಗೆ ಅತ್ಯುತ್ತಮ ಹಾಸ್ಯನಟಕ್ಕಾಗಿ SIIMA ಪ್ರಶಸ್ತಿ, IIFA ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರಕಿದೆ. ನ್ಯೂಸ್ 18 ಕನ್ನಡ ಕಡೆಯಿಂದ ಚಿಕ್ಕಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಷಯಗಳು.