ಡಾಕ್ಟರ್ ರಾಜಕುಮಾರ್ ರೀತಿನೇ ಮಕ್ಕಳ ವಿಷಯದಲ್ಲೂ ಪಾರ್ವತಮ್ಮ ರಾಜಕುಮಾರ್ ಒಳ್ಳೆ ಕಥೆಗಳನ್ನ ಆಯ್ಕೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಿವರಾಜಕುಮಾರ್ ಅವರಿಗಾಗಿ ಆನಂದ್, ಓಂ, ಜನುಮದ ಜೋಡಿ ಸಿನಿಮಾ ಮಾಡಿದರು. ರಾಘವೇಂದ್ರ ರಾಜಕುಮಾರ್ ಅವರಿಗಾಗಿ ನಂಜುಂಡಿ ಕಲ್ಯಾಣದಂತ ಚಿತ್ರ ಕೊಟ್ಟರು. ಅಪ್ಪುಗಾಗಿ ಅಪ್ಪು, ಅಭಿ, ಹುಡುಗರು ಇಂತಹ ಸಿನಿಮಾಗಳು ಬಂದವು. ಹೀಗೆ ಪಾರ್ವತಮ್ಮ ರಾಜಕುಮಾರ್, ರಾಜ್ ಫ್ಯಾಮಿಲಿಯ ಸರ್ವತೋಮುಖ ಅಭಿವೃದ್ಧಿಗೆ ಸದಾ ಬೆನ್ನೆಲುಬಾಗಿಯೇ ಇದ್ದವರು. ಈಗ ಅವರಿಲ್ಲ ಅನ್ನೋ ನೋವು ಮನೆ ಮಂದಿಯನ್ನ ಕಾಡುತ್ತಲೇ ಇರುತ್ತದೆ.