HBD Ilayaraja: ನಗುವ ನಯನದಲ್ಲಿ ಹೃದಯ ರಂಗೋಲಿ ಬರೆದ ಇಳಯರಾಜ; ಮ್ಯೂಸಿಕ್ ಮಾಂತ್ರಿಕನ ಹೆಜ್ಜೆಗುರುತು ಇಲ್ಲಿದೆ

ಇಳಯರಾಜ… ಈ ಹೆಸರು ಕೇಳಿದರೆ ಸಂಗೀತ ಪ್ರೇಮಿಗಳ ಮನಸ್ಸು ನಗು ಎನ್ನುತ್ತದೆ… ದೂರದಲ್ಲಿ ಯಾರೋ ಹಾಡು ಹೇಳಿದಂತೆ ಕೇಳಿಸುತ್ತದೆ.. ಯಾಕೆಂದ್ರೆ ಇಳಯರಾಜ ಎಂಬ ಹೆಸರೇ ಸುಮಧುರ ಸಂಗೀತಕ್ಕೆ ಅನ್ವರ್ಥನಾಮ! ಮ್ಯೂಸಿಕ್ ಮಾಂತ್ರಿಕ ಇಳಯರಾಜ ಅವರ ಹುಟ್ಟುಹಬ್ಬ ಇಂದು. ಇಂದು ಇಳಯರಾಜ 79ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಸಂಗೀತ ಲೋಕದ ದಂತಕಥೆ ಇನ್ನೂ 100 ಕಾಲ ಬಾಳಲಿ ಅಂತ ಸಂಗೀತ ಪ್ರೇಮಿಗಳು ಹಾರೈಸಿದ್ದಾರೆ…

First published:

  • 17

    HBD Ilayaraja: ನಗುವ ನಯನದಲ್ಲಿ ಹೃದಯ ರಂಗೋಲಿ ಬರೆದ ಇಳಯರಾಜ; ಮ್ಯೂಸಿಕ್ ಮಾಂತ್ರಿಕನ ಹೆಜ್ಜೆಗುರುತು ಇಲ್ಲಿದೆ

    ಇಳಯರಾಜಾ ಅವರು ಜೂನ್ 2, 1943ರಂದು ಜನಿಸಿದರು. ಇವರದ್ದು ಭಾರತೀಯ ಚಲನಚಿತ್ರ ಸಂಗೀತಲೋಕದಲ್ಲಿ ಒಂದು ದೊಡ್ಡ ಹೆಸರು. ಅವರ ಮೂಲ ಹೆಸರು ಜ್ಞಾನದೇಶಿಕನ್. ಚಲನಚಿತ್ರ ಸಂಯೋಜಕ, ಗಾಯಕ, ಗೀತಸಾಹಿತಿಯಾಗಿ ಅವರು ಪ್ರಸಿದ್ಧರಾಗಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಸುಮಾರು 10 ಸಾವಿಕಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವುಗಳಲ್ಲಿ ಅತೀ ಹೆಚ್ಚು ಹಾಡುಗಳು ಜನಪ್ರಿಯ ಮತ್ತು ಇಂದಿಗೂ ಜನರ ಬಾಯಲ್ಲಿ ನಲಿಯುತ್ತಲೇ ಇರುತ್ತವೆ ಎನ್ನುವುದು ವಿಶೇಷ.

    MORE
    GALLERIES

  • 27

    HBD Ilayaraja: ನಗುವ ನಯನದಲ್ಲಿ ಹೃದಯ ರಂಗೋಲಿ ಬರೆದ ಇಳಯರಾಜ; ಮ್ಯೂಸಿಕ್ ಮಾಂತ್ರಿಕನ ಹೆಜ್ಜೆಗುರುತು ಇಲ್ಲಿದೆ

    ಪ್ರಾರಂಭದ ದಿನಗಳಲ್ಲಿ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಅವರ ಶಿಷ್ಯರಾಗಿ ಬೆಳೆದ ಇಳಯರಾಜಾ, ಇಂದು ಚಲನಚಿತ್ರರಂಗದ ಮೇರು ಪರ್ವತವೇ ಆಗಿದ್ದಾರೆ. ಅವರಿಗೆ ರಾಷ್ಟ್ರ ಪ್ರಶಸ್ತಿ ತಂದ 'ಸಾಗರ ಸಂಗಮಂ' (ತೆಲುಗು), 'ಸಿಂಧು ಭೈರವಿ' (ತಮಿಳು), 'ರುದ್ರವೀಣ'(ತೆಲುಗು), 'ಪಜಾಸ್ಸಿ ರಾಜ'(ಮಲಯಾಳಂ) ಚಿತ್ರಗಳ ಆಚೆಗೆ ಕೂಡಾ ಅವರು ಸಂಗೀತ ಸಂಯೋಜಿಸಿರುವ ಸುಮಾರು ಸಾವಿರ ಚಿತ್ರಗಳು ಹತ್ತು ಸಾವಿರಕ್ಕೂ ಹೆಚ್ಚು ಗೀತೆಗಳಲ್ಲಿ ಸಂಗೀತ ಲೋಕದ ಮುತ್ತುರತ್ನಗಳು ವಿಶಿಷ್ಟವಾಗಿ ಅರಳಿವೆ. ಗೀತ ರಚನೆಕಾರರಾಗಿ ಮತ್ತು ಗಾಯಕರಾಗಿ ಕೂಡಾ ಅವರು ಅಪ್ರತಿಮರು.

    MORE
    GALLERIES

  • 37

    HBD Ilayaraja: ನಗುವ ನಯನದಲ್ಲಿ ಹೃದಯ ರಂಗೋಲಿ ಬರೆದ ಇಳಯರಾಜ; ಮ್ಯೂಸಿಕ್ ಮಾಂತ್ರಿಕನ ಹೆಜ್ಜೆಗುರುತು ಇಲ್ಲಿದೆ

    ಭಾರತೀಯ ಸಿನಿ ಸಂಗೀತದಲ್ಲಿ ಜನಪ್ರಿಯ ಜೋಡಿ ಎಂದರೆ ಇಳಯರಾಯ ಹಾಗೂ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರದ್ದು. ಆದರೆ ಈ ಹಿಟ್ ಜೋಡಿ ಹಲವು ವರ್ಷಗಳ ಕಾಲ ಮುನಿಸಿಕೊಂಡು ದೂರಾಗಿತ್ತು. ಹಿಂದೊಮ್ಮೆ ಬಾಲಸುಬ್ರಹ್ಮಣ್ಯಂ ಅವರು ಇನ್ನು ಮುಂದೆ ನನ್ನ ಹಾಡುಗಳನ್ನು ಹಾಡುವಂತಿಲ್ಲ. ಒಂದು ವೇಳೆ ಹಾಡಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಳಯರಾಜ ಅವರೇ ನೋಟಿಸ್ ನೀಡಿದ್ದರು.

    MORE
    GALLERIES

  • 47

    HBD Ilayaraja: ನಗುವ ನಯನದಲ್ಲಿ ಹೃದಯ ರಂಗೋಲಿ ಬರೆದ ಇಳಯರಾಜ; ಮ್ಯೂಸಿಕ್ ಮಾಂತ್ರಿಕನ ಹೆಜ್ಜೆಗುರುತು ಇಲ್ಲಿದೆ

    ಇಳಯರಾಜ ಅವರು ಎಸ್‌ಪಿಬಿ, ಎಸ್ ಜಾನಕಿ, ಹರಿಹರನ್, ಚಿತ್ರಾ ಸೇರಿದಂತೆ ಹಲವು ಭಾಷೆಯ ಅನೇಕ ಘಟಾನುಘಟಿ ಗಾಯಕ, ಗಾಯಕಿಯರಿಗೆ ಅತ್ಯುತ್ತಮ ಗೀತೆಗಳನ್ನು ನೀಡಿದ್ದಾರೆ. ಹಿಂದಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದ 'ಚೀನೀ ಕಂ', 'ಪಾ' ವರೆಗಿನ ಹಲವು ಚಿತ್ರಗಳಲ್ಲಿ ಕೂಡಾ ಅವರ ಗಾನ ಗಂಗೆ ಹರಿದಿದೆ.

    MORE
    GALLERIES

  • 57

    HBD Ilayaraja: ನಗುವ ನಯನದಲ್ಲಿ ಹೃದಯ ರಂಗೋಲಿ ಬರೆದ ಇಳಯರಾಜ; ಮ್ಯೂಸಿಕ್ ಮಾಂತ್ರಿಕನ ಹೆಜ್ಜೆಗುರುತು ಇಲ್ಲಿದೆ

    ಕನ್ನಡದಲ್ಲಿ ಕೂಡಾ ಹಲವು ಹಿಟ್‌ ಹಾಡುಗಳ ಹಿಂದೆ ಇರುವುದು ಇದೇ ಇಳಯರಾಜ ಅವರದ್ದೇ ಸಂಗೀತ. ಭರ್ಜರಿ ಬೇಟೆ. ನನ್ನ ನೀ ಗೆಲ್ಲಲಾರೆ, ಜನ್ಮಜನ್ಮದ ಅನುಬಂಧ, ನಮ್ಮೂರ ಮಂದಾರ ಹೂವೇ, ಪಲ್ಲವಿ ಅನುಪಲ್ಲವಿ ಚಿತ್ರಗಳಲ್ಲಿ ಮೂಡಿರುವ ಅವರ ಸಂಗೀತ ಶ್ರೇಷ್ಠಮಟ್ಟದ್ದು.

    MORE
    GALLERIES

  • 67

    HBD Ilayaraja: ನಗುವ ನಯನದಲ್ಲಿ ಹೃದಯ ರಂಗೋಲಿ ಬರೆದ ಇಳಯರಾಜ; ಮ್ಯೂಸಿಕ್ ಮಾಂತ್ರಿಕನ ಹೆಜ್ಜೆಗುರುತು ಇಲ್ಲಿದೆ

    ಶಂಕರ್ ನಾಗ್ ಅಭಿನಯದ ಗೀತಾ ಸಿನಿಮಾದ ಹಾಡುಗಳನ್ನು ಯಾರು ಮರೆಯೋಕೆ ಸಾಧ್ಯ? ಗೀತಾ ಎಂಬ ಟೈಟಲ್ ಸಾಂಗ್, ಕೇಳದೆ ನಿಮಗೀಗ ದೂರದಲ್ಲಿ ಯಾರೋ ಎಂಬ ದುರಂತ ಪ್ರೇಮದ ಹಾಡು, ಜೊತೆ ಜೊತೆಯಲಿ ಎಂಬ ಎವರ್‌ಗ್ರೀನ್ ಪ್ರೇಮಗೀತೆಗೆ ಇವರದ್ದೇ ಸಂಗೀತ.

    MORE
    GALLERIES

  • 77

    HBD Ilayaraja: ನಗುವ ನಯನದಲ್ಲಿ ಹೃದಯ ರಂಗೋಲಿ ಬರೆದ ಇಳಯರಾಜ; ಮ್ಯೂಸಿಕ್ ಮಾಂತ್ರಿಕನ ಹೆಜ್ಜೆಗುರುತು ಇಲ್ಲಿದೆ

    ಇವರು ರಾಯಲ್ ಫಿಲ್ಹಾರ್ಮಾನಿಕ್ ಆರ್ಕೆಸ್ಟ್ರಾಗಾಗಿ ಒಂದು ಸ್ವರಮೇಳವನ್ನು ಸಂಯೋಜಿಸಿದ ಭಾರತದ ಮೊದಲ ಸಂಗೀತಗಾರರು. ಅವರು ಲಂಡನ್ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ನ ಸ್ವರ್ಣ ಪದಕ ವಿಜೇತರು. ಶ್ರೀಯುತರು ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದಿ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಸಂಗೀತ ಸಂಯೋಜನೆ, ಗಾಯನ ಮತ್ತು ಗೀತರಚನೆ ಮಾಡಿದ್ದಾರೆ. 2010 ರಲ್ಲಿ, ಅವರು ಭಾರತದಲ್ಲಿ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣವನ್ನು ಮತ್ತು 2018 ರಲ್ಲಿ ಪದ್ಮವಿಭೂಷಣವನ್ನು ಭಾರತ ಸರ್ಕಾರದಿಂದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು.

    MORE
    GALLERIES