ಉಮಾಶ್ರೀ ಮೇ 10, 1957ರಂದು ತುಮಕೂರಿನಲ್ಲಿ ಜನಿಸಿದರು. ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. ಅವರ ಜೀವನ ಬಡತನದ ಬವಣೆಯಲ್ಲಿ ಮೂಡಿ ಬಂದದ್ದು. “ನಾನು ನಾಟಕಕ್ಕೆ ಸೇರಿದ್ದೇ ತಿನ್ನಲು ಚಿತ್ರಾನ್ನ ಸಿಗುತ್ತದೆ” ಎಂದು ಅವರು ತಮ್ಮ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ಕಷ್ಟಪಟ್ಟು ದುಡಿದು ತಮ್ಮಿಬ್ಬರು ಮಕ್ಕಳನ್ನು ಉತ್ತಮ ವಿದ್ಯಾವಂತರಾಗಿಸಿರುವ ಉಮಾಶ್ರೀ ತಮ್ಮ ಬದುಕಿನ ಜವಾಬ್ಧಾರಿಗಳನ್ನು ಕೂಡಾ ಸಮರ್ಥವಾಗಿ ಪೂರೈಸಿದ್ದಾರೆ.
ಅನುಭವದ ಬಳಿಕ ಉಮಾಶ್ರೀ ಬರೀ ಡಬಲ್ ಮೀನಿಂಗ್‌ನ ಹಾಸ್ಯ ಪಾತ್ರಗಳಿಗಷ್ಟೇ ಸೀಮಿತವಾದರು. ಆಗ ಬಂದಿದ್ದೇ ಪುಟ್ನಂಜ ಸಿನಿಮಾ. 1995ರಲ್ಲಿ ಕ್ರೇಜಿಸ್ಟಾರ್ ನಟಿಸಿ, ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಪುಟ್ಮಲ್ಲಿಯಾಗಿ ಉಮಾಶ್ರೀ ಪರಕಾರ ಪ್ರವೇಶ ಮಾಡಿದರು. ಈ ಚಿತ್ರವು 25 ವಾರಗಳಿಗೂ ಹೆಚ್ಚು ಕಾಲ ಓಡಿ, ಬ್ಲಾಕ್ ಬಸ್ಟರ್ ಆಯಿತು. ಉಮಾಶ್ರೀ ಪುಟ್ಮಲ್ಲಿಯಾಗಿ ಕನ್ನಡಿಗರ ಮನಸ್ಸಲ್ಲಿ ನೆಲೆಯೂರಿದ್ರು.