HBD Arjun Janya: ‘ಸರಿಯಾಗಿ ನೆನಪಿದೆ’ ನಮಗೆ ಇಂದು ಅರ್ಜುನ್ ಜನ್ಯ ಬರ್ತ್ ಡೇ; ಮ್ಯೂಸಿಕ್ ಮಾಂತ್ರಿಕನ ಬಾಳಲ್ಲಿ ತುಂಬಿರಲಿ ‘ಸರಿಗಮಪ’

ಇವ್ರು ಯಾಕೋ ಎಲ್ಲರಿಗೂ ‘ಥರ ಥರ’ ಹಿಡಿಸಿಬಿಟ್ಟರು, ‘ಸರಿಯಾಗಿ ನೆನಪಿದೆ ನನಗೆ’ ಅದಕೆಲ್ಲ ಕಾರಣ ನಿಮ್ಮ ಮ್ಯೂಸಿಕ್ ಅಂತ ಕನ್ನಡಿಗರು ಚಪ್ಪಾಳೆ ತಟ್ಟಿದ್ರು. ಇವರ ಹಾಡು ಕೇಳಿದಾಗಲೆಲ್ಲ ‘ಎದೆ ಬಡಿತ ಜೋರಾಗಿದೆ’ ಅಂತ ಖುಷಿಪಟ್ರು. ‘ಗಮನಿಸು ಒಮ್ಮೆ ನೀನು’ ಅಂತ ಪ್ರೇಮಿಗಳೆಲ್ಲ ಸಂತಸ ಪಟ್ರು. ‘ನೀನು ಇರದೇ ನಾನು ಇರೆನು’ ಅಂತ ಭಗ್ನ ಪ್ರೇಮಿಗಳು ಕಣ್ಣೀರಿಟ್ರು.. ಒಟ್ಟಾರೆ ಇವರ ಹಾಡು ಕೇಳಿದವರು ಕುಣಿದರು, ಸಂತಸಪಟ್ಟರು, ಕಣ್ಣೀರಿಟ್ಟರು, ನೆನಪಿಗೆ ಜಾರಿದರು, ಪ್ರೀತಿ ತೋರಿದರು. ಹೀಗೆ ಕನ್ನಡಿಗರನ್ನು ತಮ್ಮ ಸಂಗೀತದಿಂದಲೇ ರಂಜಿಸಿದ, ರಂಜಿಸುತ್ತಿರುವ ಸಂಗೀತ ನಿರ್ದೇಶಕರೆಂದರೆ ಅದು ಅರ್ಜುನ್ ಜನ್ಯ. ಇಂದು ಅರ್ಜುನ್ ಜನ್ಯ ಅಲಿಯಾಸ್ ಎಜೆ ಬರ್ತ್ ಡೇ…

First published: