Daredevil Mustafa Film: ಇಂದಿನಿಂದ ಚಿತ್ರಮಂದಿರದಲ್ಲಿ ಡೇರ್ ಡೆವಿಲ್ ಮುಸ್ತಾಫಾ, ಸಿನಿಮಾ ನೋಡಿ ಕನ್ನಡತಿ ರಂಜನಿ ಏನ್ ಹೇಳಿದ್ರು?
ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧರಿತ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾವನ್ನು ಇಂದಿನಿಂದ ಚಿತ್ರಮಂದಿರಗಳನ್ನಿ ನೋಡಬಹುದು. ಸಿನಿಮಾ ನೋಡಿ ಕನ್ನಡತಿ ರಂಜನಿ ಏನ್ ಹೇಳಿದ್ದಾರೆ ನೋಡಿ.
ಡೇರ್ ಡೆವಿಲ್ ಮುಸ್ತಾಫಾ ಎಂದಾಕ್ಷಣ ಕೆ.ಪಿ ಪೂರ್ಣಚಂದ್ರ ತೇಜಸ್ವಿ ನೆನಪಾಗುತ್ತಾರೆ. ಹೌದು ಈ ಸಿನಿಮಾ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧಾರಿತ ಸಿನಿಮಾ ಡೇರ್ ಡೆವಿಲ್ ಮುಸ್ತಾಫಾ ಇದಾಗಿದೆ.
2/ 8
ತೇಜಸ್ವಿ ಅಭಿಮಾನಿಗಳೇ ಸೇರಿ ಈ ಸಿನಿಮಾ ನಿರ್ಮಿಸಿದ್ದಾರೆ. ಹೊಸಬರೇ ಸೇರಿಕೊಂಡು ಪಾತ್ರಗಳಿಗೆ ಜೀವ ತುಂಬಿದ್ದಾರೆ.ಅಂದಹಾಗೆ ಈ ಸಿನಿಮಾಗೆ ಶಶಾಂಕ್ ಸೋಗಲ್ ಅಕ್ಷನ್ ಕಟ್ ಹೇಳಿದ್ದಾರೆ.
3/ 8
ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಿನಿಮಾದ ವಿತರಣೆ ಸಹ ಅವರದ್ದೇ ಆಗಿದೆ.
4/ 8
ಈ ಸಿನಿಮಾದಲ್ಲಿ ಆದಿತ್ಯ ಆಶ್ರೀ, ಅಭಯ್, ಸುಪ್ರೀತ್ ಭಾರದ್ವಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂಎಸ್ ಉಮೇಶ್, ಮಂಡ್ಯ ರಮೇಶ್, ಮೈಸೂರು ಆನಂದ್, ಸುಂದರ್ ವೀಣಾ, ಹರಿಣಿ, ನಾಗಭೂಷಣ, ಪೂರ್ಣಚಂದ್ರ ಮೈಸೂರು, ವಿಜಯ್ ಶೋಭರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ.
5/ 8
ತೇಜಸ್ವಿ ಅವರ 65 ಅಭಿಮಾನಿಗಳು ಸೇರಿಕೊಂಡು ಈ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ. ಅಲ್ಲದೇ ಕೆಲ ಚಿತ್ರಮಂದಿರಗಳಲ್ಲಿ ತೇಜಸ್ವಿ ಅವರ ಕಟೌಟ್ ಹಾಕಿದ್ದಾರೆ.
6/ 8
ಸಿನಿಮಾ ನೋಡಿ ನಟಿ ರಂಜಿನಿ ರಾಘವನ್ ತುಂಬಾ ಇಷ್ಟ ಪಟ್ಟಿದ್ದಾರೆ. ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಸೂಪರ್ ಆಗಿದೆ. ಲವ್ ಇಟ್.ಬಿಡುವು ಮಾಡಿಕೊಂಡು ಸಿನಿಮಾ ನೋಡಿ. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
7/ 8
ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು ಎಂದು ರಂಜನಿ ಹೇಳಿದ್ದಾರೆ.
8/ 8
ಈ ಕಥೆಯನ್ನು ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ನಿರ್ದೇಶಕರಿಗೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ ಎಂದು ರಂಜನಿ ಅವರು ಹೇಳಿದ್ದಾರೆ.
First published:
18