ಇನ್ನು, ಕತ್ರಿನಾ ಕೈಫ್ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರದಲ್ಲಿ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹದ ನಂತರ ಈ ಸ್ಟಾರ್ ಜೋಡಿ ಒಟ್ಟಿಗೆ ಯಾವಾಗ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. (ಚಿತ್ರಕೃಪೆ: ಕತ್ರಿನಾ ಕೈಫ್ ಇನ್ಸ್ಟಾಗ್ರಾಂ)
ಬಾಲಿವುಡ್ ನಟಿ ಕತ್ರಿನಾ ಕೈಫ್ ಪ್ರಗ್ನೆಂಟ್ ಎಂಬ ಗಾಸಿಫ್ ಮತ್ತೆ ಈಗ ಎಲ್ಲೆಡೆ ಹರಿದಾಡುತ್ತಿದೆ. ಕತ್ರಿನಾ ಜನಮಾನದಿಂದ ದೂರ ಉಳಿಯುತ್ತಿದ್ದಾರೆ. ಆದ ಕಾರಣ ಕತ್ರಿನಾ ಕೈಫ್ ಗರ್ಭಿಣೆಯಾಗಿರಬಹುದು. ಅದಕ್ಕೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಆದರೆ ಈ ಕುರಿತು ಕತ್ರಿನಾ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ. (ಚಿತ್ರಕೃಪೆ: ಕತ್ರಿನಾ ಕೈಫ್ ಇನ್ಸ್ಟಾಗ್ರಾಂ)
ಕತ್ರಿನಾ ಕೈಫ್ ಅಭಿನಯದ ಫೋನ್ ಬೂತ್ ಚಿತ್ರ ಅಕ್ಟೋಬರ್ 7ರಂದು ಬಿಡುಗಡೆಯಾಗಲಿದೆ. ಕತ್ರಿನಾ ಕೈಫ್ ಜೊತೆ ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಸಹ ನಟಿಸಿದ್ದಾರೆ. ಇದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ಹೆಚ್ಚು ಸಕ್ರಿಯರಾಗಿದ್ದು, ಅಭಿಮಾನಿಗಳ ಜೊತೆ ಆಗ್ಗಾಗ್ಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. (ಚಿತ್ರಕೃಪೆ: ಕತ್ರಿನಾ ಕೈಫ್ ಇನ್ಸ್ಟಾಗ್ರಾಂ)
ಬಾಲಿವುಡ್ನ ಈ ಬ್ಯೂಟಿ ಕ್ವೀನ್ ಈವರೆಗೂ 50ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಬ್ಯಾಂಗ್ ಬ್ಯಾಂಗ್, ಬೂಂ, ದೂಮ್ 3, ಟೈಗರ್ 3, ಬಾರ್ ಬಾರ್ ದೇಖೋ, ವೆಲ್ ಕಂ, ನ್ಯೂಯಾರ್ಕ್, ಅಗ್ನಿಪಥ್, ಬ್ಲೂ, ಅಪ್ನೇ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕತ್ರಿನಾ ಹಾಗೂ ಅಕ್ಷಯ್ ಕುಮಾರ್ ಜೋಡಿ ಬಾಲಿವುಡ್ನಲ್ಲಿ ಒಂದು ಕಾಲದಲ್ಲಿ ಸಕತ್ ಮೋಡಿ ಮಾಡಿತ್ತು. ಬಾಲಿವುಡ್ನ ಈ ಚಂದುಳ್ಳಿ ಚೆಲುವೆ ಕತ್ರಿನಾ ಕೈಫ್ಗೆ ನ್ಯೂಸ್ 18 ಕನ್ನಡದಿಂದ ಜನ್ಮದಿನದ ಶುಭಾಷಯಗಳು. (ಚಿತ್ರಕೃಪೆ: ಕತ್ರಿನಾ ಕೈಫ್ ಇನ್ಸ್ಟಾಗ್ರಾಂ)