ಕರಾವಳಿಯ ಬೆಡಗಿ ಶಿಲ್ಪಾ ಶೆಟ್ಟಿ ಬಾಲಿವುಡ್ನಲ್ಲಿ ಮಿಂಚಿದ ಚೆಲುವೆ. 1993ರಲ್ಲಿ ಶಾರುಖ್ ಖಾನ್ಗೆ ನಾಯಕಿಯಾಗಿ ಬಾಜಿಗರ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕನ್ನಡತಿ, 90ರ ದಶಕದಲ್ಲಿ ಬಾಲಿವುಡ್ನಲ್ಲಿ ಟಾಫ್ ನಟಿಯರ ಸಾಲಿನಲ್ಲಿ ನಿಂತಿದ್ದರು. ಆದರೆ ಈ ಕನ್ನಡದ ಬೆಡಗಿಯನ್ನು ಕನ್ನಡಕ್ಕೆ ಕರೆ ತಂದಿದ್ದು ಕ್ರೇಜಿಸ್ಟಾರ್ ರವಿಚಂದ್ರನ್. ಈ ಕರಾವಳಿ ಬೆಡಗಿಗೆ ಇಂದು ಜನ್ಮದಿನದ ಸಂಭ್ರಮ
1998ರಲ್ಲಿ ರವಿಚಂದ್ರನ್ ನಿರ್ದೇಶಿಸಿ, ನಟಿಸಿದ್ದ ಪ್ರೀತ್ಸೋದ್ ತಪ್ಪಾ ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದ ಸೂಪರ್ ಡೂಪರ್ ಹಿಟ್ ಆಗುತ್ತಿದ್ದಂತೆ ಮತ್ತೆ ಬಾಲಿವುಡ್ಗೆ ಮರಳಿದ್ದರು ಕರಾವಳಿ ಚೆಲುವೆ. ಆ ಬಳಿಕ ಅವರನ್ನು ಮತ್ತೆ ಕರೆ ತರುವ ಪ್ರಯತ್ನ ಮಾಡಿದ್ದೂ ಕೂಡ ಕ್ರೇಜಿಸ್ಟಾರ್ ಎಂಬುದು ವಿಶೇಷ. 2003ರಲ್ಲಿ ಬಿಡುಗಡೆಯಾಗಿದ್ದ ಒಂದಾಗೋಣ ಬಾ ಚಿತ್ರದಲ್ಲಿ ಶಿಲ್ಪಾ-ರವಿ ಮತ್ತೆ ಒಂದಾಗಿದ್ದರು. ಈ ಬೆನ್ನಲ್ಲೇ 2005ರಲ್ಲಿ ಉಪೇಂದ್ರ ಅವರೊಂದಿಗೆ ಆಟೋ ಶಂಕರ್ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು.