ದಿಶಾ ಪಟಾನಿ ತೆಲುಗಿನ ಲೋಫರ್ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ನೀಡಿದರು. ಬಳಿಕ ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ, ಭಾಗಿ 2 ಮತ್ತು 3, ಭಾರತ್, ಮಲಾಂಗ್, ರಾಧೆ, ಏಕ್ ವಿಲನ್ ರಿಟರ್ನ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಅತ್ಯಂತ ಮನರಂಜನಾ ನಟ, ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ದಿಶಾ ಪಟಾನಿ ಅವರಿಗೆ ಜನ್ಮದಿನದ ಶುಭಾಷಯಗಳು.