Ram Charan: ಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್, RC15 ಟೈಟಲ್ ಔಟ್; ರಾಮ್ ಚರಣ್ ಈಗ ಗೇಮ್ ಚೇಂಜರ್!

Ram Charan: RRR ನಂತರ ನಟ ರಾಮ್ ಚರಣ್ ಸ್ಟಾರ್​ ಡೈರೆಕ್ಟರ್​ ಶಂಕರ್ ಜೊತೆ ಬಿಗ್ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಸಿನಿಮಾ ಮುಂದಿನ ಸಂಕ್ರಾಂತಿಯಂದು ಬಿಡುಗಡೆಯಾಗಲಿದ್ದು, ಇದೀಗ ರಾಮ್ ಚರಣ್ ಹುಟ್ಟುಹಬ್ಬದಂದು RC15 ಟೈಟಲ್ ಅನೌನ್ಸ್ ಮಾಡಲಾಗಿದೆ.

First published:

  • 18

    Ram Charan: ಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್, RC15 ಟೈಟಲ್ ಔಟ್; ರಾಮ್ ಚರಣ್ ಈಗ ಗೇಮ್ ಚೇಂಜರ್!

    ಕಾಲಿವುಡ್ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನದ ಆರ್ ಸಿ 15 ಸಿನಿಮಾದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕ ನಟರಾಗಿ ಕಾಣಿಸಿಕೊಳ್ತಿದ್ದು, ಈ ಚಿತ್ರವನ್ನು ಟಾಲಿವುಡ್ ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಿಸಿದ್ದಾರೆ. ರಾಮ್ ಚರಣ್ ಹುಟ್ಟುಹಬ್ಬದಂದು ಸಿನಿಮಾ ಟೈಟಲ್ ರಿವೀಲ್ ಮಾಡಿದೆ.

    MORE
    GALLERIES

  • 28

    Ram Charan: ಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್, RC15 ಟೈಟಲ್ ಔಟ್; ರಾಮ್ ಚರಣ್ ಈಗ ಗೇಮ್ ಚೇಂಜರ್!

    ಸಿನಿಮಾದ ಮೇಲೆ ಈಗಾಗಲೇ ನಿರೀಕ್ಷೆ ದುಪ್ಪಟ್ಟಾಗಿದೆ ನಿರ್ಮಾಪಕರು ಈ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್  ಬಿಡುಗಡೆ ಮಾಡಿದ್ದಾರೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇಂದು 8:19ಕ್ಕೆ ಟೈಟಲ್ ಬಿಡುಗಡೆ ಮಾಡಲಾಗಿದೆ. 'ಗೇಮ್ ಚೇಂಜರ್' ಎಂಬ ಶೀರ್ಷಿಕೆಯನ್ನು ನಿರ್ಮಾಪಕರು ಫಿಕ್ಸ್ ಮಾಡಿದ್ದಾರೆ.

    MORE
    GALLERIES

  • 38

    Ram Charan: ಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್, RC15 ಟೈಟಲ್ ಔಟ್; ರಾಮ್ ಚರಣ್ ಈಗ ಗೇಮ್ ಚೇಂಜರ್!

    RRR ನಂತರ ರಾಮ್ ಚರಣ್ 'ಗೇಮ್ ಚೇಂಜರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚೆರ್ರಿಗೆ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಶ್ರೀಕಾಂತ್, ಅಂಜಲಿ, ಎಸ್.ಜೆ.ಸೂರ್ಯ, ಸುನೀಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 48

    Ram Charan: ಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್, RC15 ಟೈಟಲ್ ಔಟ್; ರಾಮ್ ಚರಣ್ ಈಗ ಗೇಮ್ ಚೇಂಜರ್!

    'ಗೇಮ್ ಚೇಂಜರ್' ಸಿನಿಮಾಗೆ ತಮನ್ ಸಂಗೀತ ನೀಡಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ.

    MORE
    GALLERIES

  • 58

    Ram Charan: ಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್, RC15 ಟೈಟಲ್ ಔಟ್; ರಾಮ್ ಚರಣ್ ಈಗ ಗೇಮ್ ಚೇಂಜರ್!

    ಸದ್ಯ ಚಿತ್ರತಂಡ ಒಂದು ಹಾಡಿಗಾಗಿ ಚಿತ್ರೀಕರಣ ನಡೆಸುತ್ತಿದೆ. ಈ ಹಾಡಿಗೆ ಸುಮಾರು 5 ಕೋಟಿ ಖರ್ಚು ಮಾಡಲಾಗ್ತಿದೆಯಂತೆ. ಈ ಹಾಡಿನಲ್ಲಿ ರಾಮ್ ಚರಣ್ ಅವರ 80 ಸೆಕೆಂಡ್ ಡ್ಯಾನ್ಸ್ ಚಿತ್ರದ ಹೈಲೈಟ್ ಆಗಲಿದೆಯಂತೆ. ಸಿಂಗಲ್ ಟೇಕ್ ನಲ್ಲಿ ರಾಮ್ ಚರಣ್ ಕುಣಿದಿದ್ದಾರೆ. ಚರಣ್ ಡ್ಯಾನ್ಸ್ ಗೆ ಶಂಕರ್ ಇಂಪ್ರೆಸ್ ಆಗಿದ್ದು, ಈ ಕ್ಷಣವನ್ನು ಥಿಯೇಟರ್ ನಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಫೋಟೋ: ಟ್ವಿಟರ್

    MORE
    GALLERIES

  • 68

    Ram Charan: ಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್, RC15 ಟೈಟಲ್ ಔಟ್; ರಾಮ್ ಚರಣ್ ಈಗ ಗೇಮ್ ಚೇಂಜರ್!

    ಈ ಸಿನಿಮಾದಲ್ಲಿ ಹಿರಿಯ ನಟಿ ಖುಷ್ಬೂ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ದ್ವಿತಿಯಾರ್ಧದಲ್ಲಿ ನಟಿ ಖುಷ್ಬೂ ನಿರ್ಣಾಯಕ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇಡೀ ಸಿನಿಮಾದಲ್ಲಿ ಈ ಪಾತ್ರಕ್ಕೆ ಹೆಚ್ಚಿನ ಮಹತ್ವವಿದೆ ಎನ್ನಲಾಗಿದೆ.

    MORE
    GALLERIES

  • 78

    Ram Charan: ಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್, RC15 ಟೈಟಲ್ ಔಟ್; ರಾಮ್ ಚರಣ್ ಈಗ ಗೇಮ್ ಚೇಂಜರ್!

    ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಪ್ರಮುಖ ಹೈಲೈಟ್. ಇದರಲ್ಲಿ ಒಂದು ಪಾತ್ರದಲ್ಲಿ ಗ್ರಾಮೀಣ ಯುವಕನಾಗಿ ಕಾಣಿಸಿಕೊಂಡರೆ ಮತ್ತೊಂದು ಪಾತ್ರದಲ್ಲಿ ಸೂಪರ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಫೋಟೋ: ಟ್ವಿಟರ್

    MORE
    GALLERIES

  • 88

    Ram Charan: ಮೆಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್, RC15 ಟೈಟಲ್ ಔಟ್; ರಾಮ್ ಚರಣ್ ಈಗ ಗೇಮ್ ಚೇಂಜರ್!

    ಒಳ್ಳೆ ನಿರೀಕ್ಷೆಗಳ ನಡುವೆ ಬರುತ್ತಿರುವ ಈ ಚಿತ್ರಕ್ಕೆ ಆರಂಭದಿಂದಲೂ ಲೀಕ್ ಕಾಟ ತಪ್ಪಿಲ್ಲ. ಈಗಾಗಲೇ ವಿಡಿಯೋ ಮತ್ತು ಫೋಟೋಗಳು ಲೀಕ್ ಆಗಿವೆ. ಶೂಟಿಂಗ್ ವೇಳೆ ಎಷ್ಟೇ ಮುಂಜಾಗ್ರತೆ ವಹಿಸಿದರೂ, ಎಷ್ಟೇ ಎಚ್ಚರಿಕೆ ನೀಡಿದರೂ ಒಂದಷ್ಟು ಫೋಟೋಗಳು ಲೀಕ್ ಆಗುತ್ತಿವೆ. ಫೋಟೋ: ಟ್ವಿಟರ್

    MORE
    GALLERIES