NTR 30: ಸೌತ್ ಸಿನಿಮಾಗೆ ಮತ್ತೊಬ್ಬ ಬಾಲಿವುಡ್ ನಟಿ ಎಂಟ್ರಿ! ಜೂನಿಯರ್ NTRಗೆ ಈಕೆಯೇ ನಾಯಕಿ!
Junior NTR: RRR ನಂತರ ಜೂನಿಯರ್ NTR ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. NTR 30 ಸಿನಿಮಾಗೆ ಜನಪ್ರಿಯ ನಿರ್ದೇಶಕ ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿದ್ದು, ಈ ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿದ್ದ ಟೀಮ್ಗೆ ಕೊನೆಗೂ ಹೀರೋಯಿನ್ ಸಿಕ್ಕಿದ್ದಾರೆ.
RRR ನಂತರ NTR ಇನ್ನೂ ತಮ್ಮ ಚಿತ್ರದ ಶೂಟಿಂಗ್ ಶುರು ಮಾಡಿಲ್ಲ. ಕೊರಟಾಲ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಕಾರಣ RRR ನಂತರ, NTR ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಮತ್ತೆ ಪ್ಯಾನ್ ಇಂಡಿಯಾ ಲೆವೆಲ್ ಕಥೆ ಹುಡುಕುತ್ತಿದ್ದರು.
2/ 8
NTR 30 ನೇ ಚಿತ್ರದ ಮೇಲ ಭಾರೀ ನಿರೀಕ್ಷೆಗಳಿವೆ. ಈಗಾಗಲೇ ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಜೂನಿಯರ್ NTR ನಿರತರಾಗಿದ್ದಾರೆ. ಸಿನಿಮಾಗೆ ಸಂಬಂಧಿಸಿದ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. NTR 30 ಮುಂದಿನ ವರ್ಷ ಅಂದರೆ 2024ರ ಯುಗಾದಿಯಲ್ಲಿ ರಿಲೀಸ್ ಆಗಲಿದೆ.
3/ 8
ಎನ್ ಟಿಆರ್ 30 ಸಿನಿಮಾದ ರಿಲೀಸ್ ಡೇಟ್ ಜೊತೆಗೆ ಈಗ ನಾಯಕಿ ಕೂಡ ಫಿಕ್ಸ್ ಆಗಿದ್ದಾರೆ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಚಿತ್ರದ ನಾಯಕಿ ಬಗ್ಗೆ ಹಲವು ಹೆಸರುಗಳು ಹಾಟ್ ಟಾಪಿಕ್ ಆಗಿವೆ. ಕೊನೆಗೆ ಚಿತ್ರತಂಡ ಬಾಲಿವುಡ್ ಬೆಡಗಿಯನ್ನು ನಾಯಕಿಯಾಗಿ ಆಯ್ಕೆ ಮಾಡಿದೆ.
4/ 8
NTR ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಟಿಸಲಿದ್ದಾರಂತೆ. ಶೀಘ್ರದಲ್ಲೇ ಚಿತ್ರತಂಡ ನಾಯಕಿ ಆಯ್ಕೆ ಬಗ್ಗೆ ಘೋಷಣೆ ಮಾಡಲಿದೆ. ಮತ್ತು ಅನಿರುದ್ಧ್ ಈ ಅದ್ಧೂರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
5/ 8
ಬಾಲಿವುಡ್ ನಟಿ ಜಾನ್ವಿ ಕಪೂರ್ ಟಾಲಿವುಡ್ ಗೆ ಎಂಟ್ರಿ ಕೊಟ್ಟು ಅದೃಷ್ಟ ಪರೀಕ್ಷೆ ಮಾಡಲು ರೆಡಿಯಾಗಿದ್ದಾರೆ. ವಿಜಯ್ ದೇವರಕೊಂಡ ಅವರ ಚಿತ್ರದಲ್ಲಿ ಜಾನ್ವಿ ನಟಿಸಲಿದ್ದಾರೆ ಎಂಬ ವರದಿಗಳು ಈ ಹಿಂದೆ ಕೇಳಿಬಂದಿತ್ತು. ಅದಾದ ನಂತರ ಜಾನ್ವಿ ಜೂನಿಯರ್ ಎನ್ ಟಿಆರ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಸದ್ದು ಮಾಡಿದೆ.
6/ 8
ಧಡಕ್ ಚಿತ್ರದ ಮೂಲಕ ಜಾನ್ವಿ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ನಂತರ ಅನೇಕ ಚಿತ್ರಗಳಲ್ಲಿ ನಟಿಸಿ ಅಭಿಮಾನಿ ಬಳಗ ಹೊಂದಿದ್ದಾರೆ.
7/ 8
ಇನ್ನು ಎನ್ಟಿಆರ್ 30 ಸಿನಿಮಾ ಭಾರತೀಯ ಭಾಷೆಗಳಲ್ಲದೆ ಜಪಾನೀಸ್ ಮತ್ತು ಚೈನೀಸ್ ನಂತಹ ಸುಮಾರು 9 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೆ ತಕ್ಕಂತೆ ಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ
8/ 8
ಈ ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಎನ್ ಟಿಆರ್ ಅವರ ಚಿತ್ರಕ್ಕೆ ಕೊರಟಾಲ ``ಆ ಒಕಟಿ ಅಡಕ್ಕು'' ಎಂದು ಟೈಟಲ್ ಫೈನಲ್ ಮಾಡಲಾಗಿದೆ ಎಂದು ವರದಿಯಾಗಿದೆ.