New Films: ಈ ಶುಕ್ರವಾರ ಸಿನಿಪ್ರಿಯರಿಗೆ ಭರ್ಜರಿ ಹಬ್ಬ - ಭರ್ತಿ 12 ಚಿತ್ರಗಳು ರಿಲೀಸ್
Sandalwood Films: ಸ್ಯಾಂಡಲ್ವುಡ್ನಲ್ಲಿ ಶುಕ್ರವಾರ ಬಂತೆಂದರೆ ಸಿನೆಮಾ ಹಬ್ಬ. ಸಿನಿ ಪ್ರಿಯರಿಗೆ ಸಾಲು ಸಾಲು ಚಿತ್ರಗಳ ಮೂಲಕ ರಸ ದೌತಣ ಬಡಿಸಲು ಈ ವಾರ ಸ್ಯಾಂಡಲ್ವುಡ್ ತಯಾರಿಸಿ ನಡೆಸಿದ್ದು, ಸಾಲು ಸಾಲಾಗಿ 12 ಚಿತ್ರಗಳು ಬಿಡುಗಡೆಯಾಗುತ್ತಿವೆ. ನಾಳೆ ಯಾವೆಲ್ಲಾ ಚಿತ್ರಗಳು ಬಿಡುಗಾಗುತ್ತಿವೆ ಎಂಬುದು ಇಲ್ಲಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ಅಭಿನಯದ ಈ ಪ್ರಾರಂಭ ಚಿತ್ರ ನಾಳೆ ತೆರೆಗೆ ಬರುತ್ತಿದ್ದು, ವಿಭಿನ್ನ ರೀತಿಯ ಆಮಂತ್ರಣ ಪತ್ರಿಕೆ ಮೂಲಕ ಈ ಚಿತ್ರ ಸುದ್ದಿ ಮಾಡಿತ್ತು.
2/ 12
ಜಾನ್ ಪೀಟರ್ ನಿರ್ದೇಶನದ, ಸುಭಾಷ್ ನಾಯಕನಾಗಿ ನಟಿಸಿರುವ ಈ ಚಿತ್ರ ಹೊಸಬರೇ ಸೇರಿ ಮಾಡಿರುವಂತಾಗಿದ್ದು, ನಾಳೆ ಬಿಡುಗಡೆಯಾಗುತ್ತಿದೆ.
3/ 12
ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದಲ್ಲಿ ಪೋಷಕ ಕಲಾವಿದರೇ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಕುತೂಹಲ ಹುಟ್ಟಿಸಿದ್ದು, ಚಿತ್ರಪ್ರಿಯರು ಕಾಯುತ್ತಿದ್ದಾರೆ.
4/ 12
ಸಿನಿಮಾ ಎಡಿಟರ್ ಬದುಕಿನ ಕುರಿತಯಾದ ಈ ವಿಭಿನ್ನ ಚಿತ್ರ, ಈಗಾಗಲೇ ಪ್ರಚಾರ ಕಾರ್ಯದ ಮೂಲಕ ಜನರ ಮನದಲ್ಲಿ ಹೆಸರು ಮಾಡಿದ್ದು, ಒಂದು ರೀತಿಯಲ್ಲಿ ವಿಭಿನ್ನ ಚಿತ್ರವಾಗಿದ್ದು. ನಿಜಕ್ಕೂ ಹೆಚ್ಚು ನಿರೀಕ್ಷೆ ಇದೆ. ನಾಳೆ ಈ ಚಿತ್ರ ಬಿಡುಗಡೆಯಾಗುತ್ತಿದೆ.
5/ 12
150 ಹೆಚ್ಚು ಪ್ರಶಸ್ತಿಗಳನ್ನು ಈಗಾಗಲೇ ಬಾಚಿಕೊಂಡಿರುವ ಈ ಚಿತ್ರದ ಬಗ್ಗೆ ನಿರೀಕ್ಷ ಬಹಳಷ್ಟಿದೆ. ಈ ಚಿತ್ರದ ಹೆಚ್ಚಿನ ಚಿತ್ರೀಕರಣವು ರಾಮನಗರದ ಸ್ಮಶಾನದಲ್ಲಿ ನಡೆದಿದೆ
6/ 12
ಶ್ರೀನಗರ ಕಿಟ್ಟಿ ಹಾಗೂ ಐಂದ್ರಿತಾ ರೇ ಬಹುದಿನಗಳ ನಂತರ ಬಣ್ಣ ಹಚ್ಚುತ್ತಿರುವ ಈ ಗರುಡ ಚಿತ್ರ, ಹಾಡಿನ ಮೂಲಕ ಜನರ ಹತ್ತಿರಕ್ಕೆ ಈಗಾಗಲೇ ಬಂದಿದ್ದು, ನಾಳೆ ಬಿಡುಗಡೆಯಾಗುತ್ತಿದೆ.
7/ 12
ಚಾಲೆಂಜಿಂಗ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರ ಉತ್ತರ ಕರ್ನಾಟಕದ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
8/ 12
ಕನ್ನಡದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ “ಸಾರಾ ವಜ್ರ ಚಿತ್ರ ನಾಳೆ ಬಿಡುಗಡೆಯಾಗುತ್ತಿದ್ದು, ಇದರಲ್ಲಿ ಅನು ಪ್ರಭಾಕರ್ , ರೆಹಮಾನ್, ಸುಹಾನಾ ಸೈಯದ್ ಅಭಿನಯಿಸಿದ್ದಾರೆ.
9/ 12
ಗೋಡ್ಸೆ ಎಂಬ ಹೆಸರಿನ ಈ ಚಿತ್ರ ಥ್ರಿಲ್ಲರ್ ಕಥೆಯಾಧಾರಿತವಾಗಿದ್ದು, ನಾಳೆ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
10/ 12
ಅಂಗಾರ ಹೆಸರು ಕನ್ನಡಿಗರ ಮನಸಲ್ಲಿ ಯಾವಾಗಲೂ ಉಳಿಯುವ ಚಿತ್ರ. ಇದೇ ಹೆಸರಿನ ಚಿತ್ರ ಇದೀಗ ಬಿಡಿಗಡೆಯಾಗುತ್ತಿದ್ದು, ಕಾಮಿಡಿ ಕಥೆ ಇರುವ ನಿರೀಕ್ಷೆ ಇದೆ.
11/ 12
ಡಾಲಿ ಧನಂಜಯ್ ಅಭಿನಯದ ಈ ಟ್ವೆಂಟಿ ಒನ್ ಅವರ್ಸ್ ಚಿತ್ರ ನಾಳೆ ಬಿಡುಗಡೆಯಾಗುತ್ತಿದ್ದು, ನಿರ್ದೇಶಕ ಜೈಶಂಕರ್ ಪಂಡಿತ್ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
12/ 12
ಪರಂವಃ ಸ್ಟುಡಿಯೋಸ್ನ ಈ ಸಕುಟುಂಬ ಸಮೇತ ಚಿತ್ರ ಈಗಾಗಲೇ ಟ್ರೇಲರ್ ಮೂಲಕ ಸದ್ದು ಮಾಡಿದೆ. ನಾಳೆ ಈ ಚಿತ್ರ ಕೂಡ ಬಿಡುಗಡೆಯಾಗುತ್ತಿದ್ದು, ಹೆಚ್ಚು ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ಧಾರೆ.