ಜೋಗಿ ಪ್ರೇಮ್ 'ಏಕ್ ಲವ್ ಯಾ' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ರಕ್ಷಿತಾ ಪ್ರೇಮ್ ಸಹೋದರ 'ರಾಣಾ' ಈ ಚಿತ್ರದ ನಾಯಕ. ಸಖತ್ ಸೌಂಡ್ ಮಾಡಿಯೇ ಸೆಟ್ಟೇರಿದ್ದ ಈ ಚಿತ್ರ ಈಗ ಮತ್ತೆ ಸದ್ದು ಮಾಡಿದೆ.
2/ 11
ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಹ್ಯಾಟ್ರಿಕ್ ಹೊಡೆದಿರೋ ಪ್ರೇಮ್ ಚಿತ್ರಗಳಲ್ಲಿನ ವಿಶೇಷತೆ ಎಂದರೆ ಅದ್ಭುತ ಹಾಡುಗಳು. ಅದರೊಂದಿಗೆ ಮೈನವಿರೇಳಿಸುವ ಲೊಕೇಶನ್ಗಳು. ಇದೀಗ ತಮ್ಮ ಏಕ್ ಲವ್ ಯಾ ಚಿತ್ರದ ಝಲಕ್ ತೋರಿಸಲು ಕೊನೆಗೂ ಪ್ರೇಮ್ ಮನಸ್ಸು ಮಾಡಿದ್ದಾರೆ.
3/ 11
ಈ ದೊಡ್ಡ ಮನಸ್ಸು ಮಾಡಿರುವುದೇ ಪ್ರೇಮ್ ಪತ್ನಿ ಸ್ಯಾಂಡಲ್ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಅವರಿಗೆ ಟೆನ್ಷನ್. ಏಕೆಂದರೆ ಜೋಗಿ ಪ್ರೇಮ್ ಹೇಳಿದ ದಿನವಂತು ಯಾವುದನ್ನು ಮಾಡುವುದಿಲ್ಲ. ಲೇಟ್ ಆದರೂ ಲೇಟೆಸ್ಟ್ ನೀಡಬೇಕೆಂದು ಬಯಸುವ ನಿರ್ದೇಶಕರಲ್ಲಿ ಪ್ರೇಮ್ ಮೊದಲಿಗರು.
4/ 11
ಹೀಗಾಗಿ ಇದೀಗ ತಮ್ಮನ ಮೊದಲ ಚಿತ್ರದ ಮೋಷನ್ ಪೋಸ್ಟರ್ ಮತ್ತು ಟೀಸರ್ ರಿಲೀಸ್ ಮಾಡಲು ಪ್ರೇಮ್ ರೆಡಿಯಾಗಿದ್ದಾರೆ. ಆದರೆ ತಮ್ಮ ಪತಿ ಟೆನ್ಷನ್ ಡೈರೆಕ್ಟರ್ ಹೀಗಾಗಿ ದಿನಾಂಕ ಅನೌನ್ಸ್ ಬೆನ್ನಲ್ಲೇ ನಿರ್ಮಾಪಕಿಯಾಗಿರುವ ರಕ್ಷಿತಾ ಪ್ರೇಮ್ಗೂ ಸ್ವಲ್ಪ ಟೆನ್ಷನ್ ಶುರುವಾದಂಗಿದೆ.
5/ 11
ಏಕೆಂದರೆ ಪ್ರೇಮ್ ಇದೇ ಮೊದಲ ಬಾರಿಗೆ ಹೇಳಿದ ದಿನಾಂಕಕ್ಕೆ ಏಕ್ ಲವ್ ಯಾ ಮೋಷನ್ ಪೋಸ್ಟರ್ ಮತ್ತು ಟೀಸರ್ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಅವರು ಅದೇ ದಿನಾಂಕದಲ್ಲಿ ಮಾಡುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ ರಕ್ಷಿತಾ.
6/ 11
ಅಂದಹಾಗೆ ಏಕ್ ಲವ್ ಯಾ ಮೋಷನ್ ಪೋಸ್ಟರ್ ಫೆಬ್ರವರಿ 8ಕ್ಕೆ ಬಿಡುಗಡೆಯಾಗಲಿದೆ. ಹಾಗೆಯೇ ಪ್ರೇಮಿಗಳ ದಿನ ಫೆ.14 ರಂದು ಭರ್ಜರಿ ಟೀಸರ್ ರಿಲೀಸ್ ಆಗಲಿದೆ.
7/ 11
'ಏಕ್ ಲವ್ ಯಾ' ಚಿತ್ರವು ವಿಭಿನ್ನ ಪ್ರೇಮಕಥೆಯನ್ನು ಹೊಂದಿದ್ದು, ಇಲ್ಲಿ ರಾಣಾಗೆ ನಾಯಕಿಯಾಗಿ ರೀಷ್ಮಾ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಡಿಂಪಲ್ ಕ್ವೀನ್ ರಚಿತಾ ರಾಮ್ ಟಾಮ್ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
8/ 11
ಹಾಗೆಯೇ ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಟಗರು ಚಿತ್ರದ ಛಾಯಾಗ್ರಾಹಕ ಮಹೇನ್ ಸಿಂಹ ಪ್ರೇಮ್ಸ್ ಟೀಂನೊಂದಿಗೆ ಕೈ ಜೋಡಿಸಿರುವುದು. ಹಾಗೆಯೇ ಅರ್ಜುನ್ ಜನ್ಯ ನೀಡಿರುವ ಮ್ಯೂಸಿಕ್ನೊಂದಿಗೆ ಈಗಾಗಲೇ ಟೈಟಲ್ ಟೀಸರ್ ಮೋಡಿ ಮಾಡಿದೆ.