Bappi Lahiri: ಸಂಗೀತ ಮಾಂತ್ರಿಕನಿಗೆ ಬಂಗಾರ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ

Bappi Lahiri Gold love: ಖ್ಯಾತ ಸಂಗೀತಕಾರ ಬಪ್ಪಿ ದಾ ನಿಧನರಾಗಿದ್ದಾರೆ. ಬಪ್ಪಿ ಲಾಹಿರಿಯನ್ನು ಸಂಗೀತ ಉದ್ಯಮದಲ್ಲಿ ಡಿಸ್ಕೋ ರಾಜ ಎಂದು ಕರೆಯಲಾಗುತ್ತಿತ್ತು. ಬಪ್ಪಿ ಲಾಹಿರಿ ಅವರ ಸಂಗೀತದ ಜೊತೆಗೆ ಚಿನ್ನವನ್ನು ಧರಿಸುವ ಶೈಲಿಗೆ ಹೆಸರುವಾಸಿಯಾಗಿದ್ದರು. ಇಷ್ಟಕ್ಕೂ ಅವರು ಅಷ್ಟು ಚಿನ್ನ ಧರಿಸಲು ಕಾರಣ ಏನು ಎಂಬುದು ಇಲ್ಲಿದೆ.

First published:

  • 19

    Bappi Lahiri: ಸಂಗೀತ ಮಾಂತ್ರಿಕನಿಗೆ ಬಂಗಾರ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ

    ಖ್ಯಾತ ಸಂಗೀತಗಾರ ಮತ್ತು ಗಾಯಕ ಬಪ್ಪಿ ಲಾಹಿರಿ ಅವರು ಇಂದು ಮುಂಜಾನೆ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದ ಕಾರಣದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಬಪ್ಪಿ ಲಾಹಿರಿ ಸಂಗೀತಗಾರ ಹಾಗೂ ಸ್ಟೈಲ್ ಐಕಾನ್ ಆಗಿದ್ದರು ಎಂದರೆ ತಪ್ಪಲ್ಲ.

    MORE
    GALLERIES

  • 29

    Bappi Lahiri: ಸಂಗೀತ ಮಾಂತ್ರಿಕನಿಗೆ ಬಂಗಾರ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ

    ಅವರು ಸಾರ್ವಜನಿಕ ಕಾರ್ಯಕ್ರಮ ಅಥವಾ ರೆಕಾರ್ಡಿಂಗ್ ಸಮಯದಲ್ಲಿ ದೇಹದ ಮೇಲೆ ಬಹಳಷ್ಟು ಚಿನ್ನವನ್ನು ಧರಿಸುತ್ತಿದ್ದರು. ಹಾಗಾಗಿ ಸಂಗೀತ ಉದ್ಯಮದಲ್ಲಿ ಅವರನ್ನು ಡಿಸ್ಕೋ ಕಿಂಗ್ ಎಂದು ಕರೆಯಲಾಗುತ್ತಿತ್ತು. ಅವರ ನಿಧನದ ಸುದ್ದಿ ಅವರ ಲಕ್ಷಾಂತರ ಅಭಿಮಾನಿಗಳಿಗೆ ದುಃಖ ತಂದಿದೆ.

    MORE
    GALLERIES

  • 39

    Bappi Lahiri: ಸಂಗೀತ ಮಾಂತ್ರಿಕನಿಗೆ ಬಂಗಾರ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ

    ತಾವು ಚಿತ್ರವನ್ನು ಧರಿಸುವ ಕುರಿತು ಸ್ವತಃ ಬಪ್ಪಿ ಲಾಹಿರಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕೆಲವು ಪ್ರಸಿದ್ಧ ವ್ಯಕ್ತಿಗಳಿಂದ ಅವರು ತುಂಬಾ ಪ್ರಭಾವಿತರಾಗಿದ್ದಾರೆ ಎಂದು ಹೇಳಿದ್ದರು. ಅವುಗಳನ್ನು ನೋಡಿದ ನಂತರ, ಅವರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ತರಲು ಚಿನ್ನವನ್ನು ಧರಿಸಲು ಪ್ರಾರಂಭಿಸಿದೆ ಎಂದಿದ್ದರು.

    MORE
    GALLERIES

  • 49

    Bappi Lahiri: ಸಂಗೀತ ಮಾಂತ್ರಿಕನಿಗೆ ಬಂಗಾರ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ

    ಇನ್ನೊಂದು ವಿಚಾರ ನಿಮಗೆ ಆಶ್ಚರ್ಯವಾಗಬಹುದು, ಬಪ್ಪಿ ದಾ ಅವರ ಹೆಂಡತಿ ಅವರಿಗಿಂತ ಹೆಚ್ಚು ಚಿನ್ನವನ್ನು ಹೊಂದಿದ್ದಾರಂತೆ. 2014ರ ಚುನಾವಣಾ ಅಫಿಡೆವಿಟ್‌ನಲ್ಲಿ ನೀಡಿರುವ ವಿವರಗಳು ಇದಕ್ಕೆ ಸಾಕ್ಷಿಯಾಗಿವೆ. ಅಫಿಡವಿಟ್‌ನಲ್ಲಿ ಬಪ್ಪಿ ದಾ ಮತ್ತು ಅವರ ಪತ್ನಿ ಬಳಿ ಎಷ್ಟು ಚಿನ್ನವಿದೆ ಎಂಬ ವಿವರಗಳಿವೆ.

    MORE
    GALLERIES

  • 59

    Bappi Lahiri: ಸಂಗೀತ ಮಾಂತ್ರಿಕನಿಗೆ ಬಂಗಾರ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ

    ಅಮೇರಿಕನ್ ಪಾಪ್ ತಾರೆ ಎಲ್ವಿಸ್ ಪ್ರೀಸ್ಲಿಯೊಂದಿಗೆ ಬಪ್ಪಿ ದಾ ತುಂಬಾ ಪ್ರಭಾವಿತರಾಗಿದ್ದರು. ಎಲ್ವಿಸ್ ತನ್ನ ಸಂಗೀತ ಕಚೇರಿಯಲ್ಲಿ ಚಿನ್ನದ ಸರವನ್ನು ಧರಿಸಿದ್ದರು. "ನಾನು ಎಲ್ವಿಸ್ ಅನ್ನು ನೋಡಿದಾಗ, ನಾನು ಎಲ್ವಿಸ್‌ನಂತೆ ಪ್ರಸಿದ್ಧ ಮತ್ತು ಯಶಸ್ವಿಯಾಗುತ್ತೇನೆ ಎಂದು ಅಂದುಕೊಂಡು ಹೀಗೆ ಮಾಡಿದೆ ಎಂದು ಬಪ್ಪಿ ಡೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಲ್ಲದೆ, ಅವರು ಚಿನ್ನವನ್ನು ಧರಿಸುವುದು ತುಂಬಾ ಅದೃಷ್ಟವೆಂದು ನಂಬಿದ್ದರು.

    MORE
    GALLERIES

  • 69

    Bappi Lahiri: ಸಂಗೀತ ಮಾಂತ್ರಿಕನಿಗೆ ಬಂಗಾರ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ

    ಚುನಾವಣಾ ಅಫಿಡವಿಟ್ ಪ್ರಕಾರ, ಬಪ್ಪಿ ದಾ ಅವರ ಬಳಿ 754 ಗ್ರಾಂ ಚಿನ್ನ ಮತ್ತು 4.62 ಕೆಜಿ ಬೆಳ್ಳಿ ಇದೆ. ಆದರೆ, ಇದು ಎಂಟು ವರ್ಷಗಳ ಹಿಂದಿನ ಮಾತು. ಈ ಎಂಟು ವರ್ಷಗಳಲ್ಲಿ ಅವರು ಇನ್ನೂ ಹೆಚ್ಚಿನ ಚಿನ್ನ ಖರೀದಿಸಿರಬಹುದು.

    MORE
    GALLERIES

  • 79

    Bappi Lahiri: ಸಂಗೀತ ಮಾಂತ್ರಿಕನಿಗೆ ಬಂಗಾರ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ

    ಬಪ್ಪಿ ಅವರ ಪತ್ನಿ ಚಿತ್ರಾ ಅವರ ಬಳಿ 967 ಗ್ರಾಂ ಚಿನ್ನ ಮತ್ತು 8.9 ಕೆಜಿ ಬೆಳ್ಳಿ ಇತ್ತು. ಇದಲ್ಲದೇ ಅವರ ಬಳಿ 4 ಲಕ್ಷಕ್ಕೂ ಅಧಿಕ ಮೌಲ್ಯದ ವಜ್ರವಿತ್ತು. 2014ರಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಬಪ್ಪಿ ದಾ ಅವರ ಬಳಿಯಿದ್ದ ಚಿನ್ನದ ಮೌಲ್ಯ 35 ಲಕ್ಷ ರೂ. ಬೆಳ್ಳಿಯ ವಿಚಾರಕ್ಕೆ ಬಂದರೆ 2-2.5 ಲಕ್ಷ ರೂ.ಗೂ ಹೆಚ್ಚು.

    MORE
    GALLERIES

  • 89

    Bappi Lahiri: ಸಂಗೀತ ಮಾಂತ್ರಿಕನಿಗೆ ಬಂಗಾರ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ

    ಬಪ್ಪಿ ಲಾಹಿರಿಯನ್ನು ಅಭಿಮಾನಿಗಳಲ್ಲಿ ಬಪ್ಪಿ ದಾ ಎಂದು ಕರೆಯುತ್ತಿದ್ದರು. ಅವರು ಪಶ್ಚಿಮ ಬಂಗಾಳದಲ್ಲಿ ಜನಿಸಿದರು. ಅವರು ಕಳೆದ ವರ್ಷ ಕರೋನಾ ಸೋಂಕಿಗೆ ತುತ್ತಾಗಿದ್ದರು. ಅಲ್ಲದೇ, ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    MORE
    GALLERIES

  • 99

    Bappi Lahiri: ಸಂಗೀತ ಮಾಂತ್ರಿಕನಿಗೆ ಬಂಗಾರ ಅಂದ್ರೆ ಯಾಕೆ ಅಷ್ಟೊಂದು ಇಷ್ಟ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ

    ಬಪ್ಪಿ ದಾ ಅವರು ಬಂಗಾರವನ್ನು ಧರಿಸುವುದು ಬಹಳ ಅದೃಷ್ಟವೆಂದು ನಂಬಿದ್ದರು. ಅದಕ್ಕಾಗಿಯೇ ಅವರು ಹೋದಲ್ಲೆಲ್ಲಾ ತಮ್ಮ ಮೈಮೇಲೆ ಚಿನ್ನವನ್ನು ಧರಿಸುತ್ತಿದ್ದರು.

    MORE
    GALLERIES