ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಜೊತೆ ಕಾಣಿಸಿಕೊಂಡಿದ್ದರು. ಇಬ್ಬರು ದೀಪಿಕಾ ಅವರ ಬರ್ತ್ಡೇ ವೆಕೇಷನ್ಗೆ ತೆರಳಿದ್ದರು. 2007 ರಲ್ಲಿ, ದೀಪಿಕಾ ಫರಾ ಖಾನ್ ಅವರ ಓಂ ಶಾಂತಿ ಓಂ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.
2/ 11
ಇದರಲ್ಲಿ ಶಾರುಖ್ ಖಾನ್ ಜೊತೆ ಕಾಣಿಸಿಕೊಂಡಿದ್ದರು. ದೀಪಿಕಾ ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿ ಬೆಳೆಯುವ ಮೊದಲು, ರೂಪದರ್ಶಿಯಾಗಿದ್ದರು. 2000 ರ ದಶಕದಲ್ಲಿ ಅನೇಕ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.
3/ 11
ದೀಪಿಕಾ ಕಾಣಿಸಿಕೊಂಡ ಮೊದಲ ಜಾಹೀರಾತುಗಳಲ್ಲಿ ಒಂದು ಟೂತ್ಪೇಸ್ಟ್ ಬ್ರ್ಯಾಂಡ್. 2004 ರ ಜಾಹೀರಾತಿನಲ್ಲಿ ಅವರು ಅನಿಮೇಟೆಡ್ ಕ್ಲೋಸ್-ಅಪ್ ಟೂತ್ಪೇಸ್ಟ್ ಜೊತೆಗೆ ಬಾತ್ರೂಮ್ನಲ್ಲಿ ಡ್ಯಾನ್ಸ್ ಮಾಡುತ್ತಿದ್ದರು.
4/ 11
ಆ ನಂತರದ ಕೆಲವು ವರ್ಷಗಳಲ್ಲಿ ದೇಶದ ಕೆಲವು ದೊಡ್ಡ ವಿನ್ಯಾಸಕರ ಫ್ಯಾಶನ್ ಶೋಗಳಲ್ಲಿ ರಾಂಪ್ ವಾಕಿಂಗ್ ಜೊತೆಗೆ, ದೀಪಿಕಾ ಪಡುಕೋಣೆ ಲಿಮ್ಕಾದಂತಹ ಬ್ರ್ಯಾಂಡ್ಗಳಿಗಾಗಿ ತನ್ನ ಟಿವಿ ಜಾಹೀರಾತುಗಳ ಮೂಲಕ ಗಮನ ಜನರ ಸೆಳೆಯುತ್ತಿದ್ದರು.
5/ 11
ಲಿಮ್ಕಾ ಜಾಹೀರಾತಿನಲ್ಲಿ ನಟಿ ಮಳೆಯಲ್ಲಿ ಡ್ಯಾನ್ಸ್ ಮಾಡುವುದು ಮತ್ತು ರಸ್ತೆಯ ಕೆಸರು ನೀರಿನಲ್ಲಿ ಜಿಗಿಯುವುದು ಅಂದು ತುಂಬಾ ಫೇಮಸ್ ಆಗಿತ್ತು.
6/ 11
ಮತ್ತೊಂದು ಹಳೆಯ ಜಾಹೀರಾತಿನಲ್ಲಿ ದೀಪಿಕಾ ಚೆನ್ನೈ ಮೂಲದ ನೈಹಾ ಎಂಬ ಬಟ್ಟೆ ಅಂಗಡಿಯನ್ನು ಪ್ರಚಾರ ಮಾಡಿದ್ದರು. ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುವ ಆಧುನಿಕ ಮಹಿಳೆ ಇನ್ನೂ ತಮ್ಮ ಭಾರತೀಯ ಮೂಲದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಈ ಆ್ಯಡ್ ತೋರಿಸುತ್ತದೆ.
7/ 11
ಮಾಡೆಲಿಂಗ್ ಮಾಡುವ ಮೊದಲು ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಅವರ ಹಿರಿಯ ಮಗಳು ದೀಪಿಕಾ, ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿಯೂ ಗಮನ ಸೆಳೆದಿದ್ದರು.
8/ 11
ಹಲವು ವರ್ಷಗಳ ಮಾಡೆಲಿಂಗ್ ನಂತರ, ದೀಪಿಕಾ ನಟಿಯಾದರು. ದೀಪಿಕಾ ಅವರು ಓಂ ಶಾಂತಿ ಓಂ ಚಿತ್ರದಲ್ಲಿ ನಟಿಸಿ 15 ವರ್ಷಗಳಾಗಿವೆ. ಇದರಲ್ಲಿ ಅವರು ಸಿನಿಮಾ ನಟಿಯಾಗಿ ಕಾಣಿಸಿಕೊಂಡಿದ್ದಾರೆ.
9/ 11
ಅಂದಿನಿಂದ ಅವರು ಬಾಲಿವುಡ್ನಲ್ಲಿ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಜೊತೆ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್, ಶೂಜಿತ್ ಸಿರ್ಕಾರ್ ಜೊತೆ ಪಿಕು ಮಾಡಿದ್ದಾರೆ.
10/ 11
ದೀಪಿಕಾ ಕೊನೆಯದಾಗಿ ಗೆಹರಾಯಿಯಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅನನ್ಯ ಪಾಂಡೆ ಮತ್ತು ಸಿದ್ಧಾಂತ್ ಚತುರ್ವೇದಿ ಕೂಡ ನಟಿಸಿದ್ದಾರೆ.
11/ 11
ಈ ಚಿತ್ರವನ್ನು ಶಕುನ್ ಬಾತ್ರಾ ನಿರ್ದೇಶಿಸಿದ್ದಾರೆ. ದೀಪಿಕಾ ಮುಂದಿನ ಜನವರಿ 25 ರಂದು ಬಿಡುಗಡೆಯಾಗಲಿರುವ ಪಠಾನ್ ಚಿತ್ರದಲ್ಲಿ ಶಾರುಖ್ ಖಾನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.