ತುಪ್ಪರಿವಾಲನ್: ವಿಶಾಲ್ ಮತ್ತು ಪ್ರಸನ್ನ ಅಭಿನಯದ ಚಿತ್ರ 2017 ರಲ್ಲಿ ಬಿಡುಗಡೆಯಾಯಿತು. ಮಿಸ್ಕಿನ್ ನಿರ್ದೇಶಿಸಿದ ಈ ಚಿತ್ರವು ಆಕ್ಷನ್ ಥ್ರಿಲ್ಲರ್ ಆಗಿದ್ದು, ಪೊಲೀಸ್ ತನಿಖೆಯಲ್ಲಿ ಸಹಾಯ ಮಾಡುವ ಪತ್ತೇದಾರಿ ಸುತ್ತ ಕಥೆ ಸುತ್ತುತ್ತದೆ. ಚಿತ್ರವು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾಗೆ ಹಿನ್ನೆಲೆ ಸಂಗೀತವನ್ನು ಎರೋಲ್ ಕೊರೆಲ್ಲಿ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಒಂದು ಹಾಡು ಇರಲಿಲ್ಲ.
ಉನ್ನೈ ಪೋಲ್ ಒರುವನ್: ಕಮಲ್ ಹಾಸನ್ ಮತ್ತು ಮೋಹನ್ ಲಾಲ್ ಅಭಿನಯದ ಈ ಚಿತ್ರ 2009 ರಲ್ಲಿ ಬಿಡುಗಡೆಯಾಯಿತು. ನಸುರುದ್ದೀನ್ ಷಾ ಮತ್ತು ಅನುಪಮ್ ಖೇರ್ ಅಭಿನಯದ ಹಿಂದಿ ಚಲನಚಿತ್ರ 'ವೆಡ್ನೆಸ್ ಡೇ' ರಿಮೇಕ್ ಆಗಿದ್ದ ಈ ಚಿತ್ರವನ್ನು ಚಕ್ರಿ ಟೋಲೆಟಿ ನಿರ್ದೇಶಿಸಿದ್ದಾರೆ. ನಂತರ ಈ ಚಿತ್ರವನ್ನು ಮಲಯಾಳಂನಲ್ಲೂ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಶ್ರುತಿ ಹಾಸನ್ ಸಂಗೀತ ನೀಡಿದ್ದಾರೆ. ಆದರೆ, ಈ ಸಿನಿಮಾದಲ್ಲೂ ಒಂದು ಹಾಡು ಇರಲಿಲ್ಲ.
ಸೂಪರ್ ಡಿಲಕ್ಸ್: ತ್ಯಾಗರಾಜನ್ ಕುಮಾರರಾಜ ನಿರ್ದೇಶನದ ಚಿತ್ರ 2019 ರಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ವಿಜಯ್ ಸೇತುಪತಿ, ಸಮಂತಾ, ಫಹದ್ ಫಾಸಿಲ್, ರಮ್ಯಾ ಕೃಷ್ಣನ್ ಮತ್ತು ಮಿಸ್ಕಿನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಗಾಢ ಹಾಸ್ಯವನ್ನು ಹೊಂದಿತ್ತು ಮತ್ತು ನಾಲ್ಕು ವಿಭಿನ್ನ ಪಾತ್ರಗಳ ಜೀವನದ ಘಟನೆಗಳನ್ನು ಕೇಂದ್ರೀಕರಿಸಿದ ಕಥೆಯೊಂದಿಗೆ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದು, ಇದರಲ್ಲಿ ಯಾವುದೇ ಹಾಡುಗಳಿಲ್ಲ.
ಪಯಣಂ: ನಾಗಾರ್ಜುನ ಅಕ್ಕಿನೇನಿ ಮತ್ತು ಪ್ರಕಾಶ್ ರಾಜ್ ಅಭಿನಯದ 'ಪಯಣಂ' 2011 ರಲ್ಲಿ ಬಿಡುಗಡೆಯಾಯಿತು. ರಾಧಾ ಮೋಹನ್ ನಿರ್ದೇಶನದ ಚಿತ್ರದ ಕಥೆಯು ವಿಮಾನ ಅಪಹರಣದ ಘಟನೆಯನ್ನು ಆಧರಿಸಿದೆ. ಈ ಚಿತ್ರವು ತಮಿಳು ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ರಿಲೀಸ್ ಆಗಿ, ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಚಿತ್ರದ ಹಿನ್ನೆಲೆ ಸಂಗೀತವನ್ನು ಪ್ರವೀಣ್ ಮಣಿ ಮಾಡಿದ್ದು, ಚಿತ್ರದಲ್ಲಿ ಯಾವುದೇ ಹಾಡು ಇಲ್ಲ.